WhatsApp Tips: ವಾಟ್ಸಾಪ್‌ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ ನಿಮಗೊತ್ತಾ?

WhatsApp Tips: ವಾಟ್ಸಾಪ್‌ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ ನಿಮಗೊತ್ತಾ?
HIGHLIGHTS

ವಾಟ್ಸಾಪ್‌ (WhatsApp) HD ವಿಡಿಯೋ ಹಂಚಿಕೆಯ ಫೀಚರ್ (WhatsApp HD Video Sharing) ಫೀಚರ್ ಅನ್ನು ಪರಿಚಯಿಸಿದೆ

ಸದ್ಯಕ್ಕೆ ಈ ಫೀಚರ್ ಅನ್ನು ಕಂಪನಿ ಆಂಡ್ರಾಯ್ಡ್ ಡಿವೈಸ್‌ಗಳಿಗೆ ನೀಡಿದ್ದು ಶೀಘ್ರದಲ್ಲೇ ಐಫೋನ್ ಮತ್ತು ವೆಬ್‌ಗಳಿಗೆ ನಿರೀಕ್ಷಿಸಬಹುದು.

ವಾಟ್ಸಾಪ್ 2.23.17.74 ಲೆಸ್ಟೆಟ್ ಅಪ್‌ಡೇಟ್‌ನೊಂದಿಗೆ ಈ ಫೀಚರ್ ಅನ್ನು ಶುರು ಮಾಡಿದೆ.

ಜಗತ್ತಿನ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ (WhatsApp) ಕಳೆದ ಕೆಲ ದಿನಗಳಲ್ಲಿ ತನ್ನ ಹೆಚ್ಚಿನ ರೆಸಲ್ಯೂಶನ್ಗಳೊಂದಿಗೆ ಇಮೇಜ್ಗಳನ್ನು ಕಳುಹಿಸಲು HD ಇಮೇಜ್ ಹಂಚಿಕೆಯ ಫೀಚರ್ (WhatsApp HD Picture Sharing) ಅನ್ನು ಅಪ್ಲಿಕೇಶನ್ ಒಳಗೆ ಪರಿಚಯಿಸಿತು. ಇದರ ಹಿನ್ನಲೆಯಲ್ಲಿ ವಾಟ್ಸಾಪ್‌ (WhatsApp) ಈಗ ಸಾಮಾನ್ಯ ವಿಡಿಯೋಗಳಿಗೂ ಈ HD ವಿಡಿಯೋ ಹಂಚಿಕೆಯ ಫೀಚರ್ (WhatsApp HD Video Sharing) ಫೀಚರ್ ಅನ್ನು ಪರಿಚಯಿಸಿದೆ. ಸದ್ಯಕ್ಕೆ ಈ ಫೀಚರ್ ಅನ್ನು ಕಂಪನಿ ಆಂಡ್ರಾಯ್ಡ್ ಡಿವೈಸ್‌ಗಳಿಗೆ ನೀಡಿದ್ದು ಶೀಘ್ರದಲ್ಲೇ ಐಫೋನ್ ಮತ್ತು ವೆಬ್‌ಗಳಿಗೆ ನಿರೀಕ್ಷಿಸಬಹುದು.    

ವಾಟ್ಸಾಪ್ HD ವಿಡಿಯೋ ಹಂಚಿಕೆಯ ಫೀಚರ್

ಮೊದಲಿಗೆ ಈಗಾಗಲೇ ಮೇಲೆ ತಿಳಿಸಿರುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು ವಾಟ್ಸಾಪ್ 2.23.17.74 ಲೆಸ್ಟೆಟ್ ಅಪ್‌ಡೇಟ್‌ನೊಂದಿಗೆ ಈ ಫೀಚರ್ ಅನ್ನು ಶುರು ಮಾಡಿದೆ. ನಿಮ್ಮ ಕಾಂಟೆಕ್ಟ್‌ಗಳೊಂದಿಗೆ ಶೇರ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆಮಾಡುವಾಗ ಡಿಸ್ಪ್ಲೇ ಮೇಲೆ ನಿಮಗೆ ಈಗ ಹೊಸ ಫೀಚರ್ HD ಐಕಾನ್ ಅನ್ನು ಕಾಣುತ್ತದೆ. ಇದನ್ನು ಟಚ್ ಮಾಡಿದಾಗ WhatsApp ನಿಮಗೆ ಎರಡು ಆಯ್ಕೆಗಳನ್ನು ನೀಡುತ್ತದೆ. ಅವೆಂದರೆ Standard Quality (480p) ಮತ್ತೊಂದು HD Quality (720p) ರೆಸಲ್ಯೂಶನ್‌ನಲ್ಲಿ ಈಗ ನೀವು ನಿಮ್ಮ ವೀಡಿಯೊಗಳನ್ನು ಕ್ವಾಲಿಟಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಶೇರ್ ಮಾಡಿಕೊಳ್ಳಬಹುದು. ಇದರಲ್ಲಿ ನೀವು ಸುಮಾರು 100mb ವರೆಗಿನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳಬಹುದು

WhatsApp HD video sharing feature

ವಾಟ್ಸಾಪ್‌ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ? 

ಮೊದಲಿಗೆ WhatsApp ಅನ್ನು ಅಪ್ಡೇಟ್ ಮಾಡಿಕೊಂಡು ತೆರೆಯಿರಿ

ಇದರ ನಂತರ ಯಾರಿಗೆ ವಿಡಿಯೋ ಕಳುಹಿಸಬೇಕೋ ಅವರ ಚಾಟ್ ಅನ್ನು ಕ್ಲಿಕ್ ಮಾಡಿ ತೆರೆಯಿರಿ 

ಈಗ ಕೆಳಗೆ ಅಟ್ಯಾಚ್ಮೆಂಟ್ (Attachment) ಐಕಾನ್ ಕ್ಲಿಕ್ ಮಾಡಿ ಗ್ಯಾಲರಿ ಮೇಲೆ ಟ್ಯಾಪ್ ಮಾಡಿ.

ನಂತರ ನೀವು ಕಳುಹಿಸಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ ಟ್ಯಾಪ್ ಮಾಡಿ.

ಈಗ ವಿಡಿಯೋವನ್ನು ಸೆಂಡ್ ಮಾಡುವ ಮೊದಲು ಡಿಸ್ಪ್ಲೇ ಮೇಲೆ ನಿಮಗೆ ಎಡಭಾಗದಲ್ಲಿ HD ಐಕಾನ್ ಕಾಣುತ್ತದೆ

ಇಲ್ಲಿ HD ಗುಣಮಟ್ಟವನ್ನುStandard Quality (480p) ಮತ್ತೊಂದು HD Quality (720p) ರೆಸಲ್ಯೂಶನ್‌ ಆಯ್ಕೆಮಾಡಿ

ಕೊನೆಯದಾಗಿ ವಿಡಿಯೋ ಕ್ವಾಲಿಟಿ ಮಾಡಿದ ನಂತರ ನೇರವಾಗಿ ಸೆಂಡ್ ಮೇಲೆ ಕ್ಲಿಕ್ ಮಾಡಿ ಕಳುಹಿಸಿ ಅಷ್ಟೇ.

ಪ್ರತಿ ವಿಡಿಯೋ ಸೆಂಡ್ ಮಾಡುವಾಗ HD ಐಕಾನ್ ಟಚ್ ಮಾಡಲೇಬೇಕು

ಇದೊಂದು ಉತ್ತಮ ಫೀಚರ್ ಆದರೆ ಬಳಕೆದಾರರು ಪ್ರತಿ ಬಾರಿ ಹೆಚ್ಚಿನ ಈ HD ರೆಸಲ್ಯೂಶನ್‌ನಲ್ಲಿ ವೀಡಿಯೊವನ್ನು ಕಳುಹಿಸುವ ಆಯ್ಕೆಯನ್ನು ಟಾಗಲ್ ಮಾಡಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಅಪ್ಲಿಕೇಶನ್ Standard Quality (480p) ಮತ್ತೊಂದು HD Quality (720p) ರೆಸಲ್ಯೂಶನ್‌ನಲ್ಲಿ ಈಗಾಗಲೇ ಪೂರ್ವನಿಯೋಜಿತವಾಗಿ ನೀವು ಕಳುಹಿಸಿದ ಮತ್ತು ಪಡೆಯುವ ಮೀಡಿಯಾ ಫೈಲ್ ಹೆಚ್ಚಿನ ಸ್ಟೋರೇಜ್ ಅನ್ನು ಬಳಸದಿರುವುದನ್ನು ಬಳಕೆದಾರರು ಖಚಿತಪಡಿಸಿಕೊಳ್ಳಲು ಇದನ್ನು ಈ ರೀತಿಯಾಗಿಯೇ ಇಡಲಾಗಿದೆ. ಅಲ್ಲದೆ ನಿಮ್ಮ ಕ್ವಾಲಿಟಿಗೆ ತಕ್ಕಂತೆ ನಿಮ್ಮ ಮೊಬೈಲ್ ಡೇಟಾದ ಮೇಲೂ ಪರಿಣಾಮ ಬೀರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo