digit zero1 awards

ಎಚ್ಚರಿಕೆ: ಇನ್ಮೇಲೆ ನೀವು ಫೇಸ್ಬುಕ್ ಬಳಸುವಾಗ ಈ ಅಪಾಯಕಾರಿ ತಪ್ಪುಗಳನ್ನು ಮಾಡಲೇಬೇಡಿ

ಎಚ್ಚರಿಕೆ: ಇನ್ಮೇಲೆ ನೀವು ಫೇಸ್ಬುಕ್ ಬಳಸುವಾಗ ಈ ಅಪಾಯಕಾರಿ ತಪ್ಪುಗಳನ್ನು ಮಾಡಲೇಬೇಡಿ
HIGHLIGHTS

ಯಾವುದೇ ಅಶ್ಲೀಲ ವಿಡಿಯೋ, ಫೋಟೋ ಮತ್ತು ಮೆಸೇಜ್ಗಳನ್ನು ಮಾಡದಿರಿ ಏಕೆಂದರೆ ಫೇಸ್ಬುಕ್ ಇವುಗಳನ್ನು ಪರಿಶೀಲಿಸುತ್ತಿರುತ್ತದೆ

ಇಂದಿನ ದಿನಗಳಲ್ಲಿ ನೀವು ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಏನನ್ನು ಹಂಚಿಕೊಳ್ಳುತ್ತೀರಿ ಎಂಬುದನ್ನು ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಸಣ್ಣ ಪುಟ್ಟ ಮೋಜು ಮಸ್ತಿಗಾಗಿ ಮಾಡಿದ ಯಾವುದೋ ಮಾಹಿತಿ ಮುಂದೆ ನಿಮ್ಮ ಜೀವನಕ್ಕೆ ಮುಳುವಾಗಿ ನಿಮ್ಮ ಶಾಂತಿ ನಾಶವಾಗಬಹುದು ಎಂಬುದು ನಿಮಗೆ ಗೊತ್ತಿಲ್ಲದಿರಬವುದು. ನೀವು ಸಾಧ್ಯವಾದ ಮಟ್ಟಿಗೆ ಎಂದಿಗೂ ಯೋಚಿಸದೇ ಅತ್ಯಂತ ಮುಗ್ಧ ಮತ್ತು ಒಳ್ಳೆಯ ಉದ್ದೇಶಿತ ಪೋಸ್ಟ್ಗಳನ್ನು ಬಳಸುವಾಗಲು ಸ್ವಲ್ಪ ಹೆಚ್ಚರಿಕೆಯಿಂದಿರಿ. ಇಂದಿನ ಟೆಕ್ನಾಲಜಿ ಪ್ರತಿ ವಲಯದಲ್ಲೂ ಪ್ರಗತಿಯನ್ನು ಕಾಣುತ್ತಿದ್ದರು ಕೆಲವರು ಇದರ ದುರುಪಯೋಗಗೊಳಿಸಿ ಜನ ಸಾಮಾನ್ಯರ ಮಾಹಿತಿಯೊಂದಿಗೆ ಆಟವಾಡುವುದು ಟಿವಿ, ಪತ್ರಿಕೆಗಳಲ್ಲಿ ನೀವೀಗಾಗಲೇ ಕೇಳಿರುತ್ತೀರಿ. ಆದ್ದರಿಂದ ಮುಖ್ಯವಾಗಿ ಈ 5 ವಿಷಯಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬೇಡಿ.

 

ಮುಖ್ಯವಾಗಿ ನಿಮ್ಮ ಆಪ್ತರಾಗಿರಬವುದು ಅಥವಾ ಸ್ನೇಹಿತರಾಗಿರಬವುದು ಅಥವಾ ಕುಟುಂಬದವರಾಗಿರಬವುದು ಅಲ್ಲದೆ  ಸಹೋದ್ಯೋಗಿಗಳೊಂದಿಗೆ ನೀವು ಮಾಡುವ ಕೆಲಸಗಳ ಬಗ್ಗೆ ಅಥವಾ ಆಫೀಸ್ಗಳ ಬಗ್ಗೆ ಇಂಟರ್ನೆಟ್ ಜಾಲದಲ್ಲಿ  ಪೋಸ್ಟ್ ಮಾಡಬೇಕಾಗಿಲ್ಲ. ಆದ್ದರಿಂದ ಈ ರೀತಿಯ ಕುರುಡು ಪೋಸ್ಟ್ ಮಾಡುವ ಮೊದಲು ಯೋಚಿಸಿ. ನೀವು ಫೇಸ್‌ಬುಕ್‌ನಲ್ಲಿ ಏನಾದರು  ಪೋಸ್ಟ್ ಮಾಡಿದ ನಂತರ ಅದನ್ನು ಪುನಃ ಒಮ್ಮೆ ಪರಿಶೀಲಿಸಿಕೊಳ್ಳಿ. ಏಕೆಂದರೆ ಆ ಪೋಸ್ಟ್ ಮಾಡುವ ಬಟನ್ ಒತ್ತುವ ಮೊದಲು ನೀವು ಆ ಪೋಸ್ಟಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಏನೇನು ಹಂಚಿಕೊಳ್ಳುತ್ತಿದ್ದೀರಿ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ.

ಸ್ನೇಹಿತರೇ ಎಂದಿಗೂ ಕುಡಿದು ವಾಹನ ಚಲಾಯಿಸುವುದು ಒಳ್ಳೆಯದಲ್ಲವೆಂದು ನೆನಪಿದೆಯೋ ಅದೇ ರೀತಿ ಕುಡಿದಾಗ ಫೇಸ್‌ಬುಕ್ ಅನ್ನು ಎಂದಿಗೂ ಬಳಸಬೇಡಿ. ಕುಡಿದ ನಂತರ ಫೇಸ್‌ಬುಕ್ ಬಳಸುವುದರಿಂದ ನೀವು ನಿಮ್ಮ ಪರ್ಸನಲ್ ಮಾಹಿತಿಗಳನ್ನು ಪೋಸ್ಟ್ ಮಾಡಲು ಅಥವಾ ಈವರೆಗೆ ನಿಮಗೆ ಗೊತ್ತಿರದ ಜನರಿಗೆ ಮೆಸೇಜ್, ಫೋಟೋ, ವಿಡಿಯೋ ಆಕಸ್ಮಿಕವಾಗಿ ಕಳುಹಿಸುವ ಸಂದರ್ಭಗಳು ಹೆಚ್ಚು ಕೇಳಿ ಬಂದಿರೋದು ನಿಮಗೆ ತಿಳಿದೇಯಿದೆ. ಇಲ್ಲಿ ವಾಸ್ತವವಾಗಿ ಜನರು ಕುಡಿದಾಗ ತಮ್ಮ ಫೋನ್‌ನಲ್ಲಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದನ್ನು ತಡೆಯಲು ಮೀಸಲಾದ ಅಪ್ಲಿಕೇಶನ್‌ಗಳಿವೆ. 

ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ನೀವು ಸುಮಾರು 600 ಜನರನ್ನು ಹೊಂದಿದ್ದರಿಂದ ನೀವು 600 ಸ್ನೇಹಿತರನ್ನು ಹೊಂದಿದ್ದೀರಿ ಎಂದರ್ಥವಲ್ಲ. ಆದ್ದರಿಂದ ನಿಮ್ಮ ಫೇಸ್‌ಬುಕ್ ಖಾತೆಗೆ ಬೇಕಾಬಿಟ್ಟಿ ಯಾರನ್ನೂ ಅಥವಾ ಬಂದ ಎಲ್ಲಾ ರಿಕ್ವೆಸ್ಟ್ ಒಪ್ಪುವುದನ್ನು ನಿಲ್ಲಿಸಿಬಿಡಿ. ಇದು ನೀವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ ಅಷ್ಟೇ. ಯಾವುದೇ ಅಪರಿಚಿತ ವ್ಯಕ್ತಿಗೆ ಪ್ರವೇಶ ಪಡೆಯಲು ನೀವು ಅನುಮತಿಸಬಾರದು.

ಕೆಲವರು ಹೆಚ್ಚು ಕಡಿಮೆ ದಡ್ಡರಂತೆ ವರ್ತಿಸೋದು ನೋಡಿರಬವುದು. ನಿಮ್ಮ ಮನೆಯ ವಿಳಾಸ, ಕಚೇರಿ ಸಮಯ ಮತ್ತು ಇತರ ವಿವರಗಳಂತಹ ಮಾಹಿತಿಯು ವಾಡಿಕೆಯಂತೆ ಕಾಣಿಸಬಹುದು. ಆದರೆ ಪೋಸ್ಟ್ ಮಾಡಲು ಕಾಮೆಂಟ್ ಮಾಡುವಾಗಲೂ ಸಹ ಫೇಸ್‌ಬುಕ್‌ನಲ್ಲಿ ಅಂತಹ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಡೆಯಿರಿ. ಈ ಮಾಹಿತಿಯು ನಿಮ್ಮ ಹಿಂಬಾಲಕರಿಗೆ ಚಿನ್ನದ ಗಣಿ ಆಗಿರಬಹುದು. ಅದರಿಂದ ಮುಂದೊಂದು ದಿನ ಈ ಗುಂಡಿಗೆ ನೀವೇ ಬೀಳಬಾವುದು. ಪೋಸ್ಟ್ ಮಾಡಿದ ಈ ಮಾಹಿತಿಗಳು ಫಾಲೊವೆರ್ಗಳಿಗೆ ಚಿನ್ನದ ಗಣಿಯಾಗಾದರೆ ನಿಮಗೆ ಪ್ರಾಣ ಸಂಕಟವಾಗಬವುದು.

ನೀವು ಹೊಸ ವಾಹನವನ್ನು ಖರೀದಿಸಿದರೆ ಅಥವಾ ಯಾವುದೋ ಲಾಟರಿ ಗೆದ್ದಿದ್ದರೆ ಅಥವಾ ಕೆಲವು ಪ್ರಮುಖ ಹೂಡಿಕೆಗಳನ್ನು ಮಾಡಿದರೆ ಯಾವಾಗಲೂ ನಿಮ್ಮ ಹಣದ ವಿಷಯಗಳನ್ನು ಖಾಸಗಿಯಾಗಿರಿಸಿಕೊಳ್ಳಿ. ಅವುಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದರಿಂದ ನೀವು ಯೋಚಿಸದ ಪರಿಣಾಮಗಳನ್ನು ಬೀರಬಹುದು. ಫೇಸ್‌ಬುಕ್‌ನಲ್ಲಿ ಯಾರನ್ನೂ ಮಾತಿನಿಂದ ನಿಂದಿಸಬೇಡಿ ಅಥವಾ ಹೊಲಸು ಪದಗಳನ್ನು ಬರೆಯಬೇಡಿ. ಜನರು ಯಾವಾಗಲೂ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬಹುದು. ಮತ್ತು ನಂತರ ಅದನ್ನು ನಿಮ್ಮ ವಿರುದ್ಧ ಬಳಸಬಹುದು.

ನಿಮ್ಮ ಪಾಸ್‌ಪೋರ್ಟ್, ಪ್ರಮಾಣಪತ್ರಗಳು, OTP, ಪದವಿಗಳು ಮುಂತಾದ ವೈಯಕ್ತಿಕ ದಾಖಲೆಗಳ ಫೋಟೋಗಳನ್ನು ಹಂಚಿಕೊಳ್ಳುವುದು ಮತ್ತೊಂದು ದೊಡ್ಡ ಸಂಖ್ಯೆಯಾಗಿದೆ. ಇವುಗಳು ವೈಯಕ್ತಿಕ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡುವುದು ಉತ್ತಮ. ಅಲ್ಲದೆ ನಿಮ್ಮ ರಜೆಯನ್ನು ಆಚರಿಸಲು ಅಥವಾ ಅದರ ಪ್ರಾರಂಭಿಸಿದಾಗ ಅದಕ್ಕೆ ಸಂಬಂಧಿಸಿದ ನಿಮ್ಮ ತಂಗುದಾಣ, ಹೋಟೆಲ್ ಮಾಹಿತಿ ಜೊತೆಗೆ ವಿಮಾನ ಅಥವಾ ಬಸ್, ಟ್ರೈನ್ ಟಿಕೆಟ್‌ಗಳ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದು ಅಪಾಯಕಾರಿಯಾಗಿದೆ.

ನಿಮ್ಮ ಫೇಸ್‌ಬುಕ್ ಸ್ನೇಹಿತರ ಪಟ್ಟಿಯಲ್ಲಿ ಯಾರ್ಯಾರು ನಿಜವಾಗಿಯೂ ಇರಬೇಕು ಅಥವಾ ಇರಬಾರದು ಎಂದು ಪರಿಶೀಲಿಸಲು ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಮತ್ತೆ ಮತ್ತೆ ಪರಿಶೀಲಿಸಿಕೊಳ್ಳಿ. ಸಾಮಾನ್ಯವಾಗಿ ನೀವು ಅರಿಯದವರು ನಿಮ್ಮ ಪೋಸ್ಟ್‌ಗಳನ್ನು ಇಷ್ಟಪಟ್ಟಿದೆಯಾದರು ಅವರನ್ನು ನೀವೇಕೆ ಸಂಪರ್ಕ ಹೊಂದಲು ಬಯಸುತ್ತೀರಿ ಎಂಬುದಕ್ಕೆ ಬಹಳ ಕಡಿಮೆ ಕಾರಣವಿರಬವುದು ಆದರೂ ಸಾಧ್ಯವಾದರೆ ಅವರಿಂದ ದೂರವಿರುವುದು ಒಳಿತು. ಅಶ್ಲೀಲ ವಿಡಿಯೋ, ಫೋಟೋ ಮತ್ತು ಮೆಸೇಜ್ಗಳನ್ನು ಮಾಡದಿರಿ ಫೇಸ್ಬುಕ್ ಇವುಗಳನ್ನು ಹೆಚ್ಚಾಗಿ ಗಮನವರಿಸುತ್ತಿರುತ್ತದೆ. ಇದರಿಂದ ನಿಮ್ಮ ಖಾತೆ ಬಂದ್ ಸಹ ಆಗಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo