Quiet Mode: ಇನ್‌ಸ್ಟಾಗ್ರಾಮ್‌ನಲ್ಲಿ ಸ್ವಲ್ಪ ಫ್ರೀ ಟೈಮ್ ಬೇಕೇ? ಅಪ್ಲಿಕೇಶನ್ ನೋಟಿಫಿಕೇಷನ್ ಪದೇ ಪದೇ ಪರಿಶೀಲಿಸಲು ನಿಮಗೆ ಪ್ರಚೋದಿಸುತ್ತದೆಯೇ? ಹಾಗಾದ್ರೆ ಇನ್ನು ಮುಂದೆ ಹಾಗಾಗಲ್ಲ ಮೆಟಾ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇನ್‌ಸ್ಟಾಗ್ರಾಮ್ (Instagram) ಬಳಕೆದಾರರು ರಜೆಯ ಸಮಯದಲ್ಲಿ ಪುಶ್ ನೋಟಿಫಿಕೇಷನ್ಸ್ ತಾತ್ಕಾಲಿಕವಾಗಿ ಆಫ್ ಮಾಡಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಫೀಚರ್ ನಿಮ್ಮ ಇನ್‌ಸ್ಟಾಗ್ರಾಮ್ (Instagram) ಫಾಲ್ಲೋರ್ಸ್ಗಳ ಯಾವುದೇ ಸಂದೇಶಗಳಿಗೆ ಸ್ವಯಂಚಾಲಿತವಾಗಿ ಪ್ರತ್ಯುತ್ತರಿಸುತ್ತದೆ. ನೀವು ಧ್ಯಾನ ಮಾಡುವಾಗ, ಚಾಲನೆ ಮಾಡುವಾಗ, ಅಧ್ಯಯನ ಮಾಡುವಾಗ ಅಥವಾ ಒಟ್ಟಾರೆಯಾಗಿ ಇಂಟರ್ನೆಟ್ ದುನಿಯಾದಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುವಾಗ ನಿಮಗೆ ಸಂದೇಶವನ್ನು ಕಳುಹಿಸಬೇಡಿ ಎಂದು ಅವರಿಗೆ ತಿಳಿಸುತ್ತದೆ.
Instagram ನಲ್ಲಿ ಕ್ವೈಟ್ ಮೋಡ್ ಆನ್ ಆಗಿರುವಾಗ ಇದು ಅಪ್ಲಿಕೇಶನ್ ನೋಟಿಫಿಕೇಷನ್ಸ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ನೇರ ಸಂದೇಶವನ್ನು ಕಳುಹಿಸಿದಾಗ ಫಾಲ್ಲೋರ್ಸ್ ಗೆ ಸ್ವಯಂಚಾಲಿತವಾಗಿ ಪ್ರತ್ಯುತ್ತರಿಸುತ್ತದೆ. ಮೆಟಾದ ಬ್ಲಾಗ್ ಪೋಸ್ಟ್‌ನ ಪ್ರಕಾರ ಕ್ವೈಟ್ ಮೋಡ್ ಎಂದು ಕರೆಯಲ್ಪಡುವ ಕಾರ್ಯವು ಪ್ಲಾಟ್‌ಫಾರ್ಮ್‌ನಲ್ಲಿ ನಿಮಗೆ ಸಂದೇಶ ಕಳುಹಿಸಲು ಪ್ರಯತ್ನಿಸುವ ಬಳಕೆದಾರರಿಗೆ ಸ್ವಯಂಚಾಲಿತ ಪ್ರತ್ಯುತ್ತರಗಳನ್ನು ಕಳುಹಿಸುತ್ತದೆ. ನಿಮಗೆ ಸೂಚನೆ ನೀಡಲಾಗಿಲ್ಲ ಎಂದು ಅವರಿಗೆ ತಿಳಿಸುತ್ತದೆ.
https://twitter.com/instagram/status/1616124171406438401?ref_src=twsrc%5Etfw
ಬಳಕೆದಾರರು ತಮ್ಮ ವಿರಾಮದಿಂದ ಹಿಂತಿರುಗಿದಾಗ ಮತ್ತು ಅಪ್ಲಿಕೇಶನ್ ಅನ್ನು ಮತ್ತೆ ಬಳಸಲು ಪ್ರಾರಂಭಿಸಿದಾಗ ವಿರಾಮದ ಸಮಯದಲ್ಲಿ ತಪ್ಪಿಸಿಕೊಂಡ ಯಾವುದೇ ನೋಟಿಫಿಕೇಷನ್ ನ ತ್ವರಿತ ಸಾರಾಂಶವನ್ನು ಇನ್‌ಸ್ಟಾಗ್ರಾಮ್ (Instagram) ತೋರಿಸುತ್ತದೆ. ಇದು ಬಳಕೆದಾರರಿಗೆ ಪ್ರಮುಖವಾದುದನ್ನು ಹಿಡಿಯಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ವೇಳಾಪಟ್ಟಿಗಳಿಗೆ ಸರಿಹೊಂದುವಂತೆ ಇನ್‌ಸ್ಟಾಗ್ರಾಮ್ (Instagram) ಅಲ್ಲಿ ಕ್ವೈಟ್ ಮೋಡ್ ಸಮಯವನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಫೇಸ್‌ಬುಕ್‌ನಲ್ಲಿ ಕ್ವೈಟ್ ಮೋಡ್‌ನಂತೆ ಕಾರ್ಯವು ಸ್ವಯಂಚಾಲಿತವಾಗಿ ಆನ್ ಮಾಡಿದಾಗ ನಿಖರವಾದ ಸಮಯವನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
ಕ್ವೈಟ್ ಮೋಡ್ ಅನ್ನು ಆನ್ ಮಾಡಲು Instagram ಸೆಟ್ಟಿಂಗ್‌ಗಳು> ನೋಟಿಫಿಕೇಷನ್ಸ್> ಕ್ವೈಟ್ ಮೋಡ್‌ಗೆ ಹೋಗಿ. ಈ ಹೊಸ ಫೀಚರ್ ಹೆಚ್ಚು ಹದಿಹರೆಯದ ಬಳಕೆದಾರರ ಮೇಲೆ ಗಮನಹರಿಸುತ್ತದೆ. ಇದು ಅವರು ತಡರಾತ್ರಿ ಇನ್‌ಸ್ಟಾಗ್ರಾಮ್ (Instagram) ಅಲ್ಲಿ ನಿರ್ದಿಷ್ಟ ಸಮಯವನ್ನು ಕಳೆದ ನಂತರ ಕ್ವೈಟ್ ಮೋಡ್ ಅನ್ನು ಆನ್ ಮಾಡಲು ಅವರಿಗೆ ಸಲಹೆ ನೀಡುತ್ತದೆ. ಬ್ಲಾಗ್ ಪೋಸ್ಟ್ ಹದಿಹರೆಯದವರು ಸಾಂದರ್ಭಿಕವಾಗಿ ತಮಗಾಗಿ ಸಮಯವನ್ನು ತೆಗೆದುಕೊಳ್ಳಲು ಬಯಸುತ್ತಾರೆ ಮತ್ತು ರಾತ್ರಿಯಲ್ಲಿ ಅಧ್ಯಯನ ಮಾಡುವಾಗ ಮತ್ತು ಶಾಲೆಯ ಸಮಯದಲ್ಲಿ ಕೇಂದ್ರೀಕರಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿರಬಹುದು ತಿಳಿಸಲಾಗಿದೆ. ಆದರೆ ಸದ್ಯಕ್ಕೆ ಯುಎಸ್, ಯುಕೆ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿರುವ ಪ್ರತಿಯೊಬ್ಬರೂ ಪ್ರಸ್ತುತ ಈ ಫೀಚರ್ ಅನ್ನು ಬಳಸಬಹುದು ಮತ್ತು ಇದು ಶೀಘ್ರದಲ್ಲೇ ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಲಭ್ಯವಿರುತ್ತದೆ.