WhatsApp Update 2023: ಈಗ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಮ್ಮ ಸ್ವಂತ ಫೋಟೋಗಳನ್ನು ಬಳಸಿಕೊಂಡು ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ರಚಿಸಬಹುದು. ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಸುಮಾರು ಒಂದು ವರ್ಷದ ಹಿಂದೆಯೇ WhatsApp ನಿಂದ ಸ್ಟಿಕ್ಕರ್ ಮೇಕರ್ ಟೂಲ್ ಅನ್ನು ಪರಿಚಯಿಸಲಾಗಿತ್ತು. ಈ ಹೊಸ ಫೀಚರ್ ಆಪಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ WhatsApp ಹೊಸ ಆವೃತ್ತಿಯೊಂದಿಗೆ ಮಾತ್ರ ಬರುತ್ತದೆ. ಈ ಫೀಚರ್ ಈಗ iOS 16 ಅಥವಾ ಅದಕ್ಕಿಂತ ಮೇಲ್ಪಟ್ಟ ಎಲ್ಲಾ Apple iPhone ಬಳಕೆದಾರರಿಗೆ ಲಭ್ಯವಾಗಿದ್ದು ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಾಗುವಂತೆ ನಿರೀಕ್ಷಿಸಲಾಗುತ್ತಿದೆ.
ವಾಟ್ಸಾಪ್ ಬಳಕೆದಾರರು ಗಮನಿಸಬೇಕಿರುವುದು ಇಲ್ಲಿ iOS ನ ಹಿಂದಿನ ಆವೃತ್ತಿಗಳ ಬಳಕೆದಾರರಿಗೆ ಲಭ್ಯವಾಗುವಂತೆ ಕಂಪನಿಯು ಯಾವುದೇ ಯೋಜನೆಯನ್ನು ಹೊಂದಿಲ್ಲ. WhatsApp ಈ ಫೀಚರ್ ಅನ್ನು ಇನ್ನೂ ಸಾರ್ವಜನಿಕಗೊಳಿಸದಿದ್ದರೂ Android ಬಳಕೆದಾರರು ಶೀಘ್ರದಲ್ಲೇ ಈ ಫೀಚರ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ ನಿಮ್ಮನ್ನು ನೀವು ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ರಚಿಸಬಹುದು.
WhatsApp ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಸ್ಟಿಕ್ಕರ್ ಜನರೇಟರ್ ಆಪಲ್ ಐಫೋನ್‌ನಲ್ಲಿರುವುದಕ್ಕಿಂತ ಬಹಳ ವಿಭಿನ್ನವಾಗಿದೆ. ಇದು iOS 16 ನಲ್ಲಿ ಬಳಕೆದಾರರಿಗೆ ಫೋಟೋವನ್ನು ಕ್ರಾಪ್ ಮಾಡಲು ಮತ್ತು ಸಬ್ಜೆಕ್ಟ್ ಅನ್ನು ಕ್ಲಿಕ್ ಮಾಡಲು ಸಹಾಯ ಮಾಡುತ್ತದೆ. ಇದನ್ನು Apple iPhone ಗಳಲ್ಲಿ ಸ್ಟಿಕ್ಕರ್ ಮೇಕರ್ ಟೂಲ್ನ ಮೂಲಕ ಬಳಸಲಾಗುತ್ತದೆ. ಮೊದಲು ನೀವು ಸ್ಟಿಕ್ಕರ್ ಮಾಡಲು ಬಯಸುವ ಫೋಟೋದಿಂದ ಸಬ್ಜೆಕ್ಟ್ ಅನ್ನು ತೆಗೆದುಹಾಕಬೇಕು.
ನೀವು ಹೊರತೆಗೆದ ಫೋಟೋವನ್ನು WhatsApp ನಲ್ಲಿ ಪೇಸ್ಟ್ ಮಾಡಿದಾಗ ಆ ಫೋಟೋಗಾಗಿ ಸ್ಟಿಕ್ಕರ್ ಅನ್ನು ತಕ್ಷಣವೇ ರಚಿಸಲಾಗುತ್ತದೆ. ನೀವು ಸ್ಟಿಕ್ಕರ್ ಅನ್ನು ಸೇವ್ ಮಾಡಿದ ನಂತರವೂ ಸಹ ಬಳಸಬಹುದು. WhatsApp ನೊಂದಿಗೆ iOS 16 ಅಥವಾ ನಂತರದ ಬಳಕೆದಾರರಿಗೆ ಈ ಫೀಚರ್ ಅನ್ನು ಹೊರತರಲಾಗಿದೆ. ಈ ಫೀಚರ್ ಅನ್ನು ನೀವು ಇನ್ನು ಹೊಂದಿಲ್ಲದಿದ್ದರೆ ಮುಂದಿನ ಕೆಲವು ದಿನಗಳಲ್ಲಿ ಇದನ್ನು ಪಡೆದುಕೊಳ್ಳಲು ನಿರೀಕ್ಷಿಸಬಹುದು. ಅಲ್ಲದೆ ಈ ಹೊಸ ಫೀಚರ್ ನೊಂದಿಗೆ WhatsApp ಅಪ್ಡೇಟ್ ಮೂಲಕ ಹಲವಾರು ಸುಧಾರಣೆಗಳು ಸಹ ಆಗಲಿವೆ.