ಪ್ರಪಂಚದಾದ್ಯಂತದ ಹಿಂದು ಭಕ್ತರು ಈ ವರ್ಷ ನೆನ್ನೆಯಿಂದ ಅಂದ್ರೆ 6ನೇ ಸೆಪ್ಟೆಂಬರ್ ಮತ್ತು ಇಂದು 7ನೇ ಸೆಪ್ಟೆಂಬರ್ ರಂದು ಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami 2023) ವಿಜೃಂಭಣೆಯಿಂದ ಆಚರಿಸುತ್ತಾರೆ. ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದೂ ಕರೆಯಲ್ಪಡುವ ಈ ಜನಪ್ರಿಯ ಹಿಂದೂ ಹಬ್ಬವು ಮಥುರಾದಲ್ಲಿ ಜನಿಸಿ ವೃಂದಾವನದಲ್ಲಿ ಬೆಳೆದ ಶ್ರೀ ಕೃಷ್ಣನ ಜನ್ಮವನ್ನು ಗೌರವಿಸುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಇಂದು ಆಚರಿಸಲಾಗುತ್ತದೆ. ಇಲ್ಲಿ ಜನ್ಮಾಷ್ಟಮಿ 2023 ರೊಂದಿಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗಾಗಿ WhatsApp ಸ್ಟಿಕ್ಕರ್ ಮತ್ತು ಸ್ಟೇಟಸ್‌ಗಳನ್ನು ಡೌನ್‌ಲೋಡ್ ಮಾಡೋದು ಹೇಗೆ? ಎಂಬುದನ್ನು ತಿಳಿಯಿರಿ.
– ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನಲ್ಲಿ ವಾಟ್ಸಾಪ್ ಅಂನ್ಮು ಅಪ್ಡೇಟ್ ಮಾಡಿಕೊಂಡು ತೆರೆಯಿರಿ
– ನಂತರ ನೀವು ಚಾಟ್ ಮಾಡಲು ಬಯಸುವ ಕಾಂಟೆಕ್ಟ್ ತೆರೆದು ಎಮೋಜಿ > ಸ್ಟಿಕ್ಕರ್‌ಗಳು > ಸೇರಿಸಲು ಟ್ಯಾಪ್ ಮಾಡಿ.
– ನೀವು ಡೌನ್‌ಲೋಡ್ ಮಾಡಲು ಬಯಸುವ ಸ್ಟಿಕ್ಕರ್ ಪ್ಯಾಕ್‌ನ ಪಕ್ಕದಲ್ಲಿರುವ ಡೌನ್‌ಲೋಡ್ ಅನ್ನು ಟ್ಯಾಪ್ ಮಾಡಿ.
– ಇದರ ಡೌನ್‌ಲೋಡ್ ಪೂರ್ಣಗೊಂಡ ನಂತರ ಹಸಿರು ಚೆಕ್ ಗುರುತು ಕಾಣಿಸಿಕೊಳ್ಳುತ್ತದೆ.
– ಮತ್ತೆ ಹಿಂದಕ್ಕೆ ಟ್ಯಾಪ್ ಮಾಡಿ ಚಾಟ್ ಮಾಡಿ ಅಷ್ಟೇ.
ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಚಾಟ್‌ನಲ್ಲಿರುವ ಸ್ಟಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು ನೀವು ಕಳುಹಿಸಲು ಬಯಸುವ ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಈ ಸ್ಟಿಕ್ಕರ್‌ಗಳನ್ನು ಪ್ರವೇಶಿಸಬಹುದು.
– ಈ ವರ್ಷದ ಹ್ಯಾಪಿ ಜನ್ಮಾಷ್ಟಮಿ GIF ಅಂದ್ರೆ ಸಣ್ಣ ವಿಡಿಯೋ ಮಾದರಿಯ ಫೋಟೋಗಳನ್ನು ಹಂಚಿಕೊಳ್ಳಲು ನಿಮ್ಮ WhatsApp ತೆರೆಯಿರಿ.
– ಈಗ ವೈಯಕ್ತಿಕ ಅಥವಾ ಗುಂಪು ಚಾಟ್‌ಗೆ ಹೋಗಿ.
– ಸ್ಟಿಕ್ಕರ್‌ಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು GIF ಅನ್ನು ಟ್ಯಾಪ್ ಮಾಡಿ.
– ಇದನ್ನು ಅನುಸರಿಸಿ ಸರ್ಚ್ ಬಾಕ್ಸ್ ಒಳಗೆ Krishna Janmashtami 2023 ಅಥವಾ Janmashtami ಎಂದು ಬರೆಯಿರಿ.
– ನೀವು ಹಂಚಿಕೊಳ್ಳಲು ಬಯಸುವ GIF ಅನ್ನು ಆಯ್ಕೆಮಾಡಿ ಮತ್ತು ಟ್ಯಾಪ್ ಮಾಡಿ
– ಕಳುಹಿಸು ಮೇಲೆ ಮತ್ತೊಮ್ಮೆ ಟ್ಯಾಪ್ ಮಾಡಿ ಅಷ್ಟೆ!
ಜನ್ಮಾಷ್ಟಮಿ 2023 ರ ಶುಭಾಶಯಗಳನ್ನು ಆಚರಿಸಲು ನೀವು ನಿಮ್ಮ ವಾಟ್ಸಾಪ್ ಡಿಪಿ ಮತ್ತು ಸ್ಟೇಟಸ್ ಅನ್ನು ಜನ್ಮಾಷ್ಟಮಿ-ವಿಷಯದ ಚಿತ್ರಗಳೊಂದಿಗೆ ನವೀಕರಿಸಬಹುದು. ನಿಮ್ಮ ವೆಬ್ ಬ್ರೌಸರ್ ತೆರೆಯಿರಿ ಮತ್ತು "Happy Janmashtami 2023" ಅಥವಾ ಸರಳವಾಗಿ "Janmashtami" ಗೂಗಲ್ ಸರ್ಚ್ ಮಾಡಿ. ಜನ್ಮಾಷ್ಟಮಿಗೆ ಸಂಬಂಧಿಸಿದ ಮತ್ತು ಆಕರ್ಷಕವಾದ ಚಿತ್ರಗಳನ್ನು ಪಡೆಯಲು ಸರ್ಚ್ ಫಲಿತಾಂಶಗಳ ಮೂಲಕ ಬ್ರೌಸ್ ಮಾಡಿ. ನೀವು ಇಷ್ಟಪಡುವ ಚಿತ್ರಗಳನ್ನು ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಮಾಡಿದ ಚಿತ್ರಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನ ಫೋಟೋ ಗ್ಯಾಲರಿಗೆ ಸೇವ್ ಮಾಡಿಕೊಳ್ಳಿ.
WhatsApp ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್‌ಗೆ ನ್ಯಾವಿಗೇಟ್ ಮಾಡಿ. ಅದನ್ನು ಬದಲಾಯಿಸಲು ನಿಮ್ಮ ಪ್ರಸ್ತುತ DP ಅನ್ನು ಟ್ಯಾಪ್ ಮಾಡಿ. ನಿಮ್ಮ ಗ್ಯಾಲರಿಯಿಂದ ನೀವು ಮೊದಲು ಡೌನ್‌ಲೋಡ್ ಮಾಡಿದ ಜನ್ಮಾಷ್ಟಮಿ ಚಿತ್ರವನ್ನು ಆಯ್ಕೆಮಾಡಿ. ನಿಮ್ಮ WhatsApp ಸ್ಟೇಟಸ್ ಅನ್ನುನವೀಕರಿಸಲು ವಾಟ್ಸಾಪ್ ಸ್ಟೇಟಸ್ ವಿಭಾಗಕ್ಕೆ ಹೋಗಿ ಮತ್ತು ಹೊಸ ಸ್ಟೇಟಸ್ ಅನ್ನು ಸೇರಿಸಲು “+” ಐಕಾನ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ಸ್ಟೇಟಸ್ನಂತೆ ನೀವು ಡೌನ್‌ಲೋಡ್ ಮಾಡಿದ ಜನ್ಮಾಷ್ಟಮಿ ಚಿತ್ರವನ್ನು ಆಯ್ಕೆಮಾಡಿ ಅಷ್ಟೇ.