WhatsApp Tips and Tricks: ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ವಿಭಿನ್ನ ನಂಬರ್‌ನ ಎರಡು ವಾಟ್ಸಾಪ್ ಬಳಸುವುದು ಸಾಮಾನ್ಯವಾಗಿದೆ. ಅದೇ ರೀತಿ ಒಂದೇ ವಾಟ್ಸಾಪ್ ಅನ್ನು ಫೋನ್ ಮತ್ತು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ನಂತಹ ಬೇರೆ-ಬೇರೆ ಡಿವೈಸ್ ಗಳಲ್ಲಿ ಬಳಸುವುದು ಸಹ ಸಾಮಾನ್ಯವಾಗಿದೆ. ಆದರೆ ಎರಡು ವಿಭಿನ್ನ ಹ್ಯಾಂಡ್‌ಸೆಟ್‌ಗಳಲ್ಲಿ ಒಂದೇ WhatsApp ಅಕೌಂಟ್ ಬಳಸುವುದು ಸುಲಭವೇನಲ್ಲ. WhatsApp ಬಳಕೆದಾರರು ಡೆಸ್ಕ್‌ಟಾಪ್ ಅಥವಾ Android ಟ್ಯಾಬ್ಲೆಟ್ ಅಪ್ಲಿಕೇಶನ್‌ಗಳೊಂದಿಗೆ ತಮ್ಮ ಅಕೌಂಟ್ ಅನ್ನು ಒಂದೇ ನಂಬರ್‌ನ ಮೂಲಕ ಎರಡು ಮೊಬೈಲ್‌ಗೆ ಸಿಂಕ್ ಮಾಡಬಹುದು. ಒಂದೇ ಬಾರಿಗೆ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಅಕೌಂಟ್ ಬಳಸಬಹುದು.
ನಿಮಗೊತ್ತಾ ಎರಡು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಂತೆ ಏಕಕಾಲದಲ್ಲಿ 5 ಫೋನ್‌ಗಳಲ್ಲಿ ಈ WhatsApp ಟ್ರಿಕ್ ಅನ್ನು ಬಳಸಬವುದು. ಬಳಕೆದಾರರು ಸಾಮಾನ್ಯವಾಗಿ ಮತ್ತೊಂದು ಸ್ಮಾರ್ಟ್‌ಫೋನ್‌ಗೆ ಲಾಗ್ ಇನ್ ಮಾಡುವ ಮೊದಲು ಪ್ರಸ್ತುತ ಬಳಸುತ್ತಿರುವ ಫೋನ್ ನಿಂದ ಲಾಗ್ ಔಟ್ ಮಾಡಬೇಕಾಗುತ್ತದೆ. ಆದರೆ ಈ ಟ್ರಿಕ್ಸ್ ಬಳಸುವ ಮೂಲಕ ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಅನ್ನು ಲಾಗ್ ಔಟ್ ಮಾಡದೆಯೇ ಎರಡು ವಿಭಿನ್ನ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಅನ್ನು ಬಳಸಬಹುದು.
ಹೌದು ಈ ಫೀಚರ್ ನಿಮ್ಮ ಅಂಡೊಯ್ಡ್ ಅಥವಾ iOS ಎರಡು ಫೋನ್ಗಳಲ್ಲಿಯೂ ಕಾರ್ಯ ನಿರ್ವಯಿಸುತ್ತದೆ. ಅಂದರೆ ಯಾವುದೇ ಪ್ಲಾಟ್‌ಫಾರ್ಮ್ ಅನ್ನು ಲೆಕ್ಕಿಸದೆ ನೀವು ಎರಡು ಡಿವೈಸ್ ಗಳನ್ನ ಹೊಂದಿದ್ದರೆ ಈ ಫೀಚರ್ ಅನ್ನು ಬಳಸಿಕೊಳ್ಳಬಹುದಾಗಿದೆ. ಹಂತಗಳಿಗೆ ಹೋಗುವ ಮೊದಲು WhatsApp ಅಪ್ಲಿಕೇಶನ್ ಸೆಟಪ್ ಸಮಯದಲ್ಲಿ ಮಾತ್ರ ಇದನ್ನು ಮಾಡಬಹುದು ಎಂದು ನೀವು ತಿಳಿದಿರಬೇಕು.
➥ಮೊದಲಿಗೆ ನಿಮ್ಮ ಪ್ರೈಮರಿ ಡಿವೈಸ್ ನಲ್ಲಿ WhatsApp ಅನ್ನು ಸ್ಥಾಪಿಸಲಾಗಿದ್ಯಾ ಮತ್ತು ಕಾರ್ಯನಿರ್ವಹಿಸುತ್ತಿದ್ಯಾ ಎಂದು ಖಚಿತಪಡಿಸಿಕೊಳ್ಳಿ.
➥ನಂತರ ನಿಮ್ಮ ಎರಡನೇ ಸ್ಮಾರ್ಟ್‌ಫೋನ್‌ಗೆ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ WhatsApp ಅನ್ನು ಡೌನ್‌ಲೋಡ್ ಮಾಡಿ.
➥ಸೆಟಪ್ ಪ್ರಕ್ರಿಯೆಯನ್ನು ಪ್ರಾರಂಭಿಸಿ ನಂತರ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
➥ಅಲ್ಲಿ ಪ್ರೋಗ್ರಾಂ ನಿಮ್ಮ ಫೋನ್ ನಂಬರ್ ಅನ್ನು ಎಂಟ್ರಿ ಮಾಡಲು ಕೇಳುತ್ತದೆ. ಲಿಂಕ್ ಡಿವೈಸ್ ಆಯ್ಕೆಮಾಡಿ.
➥ಎರಡನೇ ಫೋನ್‌ನಲ್ಲಿ ತೋರಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಿಂಕ್ಡ್ ಡಿವೈಸ್ ಆಯ್ಕೆಯನ್ನು ಟ್ಯಾಪ್ ಮಾಡಿ.
➥ನಿಮ್ಮ ಪ್ರೈಮರಿ ಡಿವೈಸ್ ನಿಂದ ಸೈನ್ ಔಟ್ ಮಾಡದೆಯೇ ನೀವು ಈಗ ಎರಡೂ ಡಿವೈಸ್ ಗಳಲ್ಲಿ WhatsApp ಅನ್ನು ಬಳಸಬಹುದು.
➥ಅಷ್ಟೇ ಅಲ್ಲದೇ ಫೈಲ್ ಗಳು,ಫೋಟೋ ಮತ್ತು ವೀಡಿಯೊ ಕರೆ, ವಾಯ್ಸ್ ಮತ್ತು ವೀಡಿಯೊ ಕರೆಗಳು ಇತ್ಯಾದಿ ಸೇರಿದಂತೆ WhatsApp ನ ಎಲ್ಲಾ ಫೀಚರ್‌ಗಳನ್ನು ನೀವು ಪಡೆಯಬವುದು.