Gpay Update: ಗೂಗಲ್ ಪೇ ಬಳಕೆದಾರರಿಗೆ ಮತ್ತೆ ಹೊಸ ಬದಲಾವಣೆ ಹಣದ ವಹಿವಾಟಿಗೆ ಹೊಸ ಮಿತಿಗಳು ನಿಯಮ ಜಾರಿ!

Gpay Update: ಗೂಗಲ್ ಪೇ ಬಳಕೆದಾರರಿಗೆ ಮತ್ತೆ ಹೊಸ ಬದಲಾವಣೆ ಹಣದ ವಹಿವಾಟಿಗೆ ಹೊಸ ಮಿತಿಗಳು ನಿಯಮ ಜಾರಿ!
HIGHLIGHTS

ಯುಪಿಐ (UPI) ಆಧಾರಿತ ಪಾವತಿ ಸೇವಾ ಪೇಮೆಂಟ್ ಗೂಗಲ್ ಪೇ (Google Pay) ಕೆಲವೊಂದು ಮುಖ್ಯವಾದ ಬದಲಾವಣೆಗಳನ್ನು ಮಾಡಿದೆ.

ಗೂಗಲ್ ಪೇ ಬಳಕೆದಾರರು ನೀವು 2022 ರಲ್ಲಿ ಒಂದೇ ದಿನದಲ್ಲಿ 1 ಲಕ್ಷ ರೂ.ಹಣವನ್ನು ಮಾತ್ರ ಕಳುಹಿಸಬಹುದಾದ ಮಿತಿಯನ್ನು ನಿಗದಿಪಡಿಸಿದೆ.

10 ಯುಪಿಐ ಪಾವತಿಗಳನ್ನು ನಡೆಸಿದ ನಂತರ ಆಪ್ ನಲ್ಲಿ ಪಾವತಿಗಳನ್ನು ನಡೆಸಲು ಸಾಧ್ಯವಾಗದಂತೆ ನಿರ್ಬಂಧಿಸಲಾಗುತ್ತದೆ.

ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಂತಹ ಯುಪಿಐ ಆಧಾರಿತ ಪಾವತಿ ಸೇವಾ ಪೇಮೆಂಟ್ ಗೂಗಲ್ ಪೇ ಕೆಲವೊಂದು ಮುಖ್ಯವಾದ ಬದಲಾವಣೆಗಳನ್ನು ಮಾಡಿದೆ. ಗರಿಷ್ಠ ಮೊತ್ತದ ಮಿತಿ ಹಾಗೂ ಒಂದೇ ದಿನದಡಿ ಎಷ್ಟು ವಹಿವಾಟು ಮಾಡಬಹುದು ಎಂಬುದನ್ನು ನಿಗದಿಪಡಿಸಿದೆ. NEFT ಮತ್ತು IMPS ನಂತಹ ಬ್ಯಾಂಕ್ ವರ್ಗಾವಣೆ ವಿಧಾನಗಳಂತೆಯೇ ಇದೀಗ ಗೂಗಲ್ ಪೇ ಆಪ್ ನಲ್ಲಿ ಕೂಡಾ ಕೆಲವು ಯುಪಿಐ ಮಿತಿಗಳನ್ನು ತರಲಾಗಿದೆ.

ಗೂಗಲ್ ಪೇ ಬಳಕೆದಾರರು ನೀವು 2022 ರಲ್ಲಿ ಒಂದೇ ದಿನದಲ್ಲಿ 1 ಲಕ್ಷ ರೂ.ಹಣವನ್ನು ಮಾತ್ರ ಕಳುಹಿಸಬಹುದಾದ ಮಿತಿಯನ್ನು ನಿಗದಿಪಡಿಸಿದೆ. ಗೂಗಲ್ ಪೇ ಬಳಕೆದಾರರಿಗೆ ಒಂದೇ ದಿನದಲ್ಲಿ ಗರಿಷ್ಠ 10 ವಹಿವಾಟುಗಳನ್ನು ಮಾಡಲು ಅನುಮತಿ ನೀಡಿದೆ. ಇನ್ನು ಮುಂದೆ ಗೂಗಲ್ ಪೇ ಬಳಕೆದಾರರು ಒಂದು ದಿನದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಾವತಿಸಲು ಹಾಗೂ ಪಡೆಯಲು ಸಾಧ್ಯವಿಲ್ಲ. ಹಾಗೆಯೇ 10 ಯುಪಿಐ ಪಾವತಿಗಳನ್ನು ನಡೆಸಿದ ನಂತರ ಆಪ್ ನಲ್ಲಿ ಪಾವತಿಗಳನ್ನು ನಡೆಸಲು ಸಾಧ್ಯವಾಗದಂತೆ ನಿರ್ಬಂಧಿಸಲಾಗುತ್ತದೆ.

Google Pay ಹೊಸ ಮಿತಿಗಳು ನಿಯಮಗಳು ಯಾವುವು?

1.ಇನ್ನು ಹಣಕ್ಕಾಗಿ ವಿನಂತಿಸಲು ಬಂದಾಗ ಬಳಕೆದಾರರು ಒಂದು ದಿನದಲ್ಲಿ 2000 ರೂ.ಗಿಂತ ಹೆಚ್ಚಿನ ಹಣ ವಿನಂತಿಸಲು ಸಾಧ್ಯವಿಲ್ಲ.

2.ಇವಿಷ್ಟು ಮಾತ್ರವಲ್ಲದೇ ಗೂಗಲ್ ಪೇ ಹಣ ವರ್ಗಾವಣೆ ಮಿತಿಗಳ ಹೊರತಾಗಿ ಬ್ಯಾಂಕ್ ನಿರ್ಬಂಧಗಳು ಕೂಡ ಗೂಗಲೇ ಪೇನಲ್ಲಿ ಇದೆ.

3.ಅವು ಯಾವುದೆಂದರೆ ಯುಪಿಐ ವಹಿವಾಟಿನ ದೈನಂದಿನ ವಹಿವಾಟಿನ ಮಿತಿಯು ವಿಭಿನ್ನವಾಗಿದ್ದು 5000 ರೂ.ಗಳಿಂದ 1,00,00 ರೂ.ಗಳವರೆಗೆ ಹಣದ ವ್ಯವಹಾರವನ್ನು ನಡೆಸಲು ಅನುಮತಿ ನೀಡುತ್ತದೆ. ಇದರಲ್ಲಿ ಗೂಗಲ್ ಪೇ ಬಳಕೆದಾರರ ಬ್ಯಾಂಕ್ ಯಾವುದು ಎಂಬುವುದರ ಮೇಲೆ ಆಧಾರಿತವಾಗಿದೆ.

4.ಗೂಗಲ್ ಪೇ ನಲ್ಲಿ ಯುಪಿಐ ವಹಿವಾಟು ಮಿತಿಯನ್ನು ಹೆಚ್ಚಿಸಲು ಯಾವುದೇ ವಿಧಾನವಿಲ್ಲ. ಆದರೂ ಗೂಗಲ್ ಪೇ ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ನೆಫ್ಟ್ ನಂತಹ ಇತರ ವರ್ಗಾವಣೆ ವಿಧಾನಗಳನ್ನು ಅನುಸರಿಸಬಹುದು.

ನೀವು ಎಷ್ಟು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಎಂಬುದರ ಕುರಿತು ನಿಮ್ಮ ಬ್ಯಾಂಕ್ ತನ್ನದೇ ಆದ ಮಿತಿಗಳನ್ನು ಹೊಂದಿರಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ವಂಚನೆಯಿಂದ ರಕ್ಷಿಸಲು ಹೆಚ್ಚಿನ ಪರಿಶೀಲನೆಗಾಗಿ ಕೆಲವು ವಹಿವಾಟುಗಳನ್ನು ಫ್ಲ್ಯಾಗ್ ಮಾಡಬಹುದು. ನೀವು ವಹಿವಾಟು ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಮತ್ತು ನೀವು ಮಿತಿಯನ್ನು ತಲುಪಿದ್ದೀರಿ ಎಂದು ನೀವು ಭಾವಿಸದಿದ್ದರೆ ಹೆಚ್ಚಿನ ಸಹಾಯಕ್ಕಾಗಿ Google Pay ಬೆಂಬಲವನ್ನು ಸಂಪರ್ಕಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo