ಈಗಾಗಲೇ ಜಗತ್ತಿನೆಲ್ಲೆಡೆ ಹಲವಾರು ವಿವಿಧ ರೀತಿಯ ಸೈಬರ್ ಕ್ರೈಮ್ ಬಹಳಷ್ಟು ಬೆಳೆಯುತ್ತಿದೆ. ಅಲ್ಲದೆ ಅನೇಕ ಘಟನೆಗಳನ್ನು ಆಗಾಗ್ಗೆ ನಾವು ನೀವು ಕೇಳುತ್ತಿರುತ್ತೇವೆ. ಇಂತಹ ಬೆಳವಣಿಗೆಯನ್ನು ತಡೆಗಟ್ಟಲು ಸರ್ಕಾರ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ಫೇಸ್ಬುಕ್ ಸ್ವಾಮ್ಯದ ಜಗತ್ತಿನ ಅತಿ ಹೆಚ್ಚು ಬಳಸುತ್ತಿರುವ ಮತ್ತು ಜನಪ್ರಿಯ ಮೆಸೇಜ್ ಅಪ್ಲಿಕೇಶನ್ WhatsApp ಒಂದು ಪ್ರಮುಖ ಹೆಜ್ಜೆ ತೆಗೆದುಕೊಳ್ಳುತ್ತಿದೆ.
ಒಂದು ವೇಳೆ ನೀವು ಅಧಿಕೃತ ಅಪ್ಲಿಕೇಶನ್ ಹೊರೆತು ಪಡಿಸಿ WhatsApp Plus ಅಥವಾ WhatsApp GB ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸುತ್ತಿರುವ ಬಳಕೆದಾರರ ಖಾತೆಗಳನ್ನು WhatsApp ನಿಷೇಧಿಸಲಿದೆ. ನಿಮ್ಮ ಫೋನಲ್ಲಿ ಈಗಾಗಲೇ ಡೌನ್ಲೋಡ್ ಆಗಿರುವ ಅಪ್ಲಿಕೇಶನ್ ಅನ್ನು ಒಮ್ಮೆ ಪರಿಶೀಲಿಸಿ. ಏಕೆಂದರೆ ನೀವು iOS ಅಥವಾ ಆಂಡ್ರಾಯ್ಡ್ ಫೋನ್ಗಳ ಸ್ಟೋರ್ಗಳಲ್ಲಿ ಹೋಗಿ WhatsApp ಎಂದು ಟೈಪ್ ಮಾಡಿದ ತಕ್ಷಣ ಹಲವಾರು ಅಪ್ಲಿಕೇಶನ್ಗಳು ಒಂದರ ಕೆಳಗೊಂದು ಸಾಲು ಸಾಲಾಗಿ ಲಭ್ಯವಾಗುತ್ತದೆ.
ಆದರೆ ಇಲ್ಲಿ WhatsApp ನಂತೆ ಕಾಣುವ ಹಲವಾರು ಅಪ್ಲಿಕೇಶನ್ಗಳಿಗೆ ನೀವು ಬಲಿಯಾಗಬವುದು. ಆದ್ದರಿಂದ ಇವೇಲ್ಲ ಅಪ್ಲಿಕೇಶನ್ಗಳಲ್ಲಿ ನೀವು 'WhatsApp Messenger' ಎಂಬ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ ಇದರ ಕೆಳಗೆ WhatsApp Inc. ಎಂಬ ಹಸಿರು ಬಣ್ಣದ ಲೇಖನವಿರುತ್ತದೆ ಅದನ್ನು ಮಾತ್ರ ನೀವು ಡೌನ್ಲೋಡ್ ಮಾಡಿ ಬಳಸಬೇಕಾಗುತ್ತದೆ. ಒಂದು ವೇಳೆ ಇದು ಲಭ್ಯವಾಗದಿದ್ದರೆ ನಿಮ್ಮ ಫೋನನ್ನು ಅಪ್ಡೇಟ್ ಮಾಡಿ ಪ್ರಯತ್ನಿಸಿ.
WhatsApp ಹೇಳಿರುವ ಹಾಗೆ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ' ಎಂದು ಹೇಳುವ ಅಪ್ಲಿಕೇಶನ್ನ ಸಂದೇಶವೊಂದನ್ನು ನೀವು ಪಡೆದರೆ ನೀವು ವಾಟ್ಸಾಪ್ನ ಬೆಂಬಲಿತವಲ್ಲದ ಆವೃತ್ತಿಯನ್ನು ಚಾಲನೆ ಮಾಡುತ್ತಿದ್ದೀರಿ ಎಂದರ್ಥ. ಇದರ ನಂತರ ನೀವು ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಖಾತೆಯನ್ನು ಚಲಾಯಿಸಲು ಬಯಸಿದರೆ ಮೇಲೆ ಹೇಳಿರುವಂತೆ ಒಮ್ಮೆ ಖಚಿತ ಪಡಿಸಿಕೊಂಡು ಡೌನ್ಲೋಡ್ ಮಾಡಿ ಬಳಸಬೇಕಾಗುತ್ತದೆ. ಈ ಮಾಹಿತಿ ಇಷ್ಟವಾದರೆ ತಿಳಿಯದವರೊಂದಿಗೆ ಶೇರ್ ಮಾಡಲು ಮರೆಯದಿರಿ.