digit zero1 awards

China Apps: ಮತ್ತೇ ಶಾಕ್ ನೀಡಿದ ಭಾರತ! ಒಟ್ಟಿಗೆ 232 ಚೀನಾ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರಿದ ಸರ್ಕಾರ!

China Apps: ಮತ್ತೇ ಶಾಕ್ ನೀಡಿದ ಭಾರತ! ಒಟ್ಟಿಗೆ 232 ಚೀನಾ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರಿದ ಸರ್ಕಾರ!
HIGHLIGHTS

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY)ಕೆಲವು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ.

ಮೊಬೈಲ್ ಆ್ಯಪ್‌ಗಳನ್ನು 232 ಭಾರತ ಸರ್ಕಾರ ಏಕಕಾಲದಲ್ಲಿ ಬ್ಲಾಕ್ ಮಾಡುವ ಮೂಲಕ ಚೀನಾಗೆ ಮತ್ತೊಮ್ಮೆ ಶಾಕ್ ನೀಡಿದೆ!

ಭಾರತ ಸರ್ಕಾರ ಇದೀಗ ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್​ಗಳನ್ನು ನಿಷೇಧಿಸಲು ತುರ್ತು ಕ್ರಮ ಕೈಗೊಂಡಿದೆ. ಇದರಲ್ಲಿ 138 ಬೆಟ್ಟಿಂಗ್ ಆ್ಯಪ್​ಗಳು ಮತ್ತು 94 ಲೋನ್ ಆ್ಯಪ್​ಗಳು ಸೇರಿವೆ. ಮೊಬೈಲ್ ಆ್ಯಪ್‌ಗಳನ್ನು 232 ಭಾರತ ಸರ್ಕಾರ ಏಕಕಾಲದಲ್ಲಿ ಬ್ಲಾಕ್ ಮಾಡುವ ಮೂಲಕ ಚೀನಾಗೆ ಮತ್ತೊಮ್ಮೆ ಶಾಕ್ ನೀಡಿದೆ! ದೃಢವಾದ ನಿಲುವನ್ನು ತೆಗೆದುಕೊಂಡ ಭಾರತ ಸರ್ಕಾರವು ಮತ್ತೊಮ್ಮೆ 232 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಬೆಟ್ಟಿಂಗ್, ಜೂಜಾಟ ಮತ್ತು ಅನಧಿಕೃತ ಸಾಲ ಸೇವೆಯಲ್ಲಿ ತೊಡಗಿಕೊಂಡಿವೆ. ಇವುಗಳನ್ನು ಚೀನೀ ಕಂಪನಿಗಳು ಸೇರಿದಂತೆ ವಿದೇಶಿ ಕಂಪನಿಗಳು ನಡೆಸುತ್ತಿವೆ.  

ಚೀನಾ ಅಪ್ಲಿಕೇಶನ್‌ಗಳ ನಿಷೇಧ

ಈ ಅಪ್ಲಿಕೇಶನ್‌ಗಳನ್ನು ಚೀನಾದ ಜೊತೆಗೆ ಹಲವಾರು ಇತರ ವಿದೇಶಿ ಸಂಸ್ಥೆಗಳು ಬಳಸುತ್ತಿವೆ. ಸರ್ಕಾರದ ಪ್ರಕಾರ ಈ ಅಪ್ಲಿಕೇಶನ್‌ಗಳು ದೇಶದ ಆರ್ಥಿಕ ಸ್ಥಿರತೆಗೆ ಅಪಾಯವನ್ನುಂಟು ಮಾಡುತ್ತಿವೆ ಎನ್ನುವ ಕಾರಣದಿಂದಾಗಿ ಮುಚ್ಚಲಾಗಿದೆ. 232 ಆ್ಯಪ್‌ಗಳಲ್ಲಿ ಯಾವುದನ್ನು ಬ್ಲಾಕ್ ಮಾಡಿದೆ ಎನ್ನುವ ಮಾಹಿತಿಯನ್ನು ಸರ್ಕಾರ ಇನ್ನೂ ನೀಡಬೇಕಿದೆ. ಈ ಅಪ್ಲಿಕೇಶನ್‌ಗಳು ನಾಗರಿಕರ ಪ್ರೊಫೈಲ್‌ಗಾಗಿ ಬಳಕೆದಾರರ ಡೇಟಾವನ್ನು ವಿದೇಶಿ ರಾಷ್ಟ್ರಗಳಿಗೆ ತಪ್ಪಾಗಿ ವರ್ಗಾವಣೆ ಮಾಡುವ ಮೂಲಕ ತಪ್ಪಿತಸ್ಥರೆಂದು ಕಂಡುಬಂದಿದೆ. ಫೆಬ್ರವರಿ 4 ರಂದು ಬೆಟ್ಟಿಂಗ್, ಜೂಜಾಟ ಮತ್ತು ಅಕ್ರಮ ಹಣ ವರ್ಗಾವಣೆಯಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಲಾಗುವ 138 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಲಾಗಿದೆ.

ಭದ್ರತಾ ಕಾರಣಗಳಿಗಾಗಿ 232 ಮೊಬೈಲ್ ಅಪ್ಲಿಕೇಶನ್‌ಗಳ ನಿಷೇಧ

ಇದರೊಂದಿಗೆ ಅನಧಿಕೃತ ಸಾಲ ಸೇವೆಯಲ್ಲಿ ತೊಡಗಿಕೊಂಡಿರುವ 94 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಆದೇಶವನ್ನು ಮಾಡಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನಗಳನ್ನು ಅನುಸರಿಸಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY)ಕೆಲವು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ. ಚೀನಾದಂತಹ ದೇಶಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ಭಾರತ ಸರ್ಕಾರವು ಪ್ರತಿ ರಂಗದಿಂದ ನಿರಂತರವಾಗಿ ಅದನ್ನು ನಾಶಪಡಿಸುತ್ತಿದೆ. ಕಳೆದ ವರ್ಷ ಚೀನಾ ಸೇರಿದಂತೆ ಹಲವು ದೇಶಗಳು ತಯಾರಿಸಿದ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ.

ಈ ಅಪ್ಲಿಕೇಶನ್‌ಗಳು ನಾಗರಿಕರ ಪ್ರೊಫೈಲ್‌ಗಾಗಿ ಬಳಕೆದಾರರ ಡೇಟಾವನ್ನು ವಿದೇಶಿ ರಾಷ್ಟ್ರಗಳಿಗೆ ತಪ್ಪಾಗಿ ವರ್ಗಾವಣೆ ಮಾಡುವ ಮೂಲಕ ತಪ್ಪಿತಸ್ಥರೆಂದು ಕಂಡುಬಂದಿದೆ. ಇದರ ಜೊತೆಗೆ ಡೇಟಾ ಸುರಕ್ಷತೆಯ ಕಾಳಜಿಯನ್ನು ಉಲ್ಲೇಖಿಸಿ ಸರ್ಕಾರವು ಸೆಪ್ಟೆಂಬರ್ 2020 ರಲ್ಲಿ 117 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಈ ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಜನಪ್ರಿಯ PUBG ಸಹ ಒಳಗೊಂಡಿದೆ. ಇದಲ್ಲದೇ Camscanner ನಂತಹ ಪ್ರಸಿದ್ಧ ಅಪ್ಲಿಕೇಶನ್‌ಗಳನ್ನು ಭದ್ರತಾ ಕಾರಣಗಳಿಗಾಗಿ ಸರ್ಕಾರ ನಿರ್ಬಂಧಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo