ದೇಶ ಮತ್ತು ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಶಾರ್ಟ್ ವಿಡಿಯೋ ವಲಯದ ಅಪ್ಲಿಕೇಶನ್ TikTok ನಂತೆ ಹೆಚ್ಚು ಜನಪ್ರಿಯಗೊಳ್ಳಲು ಫೇಸ್‌ಬುಕ್ ಒಡೆತನದ ವೀಡಿಯೊ ಶೇರಿಂಗ್ ಸಾಮಾಜಿಕ ನೆಟ್‌ವರ್ಕಿಂಗ್ ಸೇವೆ ಇನ್‌ಸ್ಟಾಗ್ರಾಮ್ ಮತ್ತೆ ಕೆಲವು ಹೊಸ ಫೀಚರ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ ಬೂಮರಾಂಗ್ ಅಲ್ಲಿ ಸ್ಲೊ ಮೊಷನ್, ಎಕೋ ಎಫೆಕ್ಟ್ ಮತ್ತು ಡ್ಯುವೋ ಎಫ್ಫೆಕ್ಟ್ಗಳನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಿಗಾಗಿ ಅಳವಡಿಸಿಸಲಾಗಿದೆ. ಬಳಕೆದಾರರು ಅಗತ್ಯಕ್ಕೆ ಅನುಗುಣವಾಗಿ ರೆಕಾರ್ಡ್ ಮಾಡಿದ ಬೂಮರಾಂಗ್ ಕ್ಲಿಪ್ ಅನ್ನು ಟ್ರಿಮ್ ಮಾಡಲು ಅನುಮತಿಸುತ್ತದೆ. ಜೊತೆಗೆ ಅವನ್ನು ಸ್ಲೊ ಮೊಷನ್, ಎಕೋ ಎಫೆಕ್ಟ್ ಮತ್ತು ಡ್ಯುವೋ ಎಫೆಕ್ಟ್ಗಳೊಂದಿಗೆ ಹೊರ ತರುತ್ತದೆ.
>ಈ ಫೀಚರ್ ಬಳಸುವ ಮುನ್ನ ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಅಪ್ಡೇಟ್ ಮಾಡ್ಕೊಳ್ಳಿ
>ಮೊಬೈಲ್ ಡೇಟಾ ಅಥವಾ ವೈಫೈ ಕನೆಕ್ಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
– ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ತೆರೆದು ಮೇಲಿನ ಎಡ ಮೂಲೆಯಿಂದ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ 1-3 ಸಕೆಂಡ್ ಒತ್ತಿರಿ.
– ಈಗ ಇದನ್ನು ಇಡ್ಕೊಂಡೆ ಎಡಕ್ಕೆ ಸ್ವೈಪ್ ಮಾಡಿ ಮತ್ತು ಬೂಮರಾಂಗ್ ಮೋಡ್ ಆಯ್ಕೆ ಮಾಡಿ.
– ಬೂಮರಾಂಗ್ ವೀಡಿಯೊವನ್ನು ರೆಕಾರ್ಡ್ ಮಾಡಿ ಮೇಲಿನ ಬಲ ಮೂಲೆಯಿಂದ ಇನ್ಫಿನಿಟಿ ಲೋಗೋ ಮೇಲೆ ಟ್ಯಾಪ್ ಮಾಡಿ.
– ಈಗ ಇಲ್ಲಿ ನೀವು ಬಯಸುವ ಎಫೆಕ್ಟ್ ಆಯ್ಕೆ ಮಾಡಿ – ಸ್ಲೊ ಮೊಷನ್, ಎಕೋ ಅಥವಾ ಡ್ಯುವೋ ಎಫೆಕ್ಟ್
– ಇದರ ನಂತರ ರೆಕಾರ್ಡ್ ಮಾಡಿದ ವೀಡಿಯೊವನ್ನು ಹೊಸ ಎಫೆಕ್ಟ್ ಜೊತೆಗೆ ಪೋಸ್ಟ್ ಮಾಡಲು Send ಮೇಲೆ ಟ್ಯಾಪ್ ಮಾಡಿ ಅಷ್ಟೇ.
ಒಮ್ಮೆ ನೀವು ಈ ಹಂತಗಳನ್ನು ಪೂರೈಸಿದ ನಂತರ ನೀವು ಈಗ ಇನ್‌ಸ್ಟಾಗ್ರಾಮ್‌ನಲ್ಲಿನ ಸಾಮಾನ್ಯ ಸ್ಟೋರಿ ಪೋಸ್ಟ್‌ನಂತೆಯೇ ಎಲ್ಲಾ ಸಾಮಾನ್ಯ ಎಫೆಕ್ಟ್ಗಳು ಮತ್ತು ಎಮೋಜಿಗಳು, ಸ್ಟಿಕರ್ಗಳನ್ನು ಸಹ ಸೇರಿಸಬಹುದು. ಇದೇ ರೀತಿಯ ಸರಳ ಮತ್ತು ಅರ್ಥವಾಗುವ ಮಾದರಿಯಲ್ಲಿ ಟೆಕ್ನಾಲಜಿಯ ಅಲ್ಲ ಮಾಹಿತಿಯನ್ನು ಪಡೆಯಲು ಡಿಜಿಟ್ ಕನ್ನಡವನ್ನು Instagram ಮತ್ತು TikTok ಅಲ್ಲಿ ಫಾಲೋ ಮಾಡಿ.