WhatsApp ನಲ್ಲಿ ಮಾತುಕತೆ ಮತ್ತಷ್ಟು ಸರಳಗೊಳಿಸಲು ಈಗ ಕನ್ನಡದಲ್ಲಿ ಬಳಸಬಹುದು! ಹೇಗೆ ಅಂತೀರಾ?

WhatsApp ನಲ್ಲಿ ಮಾತುಕತೆ ಮತ್ತಷ್ಟು ಸರಳಗೊಳಿಸಲು ಈಗ ಕನ್ನಡದಲ್ಲಿ ಬಳಸಬಹುದು! ಹೇಗೆ ಅಂತೀರಾ?
HIGHLIGHTS

ವಾಟ್ಸ್​ಆ್ಯಪ್​​ (WhatsApp) ಭಾರತದ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ.

ಪ್ರತಿ ವರ್ಷ ವಾಟ್ಸ್​ಆ್ಯಪ್ (WhatsApp) ಹೊಸ ಹೊಸ ಫೀಚರ್‌ಗಳನ್ನು (WhatsApp Features) ದೇಶದಲ್ಲಿ ಬಳಕೆದಾರರಿಗೆ ನೀಡುತ್ತಿದೆ.

ವಾಟ್ಸ್​ಆ್ಯಪ್​​ (WhatsApp) ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ, ಮಲಯಾಳಂ ಜೊತೆಗೆ ಕನ್ನಡ ಭಾಷೆಗಳನ್ನ ಬೆಂಬಲಿಸುತ್ತದೆ.

ಭಾರತದಲ್ಲಿ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ವಾಟ್ಸ್‌ಆ್ಯಪ್‌ ತನ್ನ ವ್ಯಾಪ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಲೇ ಮುಂದೆ ಸಾಗಿದೆ ಎಂದು ಹೇಳಬಹುದು. ಇದು ಆ್ಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಬಳಸಲು ಲಭ್ಯವಿದ್ದು ಈಗ ಮೊಬೈಲ್‌ನಲ್ಲಿ KaiOS ಇದ್ದರೂ ಸಹ ಇದನ್ನು ಬಳಸಬಹುದು. ಆದರೂ ಭಾರತದಂತಹ ಭಾಷಾವಾರು ವೈವಿಧ್ಯಮಯ ದೇಶದಲ್ಲಿ ಹೆಚ್ಚು ಉಪಯುಕ್ತವಾಗುವ ಅಂತರ್ನಿರ್ಮಿತ ಭಾಷಾ ಬದಲಾವಣೆ ಸೆಟ್ಟಿಂಗ್ ಅನ್ನು ಸಹ ಈ ಅಪ್ಲಿಕೇಶನ್‌ನಲ್ಲಿ ಪಡೆಯಬಹುದಾಗಿದೆ. ಬಳಕೆದಾರರು ತಮ್ಮ ಮೊಬೈಲ್ ಫೋನ್ ಸೆಟ್ಟಿಂಗ್‌ಗಳನ್ನು ಸೆಟ್ ಮಾಡುವ ಮೂಲಕ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸಬಹುದು.

WhatsApp ಭಾಷೆಗಳ ಸೆಟ್ಟಿಂಗ್ ಮಾಡುವುದೇಗೆ? 

ಬಳಕೆದಾರರು ತಮ್ಮ ಮೊಬೈಲ್ ಫೋನ್‌ನ ಭಾಷಾ ಸೆಟ್ಟಿಂಗ್ ಅನ್ನು ಬದಲಾಯಿಸುವುದು ಕೇವಲ ವಾಟ್ಸ್‌ಆ್ಯಪ್‌ ಮಾತ್ರವಲ್ಲ ಅಪ್ಲಿಕೇಶನ್‌ಗಳಾದ್ಯಂತ ಏಕರೂಪವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ನೀವು ಈ ಆ್ಯಂಡ್ರಾಯ್ಡ್ ಮತ್ತು KaiOS ಫೋನ್ ಗಳು ಮತ್ತು ಐಫೋನ್‌ಗಳಲ್ಲಿ ಭಾಷಾ ಸೆಟ್ಟಿಂಗ್ ಅನ್ನು ಹೇಗೆ ಬದಲಾಯಿಸುವುದು ಎಂದು ನೀವು ಗೊಂದಲದಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿಕೊಳ್ಳಿರಿ.

1. ಆ್ಯಂಡ್ರಾಯ್ಡ್ (Android): ನಿಮ್ಮ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಿ ಭಾಷೆಯನ್ನು ಟೈಪ್ ಮಾಡಿ ಮತ್ತು ಸರ್ಚ್ ಬಾರ್‌ನಲ್ಲಿ ಇನ್‌ಪುಟ್ ಭಾಷೆ ಆಯ್ಕೆ ಮಾಡಿ ಮತ್ತು ನಂತರ ಒಂದು ಭಾಷೆಯನ್ನು ಸೇರಿಸಿ. ಬಳಕೆದಾರರಿಗೆ ಹಿಂದಿ, ಬಂಗಾಳಿ, ಮರಾಠಿ ಮತ್ತು ಹೆಚ್ಚಿನ ಪ್ರಾದೇಶಿಕ ಭಾಷೆಯ ಆಯ್ಕೆಗಳು ಲಭ್ಯವಿವೆ.

2. KaiOS:ಈ ಒಎಸ್ ಮುಖ್ಯವಾಗಿ ಜಿಯೋ ಮತ್ತು ನೋಕಿಯಾದ ಫೋನ್ ಗಳಲ್ಲಿ ಲಭ್ಯವಿರುತ್ತದೆ. ಇದು ಅನೇಕ ಪ್ರಾದೇಶಿಕ ಭಾಷೆಗಳನ್ನು ಸಹ ಬೆಂಬಲಿಸುತ್ತದೆ. ಸೆಟ್ಟಿಂಗ್‌ಗೆ ಹೋಗಿ ‘ಪರ್ಸನ್ಲೈಜೇಶನ್’ ಅನ್ನು ಆಯ್ಕೆ ಮಾಡಿ ನಂತರ ನಿಮಗೆ ಬೇಕಾದಂತಹ ಭಾಷೆಯನ್ನು ಆಯ್ಕೆ ಮಾಡಿ. ನೀವು ಬಳಸಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ ಮತ್ತು ‘ಓಕೆ’ ಅಥವಾ ‘ಸೆಲೆಕ್ಟ್’ ಅನ್ನು ಒತ್ತಿರಿ.

3. ಐಫೋನ್ (iPhone): ಐಫೋನ್‌ಗಳು ಕೇವಲ ಪ್ರದೇಶಿಕ ಭಾಷೆಯಲ್ಲಿ ಹಿಂದಿ ಭಾಷೆಯನ್ನು ಮಾತ್ರ ಬೆಂಬಲಿಸುತ್ತದೆ. ಜನಸಂಖ್ಯೆಯ ಕೇವಲ ಒಂದು ಪ್ರತಿಶತದಷ್ಟು ಜನರು ಮಾತ್ರ ಐಫೋನ್ ಬಳಸುವುದರಿಂದ ಕಂಪನಿಯು ಭವಿಷ್ಯದಲ್ಲಿ ಹೆಚ್ಚಿನ ಪ್ರಾದೇಶಿಕ ಭಾಷೆಗಳನ್ನು ಅದರಲ್ಲಿ ಸೇರಿಸುತ್ತದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಭಾಷೆಯನ್ನು ಬದಲಾಯಿಸಲು ಸೆಟ್ಟಿಂಗ್‌ಗೆ ಹೋಗಿ ಭಾಷೆಗಾಗಿ ಹುಡುಕಿ ಮತ್ತು ಐಫೋನ್ ಭಾಷೆಯನ್ನು ಆಯ್ಕೆ ಮಾಡಿ.

ಒಮ್ಮೆ ನಿಮ್ಮ ಮೊಬೈಲ್ ಫೋನಿನ ಭಾಷೆಯನ್ನು ಬದಲಾಯಿಸಿದ ನಂತರ ವಾಟ್ಸ್‌ಆ್ಯಪ್‌ ಸೆಟ್ಟಿಂಗ್‌ಗಳು ಮಾತ್ರ ಪಠ್ಯ ಔಟ್‌ಪುಟ್ ಅನ್ನು ಬದಲಾಯಿಸುತ್ತವೆ ಎಂಬುದನ್ನು ಬಳಕೆದಾರರು ಗಮನಿಸಬೇಕು. ಆದಾಗ್ಯೂ ಚಾಟ್ ಇಂಗ್ಲಿಷ್‌ನಲ್ಲಿ ಮುಂದುವರಿಯುತ್ತದೆ. ನೀವು ಪ್ರಾದೇಶಿಕ ಕೀಬೋರ್ಡ್ ಬಳಸಲು ಬಯಸಿದರೆ ಬಳಕೆದಾರರು ವಿವಿಧ ಭಾಷೆಗಳಿಗೆ ಪ್ರವೇಶ ಪಡೆಯಲು ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಮೂಲಕ ಜಿಬೋರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo