ಈ ಜನಪ್ರಿಯ ವಾಟ್ಸಾಪ್ ಗ್ರೂಪ್ ಒಂದು ವೇಳೆ ನಿಮ್ಮನ್ನು ಅದರ ಗ್ರೂಪ್ಗೆ ನಿಮ್ಮ ಅನುಮತಿಯಿಲ್ಲದೆ ಸೇರಿಸುವುದನ್ನು ಹೇಗೆ ನಿಲ್ಲಿಸುವುದೆಂದು ಇಲ್ಲಿಂದ ತಿಳಿಯಿರಿ. ನೀವು ಆಸಕ್ತಿ ಹೊಂದಿರದ ಕೆಲವು ಗ್ರೂಪ್ಗಳಿಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಸೇರಿಸಿದಾಗ ನೀವು ತಿಳಿಯದ ಅನೇಕರು ಸಿಗುತ್ತಾರೆ. ಇತ್ತೀಚಿಗೆ ಇದಕ್ಕೆ ಯಾವುದೇ ಪರಿಹಾರವಿರಲಿಲ್ಲ ಆದರೆ ಈಗ ಇದಕೊಂದು ಕೊನೆ ಬಂದಿದೆ. ಅಂತಿಮವಾಗಿ WhatsApp ಬಳಕೆದಾರರ ಒಪ್ಪಿಗೆಯಿಲ್ಲದೇ ಸಮೂಹಕ್ಕೆ ಸಂಖ್ಯೆಯನ್ನು ಸೇರಿಸುವುದನ್ನು ನಿಲ್ಲಿಸುವ ಆಯ್ಕೆಯನ್ನು ಸೇರಿಸಲಾಗಿದೆ. ಇಲ್ಲಿ ಜನರು ನಿಮ್ಮ ಸಂಖ್ಯೆಯನ್ನು WhatsApp ಗ್ರೂಪ್ಗೆ ನಿಮ್ಮ ಅನುಮತಿಯಿಲ್ಲದೆ ಸೇರಿಸುವುದನ್ನು ಹೇಗೆ ನಿಲ್ಲಿಸುವುದೆಂದು ತಿಳಿದುಕೊಳ್ಳೋಣ. ಮೊದಲು ನಿಮ್ಮ WhatsApp ಅನ್ನು ಅಪ್ಡೇಟ್ ಮಾಡೀಕೊಂಡು ಮುಂದಿನ ಹಟ್ಗಳನ್ನು ಅನುಸರಿಸಿ.
> ಮೊದಲಿಗೆ ಮೇಲೆ ಹೇಳಿರುವಂತೆ ನಿಮ್ಮ ಈಗಿನ WhatsApp ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಿ.
> ನಂತರ WhatsApp ತೆರೆದು ನೇರವಾಗಿ Setting ಆಯ್ಕೆಯ ಮಳೆ ಸ್ವಚಿಕ್ಕ್ ಮಾಡಿ.
> ಇಲ್ಲಿ ನೀವು ಮೊದಲ Account ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
> ಇದರ ನಂತರ ಇಲ್ಲಿ ನಿಮಗೆ Privacy ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
> ಕೆಳಗಿನ ಚಿತ್ರದಲ್ಲಿ ತೋರಿರುವಂತೆ ಕೆಳಗೆ Groups ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
> ಇದರ ನಂತರ ಇಲ್ಲಿ ನಿಮಗೆ ಮೂರು ಆಯ್ಕೆಗಳು ಬರುತ್ತವೆ. Everyone, My Contacts ಮತ್ತು Nobody.
> ಈಗ ಇಲ್ಲಿ ನೀವು ಕೊನೆಯ ಆಯ್ಕೆ ಅಂದ್ರೆ Nobody ಅನ್ನು ಆಯ್ಕೆ ಮಾಡಬೇಕಾಗುತ್ತದೆ ಅಷ್ಟೇ.
ಈ ರೀತಿಯಲ್ಲಿ ನಿಮ್ಮ ಸಮ್ಮತಿಯಿಲ್ಲದೆ WhatsApp ಗುಂಪುಗಳಿಗೆ ನಿಮ್ಮ ಸಂಖ್ಯೆಯನ್ನು ಸೇರಿಸುವುದನ್ನು ನಿಲ್ಲಿಸಬಹುದು. ನೆನಪಿನಲ್ಲಿಡಿ ಆದರೆ ಗುಂಪಿನ ನಿರ್ವಾಹಕರು ನಿಮ್ಮನ್ನು ಖಾಸಗಿಯಾಗಿ ಆಹ್ವಾನಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ನೀವು ಅದನ್ನು ಸ್ವೀಕರಿಸಿದರೆ ಮಾತ್ರ ನೀವುಆ ಅವರ ಗುಂಪಿಗೆ ಸೇರ್ಪಡೆಗೊಳ್ಳುತ್ತೀರಿ.