WhatsApp Tips: ನಿಮಗೊತ್ತಾ ಪ್ರತಿ ತಿಂಗಳು ವಾಟ್ಸಾಪ್ ತನ್ನ ವರದಿಯನ್ನು ಒಂದಲ್ಲ ಒಂದು ಕಾರಣಗಳೊಂದಿಗೆ ಪ್ರಕಟಿಸುತ್ತಿರುತ್ತದೆ. ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು ಬ್ಯಾನ್ ಮಾಡುತ್ತದೆ. ಬಳಕೆದಾರರ ಸುರಕ್ಷತೆಯ ಬಗ್ಗೆ ಕಾಳಜಿವಹಿಸಿ ಈ ಕೆಲಸವನ್ನು ಮಾಡಲಾಗುತ್ತದೆ. ನೀವೆಲ್ಲರೂ WhatsApp ಅನ್ನು ಬಳಸುವುದರಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಂತಹ ತಪ್ಪುಗಳು ಪದೆಪದೇ ಆಗುವುದರಿಂದ ನಿಮ್ಮ WhatsApp ಖಾತೆಯನ್ನು ಬ್ಯಾನ್ ಮಾಡಲಾಗುತ್ತದೆ. ಆ ಸಾಮಾನ್ಯವಾದ ತಪ್ಪುಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ನೀವು ನಿರಂತರವಾಗಿ ಸ್ಪ್ಯಾಮ್ ಗಾಗಿ WhatsApp ಖಾತೆಯನ್ನು ಬಳಸುತ್ತಿದ್ದರೆ ಅದನ್ನು ನಿಲ್ಲಿಸಿ. ಇಂತಹ ಮೆಸೇಜ್ ಗಳನ್ನು ಮಾಡಲು ಅನೇಕ ಜನರು ಗುಂಪುಗಳನ್ನು ಮಾಡಿಕೊಳ್ಳುತ್ತಾರೆ. ನೀವು ಹೀಗೆ ಮಾಡಿದರೆ ನಿಮ್ಮ ವಾಟ್ಸಾಪ್ ಖಾತೆ ತೊಂದರೆಗೆ ಸಿಲುಕಬಹುದು.
2. ಬೇರೆ ಬಳಕೆದಾರರು ಒಂದು ದಿನದಲ್ಲಿ ಹಲವಾರು ಬಾರಿ ನಿಮ್ಮ WhatsApp ಖಾತೆಯ ಮೇಲೆ ರಿಪೋರ್ಟ್ ಮಾಡಿದರೆ ಅಂತಹ WhatsApp ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗುತ್ತದೆ.
3. ನೀವು WhatsApp ನಲ್ಲಿ ಹಲವಾರು ಗ್ರೂಪ್‌ನ ಸದಸ್ಯರಾಗಿದ್ದರೆ ಮತ್ತು ಅದರಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದರೂ ಖಾತೆಯನ್ನು ಬ್ಯಾನ್ ಮಾಡಲಾಗುತ್ತದೆ.
4. ಆಂಡ್ರಾಯ್ಡ್ ಫೋನ್‌ಗಳಲ್ಲಿ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ ವಾಟ್ಸಾಪ್ ಅಲ್ಲಿ ಅಪ್ಲೋಡ್ ಮಾಡುತ್ತಿದ್ದರೂ ತಪ್ಪೇ ಏಕೆಂದರೆ ಈ ರೀತಿಯ ಫೈಲ್‌ಗಳಲ್ಲಿ ಮಾಲ್‌ವೇರ್ ಇರುತ್ತದೆ. ಇಂತಹ ಅಪ್ಲಿಕೇಶನ್‌ಗಳು ಆಗಾಗ್ಗೆ ಹಾನಿಕಾರಕ ಲಿಂಕ್‌ಗಳನ್ನು ಇತರ ಬಳಕೆದಾರರಿಗೆ ನೇರವಾಗಿ ಕಳುಹಿಸುತ್ತವೆ. ಆದ್ದರಿಂದ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ.
5. ನೀವು ಬೇರೆಯವರ ಹೆಸರಿನಲ್ಲಿ WhatsApp ಖಾತೆಯನ್ನು ತೆರೆದಿದ್ದರೆ ಅಂತಹ ಖಾತೆಯ ಬಗ್ಗೆ ಕಂಪನಿಯು ಕಂಡುಕೊಂಡರೆ ನೀವು ಸಮಸ್ಯೆಗಳಿಗೆ ಸಿಲುಕಬಹುದು.
6. ನೀವು WhatsApp Delta, GBWhatsApp ಅಥವಾ WhatsApp Plus ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ನಿಮ್ಮ ಮೂಲ WhatsApp ಖಾತೆಯನ್ನು ನಿಷೇಧಿಸಬಹುದು.
7. ನಿಮ್ಮ ಖಾತೆಯ ಬಗ್ಗೆ ಹಲವಾರು ಜನರು ದೂರುಗಳು ಅಥವಾ ರಿಪೋರ್ಟ್ ಅನ್ನು ಮಾಡಿದ್ದಲ್ಲಿ ನಿಮ್ಮ WhatsApp ಖಾತೆಯನ್ನು ಬ್ಯಾನ್ ಮಾಡಬಹುದು.
8. ನಿಮ್ಮ ಖಾತೆಯಲ್ಲಿ ಹೆಚ್ಚಿನ ಅಕ್ರಮ, ಅಶ್ಲೀಲ ಅಥವಾ ಇತರ ಬಳಕೆದಾರರಿಗೆ ಯಾವುದೇ ರೀತಿಯ ಬೆದರಿಕೆಯನ್ನುಂಟು ಮಾಡುವುದಕ್ಕಾಗಿ ನೀವು WhatsApp ಅನ್ನು ಬಳಕೆ ಮಾಡಿದರೆ ನಿಮ್ಮ ಖಾತೆಯನ್ನು ನಿಷೇಧಿಸಲಾಗುತ್ತದೆ.