Twitter: ಬ್ಲೂ ಟಿಕ್ ಬಳಕೆದಾರರೊಂದಿಗೆ ಟ್ವಿಟರ್ ಸೇವೆ ಬಳಸುವ ಎಲ್ಲರೂ ಶುಲ್ಕವನ್ನು ವಿಧಿಸುವಂತೆ ಚರ್ಚೆ

Twitter: ಬ್ಲೂ ಟಿಕ್ ಬಳಕೆದಾರರೊಂದಿಗೆ ಟ್ವಿಟರ್ ಸೇವೆ ಬಳಸುವ ಎಲ್ಲರೂ ಶುಲ್ಕವನ್ನು ವಿಧಿಸುವಂತೆ ಚರ್ಚೆ
HIGHLIGHTS

ಸದ್ಯದಲ್ಲಿಯೇ ಟ್ವಿಟರ್ (Twitter) ಸೀಮಿತ ಅವಧಿಯವರೆಗೆ ಮಾತ್ರ ಉಚಿತವಾಗಿ ಲಭ್ಯವಿರಬಹುದು.

ಕಂಪನಿಯು ಈಗಾಗಲೇ ಬಳಕೆದಾರರಿಗೆ ಬ್ಲೂ ಟಿಕ್ ಬಯಸಿದರೆ ಟ್ವಿಟರ್ (Twitter) ಬ್ಲೂ ಚಂದಾದಾರಿಕೆಗೆ ಪಾವತಿಸಲು ಕೇಳುತ್ತಿದೆ.

ಎಲೋನ್ ಮಸ್ಕ್ ಟ್ವಿಟರ್ (Twitter) ಪ್ರವೇಶಿಸಲು ಪ್ರತಿಯೊಬ್ಬರಿಗೂ ಚಂದಾದಾರಿಕೆ ಶುಲ್ಕವನ್ನು ವಿಧಿಸಲು ಯೋಜಿಸುತ್ತಿದ್ದಾರೆ.

ಎಲಾನ್ ಮಸ್ಕ್ ಅವರು ಟ್ವಿಟ್ಟರ್ (Twitter) ಮಾಲೀಕತ್ವ ವಹಿಸಿದ ಬಳಿಕ ಘೋಷಿಸಲಾಗಿದ್ದ ಟ್ವಿಟ್ಟರ್ ಬ್ಲೂ (Twitter Blue) ಚಂದಾದಾರಿಕೆ' ಸೇವೆಯನ್ನು ಇಂದು ಅಧಿಕೃತವಾಗಿ ಹೊರತಲಾಗಿದೆ. ಯಾರ್ಯಾರ ಬಳಿ ಟ್ವಿಟ್ಟರ್ ಬ್ಲೂ ಟಿಕ್ (Twitter Blue Tick) ಇದೆಯೋ ಅವರ ಖಾತೆಗಳು ಅಸಲಿಯಾಗಿದ್ದು ಮಾಹಿತಿಗಳು ಅಧಿಕೃತವಾಗಿ ಸತ್ಯವಾಗಿರುತ್ತದೆ. ಕಳೆದ ಕೆಲವು ದಿನಗಳಲ್ಲಿ ಎಲೋನ್ ಮಸ್ಕ್ (Elon Musk) ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಆದರೆ ಇದು ಕಾರ್ಯರೂಪಕ್ಕೆ ಬಂದರೆ ಎಲ್ಲವನ್ನೂ ಬದಲಾಯಿಸುತ್ತದೆ ಎಂದು ತೋರುತ್ತದೆ. ಪ್ಲಾಟ್‌ಫಾರ್ಮರ್‌ನ ವರದಿಯು ಮಸ್ಕ್ ಹೆಚ್ಚಿನ ಅಥವಾ ಎಲ್ಲಾ ಬಳಕೆದಾರರಿಗೆ ಟ್ವಿಟರ್ (Twitter) ಅನ್ನು ಬಳಸಲು ಚಂದಾದಾರಿಕೆ ಶುಲ್ಕವನ್ನು ವಿಧಿಸಲು ಯೋಜಿಸುತ್ತಿದೆ. 

ಜನರು ನೀಲಿ ಟಿಕ್ (ಮತ್ತು ಇತರ ವೈಶಿಷ್ಟ್ಯಗಳು) ಗಾಗಿ ಟ್ವಿಟರ್ (Twitter) ಬ್ಲೂ ಚಂದಾದಾರಿಕೆಗೆ ಪಾವತಿಸಬೇಕಾಗುತ್ತದೆ. ಈ ವಿಚಾರವನ್ನು ಇತ್ತೀಚಿನ ಸಭೆಯಲ್ಲಿ ನೌಕರರೊಂದಿಗೆ ಚರ್ಚಿಸಲಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ತಿಂಗಳಿಗೆ ಸೀಮಿತ ಅವಧಿಯವರೆಗೆ ಟ್ವಿಟರ್ ಅನ್ನು ಬಳಸಲು ಎಲ್ಲರಿಗೂ ಅವಕಾಶ ನೀಡಲು ಮಸ್ಕ್ ಯೋಜಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ ನಂತರ ವೆಬ್‌ಸೈಟ್ ಬ್ರೌಸಿಂಗ್ ಮುಂದುವರಿಸಲು ಬಳಕೆದಾರರಿಗೆ ಟ್ವಿಟರ್ ಚಂದಾದಾರಿಕೆಯನ್ನು ಖರೀದಿಸಲು ಕೇಳಲಾಗುತ್ತದೆ.

ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಸೌಲಭ್ಯ ಹೇಗಿದೆ?

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಹೊಂದಿರುವ ಹೊಸ ಆವೃತ್ತಿಯನ್ನು ಇಂದು iOS ಸಾಧನಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯ ಆರಂಭಿಕ ಉಡಾವಣೆಯನ್ನು ಒಳಗೊಂಡಿದ್ದು ಇದೀಗ ಸೈನ್ ಅಪ್ ಮಾಡುವ ಬಳಕೆದಾರರು "ಬ್ಲೂ ಚೆಕ್" ಪರಿಶೀಲನೆಯನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮತ್ತು ಇತರ ಹೊಸ ವೈಶಿಷ್ಟ್ಯಗಳನ್ನು "ಶೀಘ್ರದಲ್ಲೇ ಬರಲಿದೆ" ಎಂದು ಸೂಚಿಸಲಾಗಿದೆ.

ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಯಾವಾಗ ಆರಂಭ ಮತ್ತು ಎಷ್ಟು ಪಾವತಿಸಬೇಕು?

ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯು ನವೆಂಬರ್ ಅಂತ್ಯದ ವೇಳೆಗೆ ಆರಂಭವಾಗಲಿದೆ. ಮುಂದಿನ ಒಂದು ತಿಂಗಳಿನ ಒಂಗಾಗಿ ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ತರುವುದಾಗಿ ಎಲಾನ್ ಮಸ್ಕ್ ಅವರೇ ಖಚಿತಪಡಿಸಿದ್ದಾರೆ. ಭಾರತೀಯ ಬಳಕೆದಾರರ "ಖರೀದಿ ಸಾಮರ್ಥ್ಯ"ವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಒದಗಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾರ್ಯಾರಿಗೆ ಲಭ್ಯ?

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾರು ಬೇಕಾದರೂ ಖರೀದಿಸಬಹುದು. ಸೆಲೆಬ್ರಿಟಿಗಳು, ಕಂಪನಿಗಳು ಮತ್ತು ರಾಜಕಾರಣಿಗಳಂತೆ ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವರು ಅವಕಾಶ ನೀಡಲಿದ್ದಾರೆ. ಹೀಗೆ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗೆ ಗ್ರಾಹಕರಾದ ಪ್ರತಿಯೋರ್ವರಿಗೂ 'ಬ್ಲೂ ಟಿಕ್' ಚಿಹ್ನೆಯ ಜೊತೆಗೆ ಕೆಲವು ಪ್ರಿಮೀಯಂ ವೈಶಿಷ್ಟ್ಯಗಳು ಲಭ್ಯವಾಗುತ್ತದೆ. ಇದನ್ನೇ ಎಲಾನ್ ಮಸ್ಕ್ ಅವರು 'ಪವರ್ ಟು ಪೀಪಲ್' ಎಂದು ಕರೆದಿದ್ದಾರೆ.

ಈಗಾಗಲೇ ಬ್ಲೂ ಟಿಕ್ ಹೊಂದಿರುವ ಖಾತೆಗಳು ಹಣ ಪಾವತಿಸಬೇಕೇ?

ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಆರಂಭವಾದ ನಂತರ ಪ್ರತಿಯೋರ್ವರೂ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದು ಟ್ವಿಟ್ಟರ್ ಖಚಿತಪಡಿಸಿದೆ. ನೀವು ಹೊಸದಾಗಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಪಡೆಯದಿದ್ದರೆ ಈಗಾಗಲೇ ಪರಿಶೀಲಿಸಲಾದ ಟ್ವಿಟ್ಟರ್ 'ಬ್ಲೂ ಟಿಕ್' ಚಿಹ್ನೆಯನ್ನು ಕಳೆದುಕೊಳ್ಳುತ್ತೀರಾ. ಆದರೆ ಈಗಾಗಲೇ ಬ್ಲೂ ಟಿಕ್ ಚಿಹ್ನೆಯನ್ನು ಹೊಂದಿರುವ ಗ್ರಾಹಕರಿಗೆ 90 ದಿನಗಳ ಕಾಲ ವಿನಾಯಿತಿ ಇರಲಿದೆ.

ಟ್ವಿಟ್ಟರ್ ಬ್ಲೂ ಚಿಹ್ನೆಯ ಜೊತೆಗೆ ಪ್ರೀಮಿಯಂ ವೈಶಿಷ್ಟ್ಯಗಳು

ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಖರೀದಿಸಿದ ಗ್ರಾಹಕರು 'ಬ್ಲೂ ಟಿಕ್' ಚಿಹ್ನೆ ಮಾತ್ರವಲ್ಲದೇ 42 ನಿಮಿಷಗಳವರೆಗೆ ದೊಡ್ಡ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆದ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೇ ಟ್ವಿಟ್ಟರ್ ತರುವ ಎಲ್ಲಾ ಹೊಸ ಅಪ್‌ಡೇಟ್‌ಗಳು ಟ್ವಿಟ್ಟರ್ ಬ್ಲೂ ಗ್ರಾಹಕರಿಗೆ ಮೊದಲು ಲಭ್ಯವಿರುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo