RBI ತನ್ನದೆಯಾದ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ (Digital India Trust Agency) ಅನ್ನು ಸ್ಥಾಪಿಸಿದೆ.
RBI ಈಗಾಗಲೇ ಇದಕ್ಕೆ ಸಂಬಂಧಿತ ಕಾರ್ಯಗಳನ್ನು ಆರಂಭಿಸಿದ್ದು 442 ಅಪ್ಲಿಕೇಶನ್‌ಗಳನ್ನು ಪರೀಕ್ಷಿಸುತ್ತಿದೆ.
ಡಿಜಿಟಲ್ ಲೋನ್ ಆಪ್‌ಗಳನ್ನು ಪರಿಶೀಲಿಸಲು ಈ Digital India Trust Agency ಮುಖ್ಯ ಕೇಂದ್ರವಾಗುವುದಾಗಿ RBI ಹೇಳಿದೆ.
Digital India Trust Agency: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಆನ್ಲೈನ್ ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಡಿಜಿಟಲ್ ಸಾಲ ನೀಡುವ ಅಪ್ಲಿಕೇಷನ್‌ಗಳ ವಂಚನೆಗಳಿಗೆ ಬ್ರೇಕ್ ಹಾಕಲು RBI ತನ್ನದೆಯಾದ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ (Digital India Trust Agency) ಅನ್ನು ಸ್ಥಾಪಿಸಿದೆ. ಈ ಉದ್ದೇಶಿತ ಏಜೆನ್ಸಿ ಅನ್ನು ಮುಖ್ಯವಾಗಿ ಕಾನೂನುಬದ್ದ ಮತ್ತು ನಿಯಮಗಳನ್ನು ಅನುಸರಿಸುವ ಸಾರ್ವಜನಿಕ ನೋಂದಾವಣೆ ರಚಿಸುವ ಮೂಲಕ ಅಕ್ರಮ ಡಿಜಿಟಲ್ ಸಾಲ ನೀಡುವ ಅಪ್ಲಿಕೇಷನ್‌ಗಳನ್ನು ನಿಯಂತ್ರಿಸಿ ನಿರ್ಬಂಧಿಸುವ ಗುರಿಯನ್ನು ಹೊಂದಿರುತ್ತದೆ. ಈ ಡಿಜಿಟಲ್ ಲೋನ್ ಆಪ್‌ಗಳನ್ನು ಪರಿಶೀಲಿಸಲು ಈ Digital India Trust Agency ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು RBI ಹೇಳಿದೆ.
ಈ Digital India Trust Agency ಹೇಗೆ ಕಾರ್ಯನಿರ್ವಹಿಸುತ್ತದೆ?
Digital India Trust Agency ಈ ಪರಿಶೀಲನಾ ಪ್ರಕ್ರಿಯೆಯು ಅಪ್ಲಿಕೇಶನ್‌ಗಳು ನಿಯಮಗಳಿಗೆ ಬದ್ಧವಾಗಿದೆ ಮತ್ತು ನೈತಿಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಪರಿಶೀಲಿಸಿದ ನಂತರವಷ್ಟೇ ಅಪ್ಲಿಕೇಶನ್‌ಗಳು “DIGITA Approved” ಎಂಬ ಸೀಲ್ ಪಡೆಯುತ್ತವೆ. ಸಾಲಗಾರರಿಗೆ ಅವುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
Digital India Trust Agency ಪರಿಶೀಲನೆ ಇಲ್ಲದ ಅಪ್ಲಿಕೇಶನ್‌ಗಳಿಗೆ ದಂಡ ವಿಧಿಸಬಹುದು. ಕಾನೂನು ಜಾರಿಗಳು ಅವುಗಳನ್ನು ಅನಧಿಕೃತವೆಂದು ಪರಿಗಣಿಸಬಹುದು ಎಂದು ಮೂಲಗಳು ಸೂಚಿಸುತ್ತವೆ. ಇದು ಹಣಕಾಸಿನ ವಂಚನೆಗಳನ್ನು ಎದುರಿಸಲು ಮತ್ತು ಡಿಜಿಟಲ್ ಸಾಲ ನೀಡುವ ಜಾಗದಲ್ಲಿ ಸಾಲಗಾರರನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ಮೂಲಕ ನೀವು ಪ್ರಸ್ತುತ ಬಳಸುತ್ತಿರುವ ಹಲವಾರು ಅಪ್ಲಿಕೇಶನ್ಗಳು ಈ ಪಟ್ಟಿಗೆ ಸೇರಿರಬಹುದು.
Also Read: Reliance Jio ಸದ್ದಿಲ್ಲದೇ ₹234 ರೂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ! ಇದರ ಪ್ರಯೋಜನಗಳೇನು?
ಅನಧಿಕೃತ ಅಪ್ಲಿಕೇಶನ್‌ಗಳಿಗೆ ನಡುಕ ನೀಡಿದ RBI
ಸಾಮನ್ಯವಾಗಿ ಅತಿ ಹೆಚ್ಚಾಗಿ ಜನ ಸಾಮಾನ್ಯರು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗಳಿಂದ ಡಿಜಿಟಲ್ ಸಾಲವನ್ನು ಪಡೆಯಲು ಹೆಚ್ಚು ಆಸಕ್ತರಾಗಿರುತ್ತಾರೆ ಈ ಮೂಲಕ RBI ಮೊದಲು ಈ ಸ್ಟೋರ್ಗಳನ್ನು ಸ್ವಚ್ಛಗೊಳಿಸುವುದು ಅತಿ ಮುಖ್ಯವೆಂದು ಪರಿಗಣಿಸಿ ಅನಧಿಕೃತ ಲೋನ್ ನೀಡುವ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲು ಸಜ್ಜಾಗಿದೆ.
RBI ಈಗಾಗಲೇ ಇದಕ್ಕೆ ಸಂಬಂಧಿತ ಕಾರ್ಯಗಳನ್ನು ಆರಂಭಿಸಿದ್ದು IT ಸಚಿವಾಲಯದೊಂದಿಗೆ 442 ಅಪ್ಲಿಕೇಶನ್‌ಗಳನ್ನು ಪರೀಕ್ಷಿಸುವಂತೆ Digital India Trust Agency ಕೇಳಿಕೊಂಡಿದೆ. ಈ ಸಹಯೋಗವು ಈಗಾಗಲೇ ಕಳೆದ ವರ್ಷದಲ್ಲಿ 2,200 ಅನುಮಾನಾಸ್ಪದ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು Google ತೆಗೆದುಹಾಕಿರುವುದನ್ನು ನೋಡಿದೆ. RBI ಮತ್ತು ಟೆಕ್ ದೈತ್ಯರ ಈ ಸಂಯೋಜಿತ ಪ್ರಯತ್ನಗಳು ಭಾರತೀಯ ಗ್ರಾಹಕರಿಗೆ ಸುರಕ್ಷಿತ ಮತ್ತು ಹೆಚ್ಚು ಪಾರದರ್ಶಕ ಡಿಜಿಟಲ್ ಸಾಲ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile