ಅತಿ ಮುಖ್ಯವಾದ ದಿನ ಅಥವಾ ಟೈಮ್ ನೆನಪಿರೋದಿಲ್ವಾ? WhatsApp ನಲ್ಲಿ ಈ ರೀತಿ ಮೆಸೇಜ್‌ಗಳನ್ನು ಶೆಡ್ಯೂಲ್ ಮಾಡಿ!

ಅತಿ ಮುಖ್ಯವಾದ ದಿನ ಅಥವಾ ಟೈಮ್ ನೆನಪಿರೋದಿಲ್ವಾ? WhatsApp ನಲ್ಲಿ ಈ ರೀತಿ ಮೆಸೇಜ್‌ಗಳನ್ನು ಶೆಡ್ಯೂಲ್ ಮಾಡಿ!
HIGHLIGHTS

ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ವಾಟ್ಸಾಪ್ (WhatsApp) ಮೆಸೇಜ್ ಅನ್ನು ಸೆಡ್ಯೂಲ್ ಮಾಡುವ ಸಾಮರ್ಥ್ಯ ಇನ್ನೂ ಕಾಣೆಯಾಗಿದೆ.

ನಿಮಗೊತ್ತಾ ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಶೆಡ್ಯೂಲ್ ಮಾಡುವ ಮಾರ್ಗಗಳಿವೆ.

ನಿಮ್ಮ ವಿಶೇಷ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವಾಟ್ಸಾಪ್ (WhatsApp) ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು.

ಸರಿಸುಮಾರು 2 ಶತಕೋಟಿಗೂ ಹೆಚ್ಚು ಆಕ್ಟಿವ್ ಬಳಕೆದಾರರೊಂದಿಗೆ ವಾಟ್ಸಾಪ್ (WhatsApp) ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿನ ಪಠ್ಯ ಸಂದೇಶಗಳು, ಮಲ್ಟಿಮೀಡಿಯಾ, ಲೊಕೇಶನ್, ಕರೆಗಳು, ಇಮೇಜ್, ಸ್ಟೇಟಸ್ ಜೊತೆಗೆ ಈಗ ಹಣವನ್ನು ಸಹ ನಂಬರ್ ಮೂಲಕವೇ ಹಂಚಿಕೊಳ್ಳಲು ವಾಟ್ಸಾಪ್ (WhatsApp) ನಿಮಗೆ ಅನುಮತಿಸುತ್ತದೆ. ವಾಟ್ಸಾಪ್ (WhatsApp) ಅಪ್ಲಿಕೇಶನ್‌ನಿಂದ ನೇರವಾಗಿ ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಲು ಅನುಮತಿಸುವುದಿಲ್ಲ. ಆದರೆ ನಿಮ್ಮ ಮೆಸೇಜ್ಗಳು, ಫೋಟೊಗಳು ಮತ್ತು ವೀಡಿಯೊಗಳನ್ನು ಶೆಡ್ಯೂಲ್ ಮಾಡಲು ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿವೆ. ಆದರೆ ಗಮನದಲ್ಲಿರಲಿ ಈ ಚಟುವಟಿಕೆಗೆ ನೀವೇ ಜವಾಬ್ದಾರರಾಗಿತ್ತೀರಾ ಆದ್ದರಿಂದ ಮುಂದಿನ ಹಂತಕ್ಕೆ ಹೋಗುವ ಮೊದಲು ಒಮ್ಮೆ ಯೋಚಿಸಿಕೊಳ್ಳಿ.

WhatsApp ಮೆಸೇಜ್‌ ಶೆಡ್ಯೂಲ್ ಮಾಡುವುದು ಹೇಗೆ?

ವಾಟ್ಸಾಪ್ (WhatsApp) ನಿಮ್ಮ ಮೆಸೇಜ್ಗಳು, ಫೋಟೊಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ವಾಟ್ಸಾಪ್ (WhatsApp) ನಿಮಗೆ ಅವಕಾಶ ಮಾಡಿಕೊಡುತ್ತದೆ. ಆದರೆ ತಕ್ಷಣವೇ ನಿಮ್ಮ ಮೆಸೇಜನ್ನು ಸರಿಯಾದ ಸಮಯದಲ್ಲಿ ತಲುಪಿಸಲು ಸದ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಈ WhatsApp ನಿಮ್ಮ ಮೆಸೇಜ್ಗಳನ್ನು ನೀವು ನಿಗದಿಪಡಿಸುವ ಸಮಯದ ಆಯ್ಕೆಯನ್ನು ಅಷ್ಟಾಗಿ ಒದಗಿಸುವುದಿಲ್ಲವಾದರೂ ಈ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಉನ್ನತ ಮಾನದಂಡದಲ್ಲಿರುವುದಿಲ್ಲ. ಆದರೆ ಪ್ರಮುಖ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು. Google Play ಸ್ಟೋರ್ನಲ್ಲಿ ನಿಮ್ಮ ಮೆಸೇಜ್ಗಳನ್ನು ಕಾರ್ಯಯೋಜನೆ ಮಾಡಲು ಅನುವು ಮಾಡಿಕೊಡುವ ಬಹಳಷ್ಟು ಅಪ್ಲಿಕೇಶನ್ಗಳ ಬಗ್ಗೆ ನೋಡೋಣ.

WhatsApp

1. ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ SKEDit Scheduling App ಎಂಬ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಇನ್ಸ್ಟಾಲ್ ಮಾಡಿದ ನಂತರ ಅಪ್ಲ್ಲಿಕೇಷನನ್ನು ತೆರೆಯಿರಿ ಇಲ್ಲಿ ನಿಮ್ಮ ಫೇಸ್ಬುಕ್ ಅಥವಾ ಹೊಸ ಅಕೌಂಟ್ ಕ್ರಿಯೇಟ್ ಮಾಡಬವುದು. 

3. ಮೊದಲ ಬಾರಿಗೆ ಬಳಸುತ್ತಿದ್ದರೆ ಅಕೌಂಟ್ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ ತೆರೆಯಿರಿ. 

4. ತೆರೆದ ನಂತರ ಇಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್ವರ್ಡ್ ನಮೂದಿಸಿರಿ.   

5. ಇಲ್ಲಿನ ಎಲ್ಲಾ ಮಾಹಿತಿ ನೀಡಿದ ನಂತರ ಈಗ Create Account ಮೇಲೆ ಕ್ಲಿಕ್ ಮಾಡಿರಿ.

6. ಅಕೌಂಟ್ ಕ್ರಿಯೇಟ್ ಆದ ನಂತರ ಪುನಃ ನೀವು ಬಳಸಿದ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ. 

7. ಇದರೊಳಗೆ ಸೈನ್ ಇನ್ ಆದ ನಂತರ ನಿಮಗೆ WhatsApp Business, WhatsApp, SMS, Email, Call ಮತ್ತು Facebook ಕಾಣಿಸುತ್ತದೆ. 

8. ಇದರಲ್ಲಿ ನೀವು ಮೊದಲಿಗೆ ವಾಟ್ಸಾಪ್ (WhatsApp) ಮೇಲೆ ಕ್ಲಿಕ್ ಮಾಡಿ ಇಲ್ಲಿ To ಅನ್ನುವ ನಂತರ ಯಾರಿಗೆ ಮೆಸೇಜ್ ಕಳುಯಿಸಬೇಕೋ ಅವರ ನಂಬರ್ ಸೇರಿಸಿ. 

9. ನಿಮ್ಮ ಆತ್ಮೀಯರ ನಂಬರ್ ಸೇರಿಸಿದ ನಂತರ ಏನು ಬರೆಯಬೇಕೋ ಅದನ್ನು ಇಲ್ಲಿ ಬರೆಯಿರಿ. 

10. ನಿಮ್ಮ ಮೆಸೇಜ್ ಟೈಪ್ ಆದ ನಂತರ ಕೆಳಗೆ ನೋಡಿ ಯಾವಾಗ ಕಳುಯಿಸಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. 

11. ಇದರಲ್ಲಿ ನಿಮ್ಮ ಟೈಮ್ ಮತ್ತು ಡೇಟ್ ಆಯ್ಕೆ ಮಾಡಿದ ನಂತರ ನಿಮ್ಮ ಬಲ ಭಾಗದ ಮೇಲೆ ಕೊನೆಯಲ್ಲಿ ✔ ಚಿನ್ಹೆಯ ಮೇಲೆ ಕ್ಲಿಕ್ ಮಾಡಿ. 

12. ಈ ರೀತಿಯಲ್ಲಿ ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಯಲ್ ಮಾಡಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo