ಭಾರತದಲ್ಲಿ 200 ಮಿಲಿಯನ್ಗಿಂತ ಹೆಚ್ಚು ಜನರು WhatsApp ಅಪ್ಲಿಕೇಶನನ್ನು ಬಳಸುತ್ತಿದ್ದಾರೆ. ಆದ್ದರಿಂದ WhatsApp ಕೇವಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮಾತ್ರವಲ್ಲದೆ ನಮ್ಮ ದಿನನಿತ್ಯದ ಅವಶ್ಯಕತೆಯಾಗಿದೆ. WhatsApp ಮೂಲಕ ಬಳಕೆದಾರರು ಮೆಸೇಜ್, ಡಾಕ್ಯುಮೆಂಟ್ಗಳು, ಮತ್ತು ಸೋಷಿಯಲ್ ಫೈಲ್ಗಳನ್ನು ಯಾವುದೇ ಇತರ ಬಳಕೆದಾರರಿಗೆ ಸುಲಭವಾಗಿ ಕಳುಹಿಸಬಹುದು. ಅಂತಹ ಸಂದರ್ಭಗಳಲ್ಲಿ ಅಧಿಕೃತ ಉದ್ದೇಶಗಳಿಗಾಗಿ WhatsApp ಅನ್ನು ಬಳಸಲಾಗುತ್ತಿದೆ. ಆದರೆ ಇದು WhatsApp ಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ವಾಸ್ತವವಾಗಿ ನಮ್ಮ ಅಗತ್ಯ ಮೆಸೇಜ್ಗಳನ್ನು ಆಕಸ್ಮಿಕವಾಗಿ ನಾವು ಅನೇಕ ಬಾರಿ ಅಳಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ ಆ ಸಂದೇಶಗಳೊಂದಿಗೆ ನಾವು ಕೆಲ ಒಮ್ಮೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇಂದು ನಾವು ನಿಮ್ಮ ಅಳಿಸಿದ ಮೇಸಜ್ಗಳನ್ನು ನೀವು ಮರು ಪಡೆಯಬವುದು.
ಹಂತ1: Playstore ಗೆ ಹೋಗುವ ಮೂಲಕ 'ನೋಟಿಫಿಕೇಶನ್ ಹಿಸ್ಟರಿ' ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿ.
ಹಂತ2: ಅಪ್ಲಿಕೇಶನ್ ತೆರೆದು Allow ಮೇಲೆ ಟ್ಯಾಪ್ ಮಾಡುವ ಮೂಲಕ ಪ್ರಕಟಣೆ ಮತ್ತು ನಿರ್ವಾಹಕ ಅನುಮತಿಗಳನ್ನು ಅನುಮತಿಸಿ.
ಹಂತ3: ಇದರ ನಂತರ ಅಪ್ಲಿಕೇಶನ್ ನಿಮ್ಮ ಎಲ್ಲ ನೋಟಿಫಿಕೇಶನ್ ಹಿಸ್ಟರಿಯನ್ನು ರೆಕಾರ್ಡಿಂಗ್ ಪ್ರಾರಂಭಿಸುತ್ತದೆ.
ಹಂತ4: ನಂತರ ನೋಟಿಫಿಕೇಶನ್ ಹಿಸ್ಟರಿಗಾಗಿ ಅಪ್ಲಿಕೇಶನನ್ನು ತೆರೆದು WhatsApp ಐಕಾನನ್ನು ಟ್ಯಾಪ್ ಮಾಡಿ.
ಹಂತ5: ನೀವು ಓದಬೇಕಾದ ಮೆಸೇಜನ್ನು ಅಳಿಸಿಹಾಕಿದ ವ್ಯಕ್ತಿಯ ಸಂಖ್ಯೆ ಅಥವಾ ಹೆಸರನ್ನು ಇಲ್ಲಿ ಟ್ಯಾಪ್ ಮಾಡಿ.
ಹಂತ6: ನೀವು ಮೊಬೈಲ್ಗೆ ಬಂದ ಅದೇ ಮೆಸೇಜ್ಗಳನ್ನು ಈ ಅಪ್ಲಿಕೇಶನ್ಗಳು ಮರುಸ್ಥಾಪಿಸುತ್ತವೆ ಅಥವಾ ನೀವು ಆ ಮೆಸೇಜನ್ನು ನೋಟಿಫಿಕೇಶನ್ ಬಾರಲ್ಲಿ ಓದಿರಬೇಕಾಗುತ್ತದೆ (ಆಗಿದ್ರೆ ಮಾತ್ರ ಪಡೆಯಬವುದು). PlayStore ನಲ್ಲಿ ನೀವು ಅಳಿಸಿದ ಸಂದೇಶಗಳನ್ನು ಮತ್ತೆ ಮರುಸಂಗ್ರಹಿಸಲು ಅನುಮತಿಸುವ ಹಲವು ಅಪ್ಲಿಕೇಶನ್ಗಳನ್ನು ನೀವು ಕಾಣಬಹುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಯೌಟ್ಯೂಬ್ ಮತ್ತು ಫೇಸ್ಬುಕ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.