WhatsApp Tips: ವಾಟ್ಸಾಪ್ ತನ್ನ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಲ-ಕಾಲಕ್ಕೆ ಹೊಸ-ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತದೆ. ವಾಟ್ಸಾಪ್ ಈ ಹೊಸ ಫೀಚರ್ ಬಳಕೆದಾರರ ಚಾಟಿಂಗ್ ಅನುಭವಗಳನ್ನು ಹೆಚ್ಚು ಸುಧಾರಿಸಿದೆ. ಮತ್ತು ಇದರ ಪರಿಣಾಮವಾಗಿ ಚಾಟ್ ಈಗ ಹೆಚ್ಚು ಆನಂದದಾಯಕವಾಗಿದೆ. ವಾಟ್ಸಾಪ್ ತನ್ನ ಸ್ಟೇಟಸ್ ಫೀಚರ್ ನಲ್ಲಿ ಗಮನಾರ್ಹ ಬದಲಾವಣೆಯನ್ನ ಮಾಡಿದ್ದು ಈಗ ಬಳಕೆದಾರರು 30 ಸೆಕೆಂಡುಗಳವರೆಗೆ ವಾಯ್ಸ್ ರೆಕಾರ್ಡಿಂಗ್‌ಗಳನ್ನು ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಬಹುದು.
ಇತ್ತೀಚಿನ Whatsapp ಅಪ್ಡೇಟ್ಗೆ ಮೊದಲು ನಾವು ಸ್ಟೇಟಸ್‌ನಲ್ಲಿ ಟೆಕ್ಸ್ಟ್, ಫೋಟೋಗಳು ಮತ್ತು ವೀಡಿಯೊಗಳನ್ನು ಮಾತ್ರ ಶೇರ್ ಮಾಡಬಹುದಿತ್ತು. ಆದರೆ ಈಗ ನೀವು ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಸಹ ಶೇರ್ ಮಾಡಬಹುದು. ವಾಟ್ಸಾಪ್‌ನ ಬೀಟಾ ಆವೃತ್ತಿಯು ಇತ್ತೀಚೆಗೆ ಈ ಫೀಚರ್ ಅನ್ನು ಸೇರಿಸಿದ್ದು ಇಲ್ಲಿ ಪೆನ್ಸಿಲ್ ಮತ್ತು ಕ್ಯಾಮರಾ ಜೊತೆಗೆ ಸ್ಟೇಟಸ್ ವಿಭಾಗದಲ್ಲಿ ಮೈಕ್ರೊಫೋನ್ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ. ವಾಟ್ಸಾಪ್ ಶೀಘ್ರದಲ್ಲೇ ಈ ಅಪ್ಡೇಟ್ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು.
1. ವಾಟ್ಸಾಪ್‌ನಲ್ಲಿ ವಾಯ್ಸ್ ಸ್ಟೇಟಸ್ ಅನ್ನು ಹಂಚಿಕೊಳ್ಳಲು ನೀವು ಮೊದಲು ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕು.
2. ವಾಟ್ಸಾಪ್‌ನಲ್ಲಿ ಅಪ್ಡೇಟ್ ಆದ ನಂತರ ನೀವು ಸ್ಟೇಟಸ್ ವಿಭಾಗಕ್ಕೆ ಭೇಟಿ ನೀಡಬೇಕು.
3. ನೀವು ಸ್ಟೇಟಸ್ ವಿಭಾಗದಲ್ಲಿ ಕ್ಯಾಮೆರಾ ಮತ್ತು ಪೆನ್ಸಿಲ್ ಐಕಾನ್ ಅನ್ನು ನೋಡುತ್ತೀರಿ. ನಂತರ ಇಲ್ಲಿ ನೀವು ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.
4. ನೀವು ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿದಾಗ ಬಲಭಾಗದಲ್ಲಿರುವ ಮೈಕ್ರೊಫೋನ್ ಐಕಾನ್‌ನೊಂದಿಗೆ ಹೊಸ ವಿಂಡೋ ತೆರೆಯುತ್ತದೆ.
5. ಮೈಕ್ರೊಫೋನ್ ಆಯ್ಕೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನೀವು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಬಹುದು. ವಾಯ್ಸ್ ರೆಕಾರ್ಡ್ ಮಾಡಿದ ನಂತರ Send ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಇದನ್ನು ಸುಲಭವಾಗಿ ಹಂಚಿಕೊಳ್ಳಬಹುದು.
ಈ ಫೀಚರ್ ಮೂಲಕ ರೆಕಾರ್ಡಿಂಗ್ ಮಾಡಲು ನಿಮಗೆ Whatsapp ನಲ್ಲಿ 30 ಸೆಕೆಂಡುಗಳು ಮಾತ್ರ ಲಭ್ಯವಿರುತ್ತದೆ. ಮುಂಬರುವ ದಿನಗಳಲ್ಲಿ ಈ ಸಮಯದ ಮಿತಿಯನ್ನು ಹೆಚ್ಚಿಸಬಹುದು. ಹೆಚ್ಚುವರಿಯಾಗಿ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿದ ನಂತರ ಅಥವಾ ಈ ಫೀಚರ್ ಅನ್ನು ಬಳಸುತ್ತಿರುವ ಬಳಕೆದಾರರು ಮಾತ್ರ ಶೇರ್ ಮಾಡಲಾದ ವಾಯ್ಸ್ ಸ್ಟೇಟಸ್ ಅನ್ನು ಕೇಳಲು ಸಾಧ್ಯವಾಗುತ್ತದೆ.