WhatsApp ಚಾಟ್‌ಗಳನ್ನು ಈಗ ಲಾಕ್ ಮಾಡಬಹುದು ಮತ್ತು ಸುರಕ್ಷಿತ ಫೋಲ್ಡರ್‌ನಲ್ಲಿ ಮರೆಮಾಡಬಹುದು.
ಅಲ್ಲದೆ ನೀವು ಮಾತ್ರ WhatsApp ನಲ್ಲಿ ಈ ಚಾಟ್‌ಗಳನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು.
ಲಾಕ್ ಮಾಡಿದ ಚಾಟ್‌ಗಳ ಸಂದೇಶದ ವಿಷಯಗಳು ನೋಟಿಫಿಕೇಶನ್ ಗೋಚರಿಸುವುದಿಲ್ಲ.
ಜಗತ್ತಿನ ಪ್ರಸಿದ್ಧ ತ್ವರಿತ ಮೆಸೇಜ್ ಮಾಡಲು ಅನುಮತಿಸುವ ಜನಪ್ರಿಯ ಅಪ್ಲಿಕೇಶನ್ WhatsApp ಪ್ರತಿ ಬಾರಿ ಒಂದಲ್ಲ ಒಂದು ಫೀಚರ್ಗಳನ್ನು ತನ್ನ ಬಳಕೆದಾರರ ಅನುಭವನ್ನು ಮತ್ತಷ್ಟು ಉತ್ತಮಗೊಳಿಸಲು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ. WhatsApp ನಿಮ್ಮ ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿಡುವ ಗುರಿಯನ್ನು ಹೊಂದಿರುವ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಸೇರಿಸಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಪ್ರಕಟಿಸಿದ WhatsApp ನ 'ಚಾಟ್ ಲಾಕ್' ಫೀಚರ್ ಕೇವಲ ನೀವು ಮಾತ್ರ ಪ್ರವೇಶಿಸಬಹುದಾದ ಸುರಕ್ಷಿತ ಫೋಲ್ಡರ್‌ನಲ್ಲಿ ಇರಿಸಿಕೊಳ್ಳಲು ಅನುಮತಿಸುತ್ತದೆ.
ವಾಟ್ಸಾಪ್ Chat Lock ಫೀಚರ್!
ನೋಟಿಫಿಕೇಶನ್‌ಗಳಲ್ಲಿ ಲಾಕ್ ಆಗಿರುವ ಚಾಟ್‌ಗಳ ವಿಷಯವನ್ನು WhatsApp ಮರೆಮಾಡುತ್ತದೆ. ಈ ವೈಶಿಷ್ಟ್ಯವನ್ನು ಇತ್ತೀಚೆಗೆ ಬೀಟಾದಲ್ಲಿ ಗುರುತಿಸಲಾಗಿದೆ ಮತ್ತು ಇದು ಈಗ Android ಮತ್ತು iOS ಎರಡರಲ್ಲೂ ಎಲ್ಲಾ ಬಳಕೆದಾರರಿಗೆ ಹೊರತರಲು ಪ್ರಾರಂಭಿಸಿದೆ. ನಿಮಗೆ ತಿಳಿದಿರುವಂತೆ WhatsApp ಚಾಟ್‌ಗಳನ್ನು ಈಗ ಲಾಕ್ ಮಾಡಬಹುದು ಮತ್ತು ಸುರಕ್ಷಿತ ಫೋಲ್ಡರ್‌ನಲ್ಲಿ ಮರೆಮಾಡಬಹುದು. ಅಲ್ಲದೆ ಲಾಕ್ ಮಾಡಿದ ಚಾಟ್‌ಗಳ ಸಂದೇಶದ ವಿಷಯಗಳು ನೋಟಿಫಿಕೇಶನ್ ಗೋಚರಿಸುವುದಿಲ್ಲ. ಅಲ್ಲದೆ ನೀವು ಮಾತ್ರ WhatsApp ನಲ್ಲಿ ಈ ಚಾಟ್‌ಗಳನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು.
ಆಂಡ್ರಾಯ್ಡ್ ಮತ್ತು ಆಪಲ್ ಫೋನ್‌ಗಳಲ್ಲಿ Chat Lock ಫೀಚರ್!
ಮೊದಲಿಗೆ ಈ ಹೊಸ ಫೀಚರ್ ಚಾಟ್ ಲಾಕ್ ವೈಶಿಷ್ಟ್ಯವನ್ನು ಚಾಟ್ ಮಾಹಿತಿ ವಿಭಾಗದಲ್ಲಿ ಕಾಣಬಹುದು. ನಿಮಗೆ ಅದನ್ನು ನೋಡಲು ಸಾಧ್ಯವಾಗದಿದ್ದರೆ ನಿಮ್ಮ WhatsApp ಅನ್ನು ಇತ್ತೀಚಿನ Android ಆವೃತ್ತಿ 2.23.11.12 ಆವೃತ್ತಿಗೆ ಅಪ್ಡೇಟ್ ಮಾಡಿಕೊಂಡರೆ ಈ ಫೀಚರ್ ಬಳಸಲು ಅವಕಾಶವಿರುತ್ತದೆ. ಒಂದು ವೇಳೆ ನಿಮ್ಮ iOS ಫೋನ್ಗಲ್ಲಿ ಈ ಅಪ್ಡೇಟ್ ಇಲ್ಲವಾದರೆ ಯಾವುದೇ ಮಾರ್ಗಗಳಿಲ್ಲದೆ ಅಪ್ಡೇಟ್ ಬರುವ ತನಕ ಕಾಯಬೇಕು ಅಷ್ಟೇ. ಇದರೊಂದಿಗೆ ನಿಮ್ಮ ಆಂಡ್ರಾಯ್ಡ್ ಫೋನ್ಗಲ್ಲಿ ನೀವು ಇತ್ತೀಚಿನ ಅಪ್ಡೇಟ್ ಪಡೆದಿದ್ದರೆ ಈ ಫೀಚರ್ ಅನ್ನು ಬಳಸಬಹುದು.
ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಮಾಡುವುದು ಹೇಗೆ?
ನೀವು ಲಾಕ್ ಮಾಡಲು ಬಯಸುವ ನಿರ್ದಿಷ್ಟ ಚಾಟ್ ಇದ್ದರೆ ಅದನ್ನು ತೆರೆಯಿರಿ ಮಾಹಿತಿ ವಿಭಾಗಕ್ಕೆ ಹೋಗಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಚಾಟ್ ಲಾಕ್' ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರ ನಿಮ್ಮ ಫಿಂಗರ್‌ಪ್ರಿಂಟ್‌ನೊಂದಿಗೆ ಚಾಟ್ ಅನ್ನು ಲಾಕ್ ಮಾಡಲು ನೀವು ಪ್ರಾಂಪ್ಟ್ ಅನ್ನು ಪಡೆಯುತ್ತೀರಿ. ಇದರ ನಂತರ ಚಾಟ್ ಅಪ್ಲಿಕೇಶನ್‌ನಲ್ಲಿ ಸುರಕ್ಷಿತ ಫೋಲ್ಡರ್‌ಗೆ ಚಲಿಸುತ್ತದೆ.
ನೀವು ಚಾಟ್ ತೆರೆಯಲು ಬಯಸಿದಾಗ ನೀವು ಫೋಲ್ಡರ್ ಮೇಲೆ ಟ್ಯಾಪ್ ಮಾಡಬಹುದು ನಿಮ್ಮ ಚಾಟ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಬಹುದು.
WhatsApp ನಲ್ಲಿ ಚಾಟ್ ಲಾಕ್ ಅನ್ನು ಬಳಸುವ ಹಂತಗಳು ಇವು. ಮುಂಬರುವ ತಿಂಗಳುಗಳಲ್ಲಿ ಈ ವೈಶಿಷ್ಟ್ಯಕ್ಕಾಗಿ ಹೆಚ್ಚಿನ ಆಯ್ಕೆಗಳನ್ನು ಸೇರಿಸಲು WhatsApp ಯೋಜಿಸಿದೆ. ಇವುಗಳಲ್ಲಿ ಒಂದು ಕಂಪ್ಯಾನಿಯನ್ ಸಾಧನಗಳಿಗೆ ಚಾಟ್‌ಗಳನ್ನು ಲಾಕ್ ಮಾಡುವ ಸಾಮರ್ಥ್ಯ ಮತ್ತು ನಿಮ್ಮ ಚಾಟ್‌ಗಳಿಗಾಗಿ ಕಸ್ಟಮ್ ಪಾಸ್‌ವರ್ಡ್ ಅನ್ನು ರಚಿಸುವುದು. ಈ ರೀತಿಯಾಗಿ ನೀವು ನಿಮ್ಮ ಫೋನ್‌ಗೆ ಬಳಸುವ ಪಾಸ್‌ವರ್ಡ್‌ಗಿಂತ ವಿಭಿನ್ನವಾದ ಅನನ್ಯ ಪಾಸ್‌ವರ್ಡ್ ಅನ್ನು ಬಳಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile