WhatsApp Update: ಇಂದಿನ ದಿನಗಳಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್ ಎರಡು ಸಹ ಒಂದು ನಾಣ್ಯದ ಎರಡು ಮುಖದಂತೆಯಾಗಿವೆ. ಏಕೆಂದರೆ ವಾಟ್ಸಾಪ್ ಈಗ ನಾವು ಕೇಳಿರುವ ಕೆಲವು ಹೊಸ ಫೀಚರ್‌ಗಳನ್ನು ಹೇಗೆ ಬಳಸುವುದು ಎಂದು ತಿಳಿದಿರುವುದಿಲ್ಲ. ಆಧುನಿಕ ಯುಗದಲ್ಲಿ ಪರಸ್ಪರ ಸಂಪರ್ಕದಲ್ಲಿರಲು ವಾಟ್ಸಾಪ್ ಸಹಾಯಕವಾಗಿದೆ. ಈ ದಿನದಂದು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಪ್ರಯತ್ನದಲ್ಲಿ WhatsApp ಹೊಸ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್‌ನ ಸ್ಟೇಟಸ್ ಅಪ್ಡೇಟ್ ಫೀಚರ್ ಜನಪ್ರಿಯವಾಗಿದ್ದು ಹೆಚ್ಚಿನ ಬಳಕೆದಾರರಿಂದ ಈ ಫೀಚರ್ ಬಳಸಲ್ಪಡುತ್ತಿದೆ.
ಫೇಸ್‌ಬುಕ್‌ಗೆ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಪೋಸ್ಟ್ ಮಾಡುವುದು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. 24 ಗಂಟೆಗಳ ಕಾಲ ಮಾನ್ಯವಾಗಿರುವ WhatsApp ಸ್ಟೇಟಸ್ ಟೆಕ್ಸ್ಟ್, ಫೋಟೋಗಳು ಮತ್ತು ವೀಡಿಯೊಗಳನ್ನು ಒಳಗೊಂಡಿರುತ್ತದೆ. ಮತ್ತೊಂದೆಡೆಯಲ್ಲಿ Facebook, Instagram ಮತ್ತು Snapchat ಸ್ಟೇಟಸ್ ಸಹ ಇದೇ ರೀತಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿಗೆ ಅಪ್ಡೇಟ್ ಆದ WhatsApp ಅಪ್ಲಿಕೇಶನ್ ನಲ್ಲಿ ಸ್ಟೇಟಸ್ ರಿಂಗ್ ಫೀಚರ್ ಅನ್ನು ಸೇರಿಸಲಾಗಿದೆ. WhatsApp ಬಳಕೆದಾರರ ಸ್ಟೇಟಸ್ ಅನ್ನು ಅವರ ಪ್ರೊಫೈಲ್ ಫೋಟೋ ಪಕ್ಕದಲ್ಲಿ ಸಣ್ಣ ಸರ್ಕಲ್ ಒಂದರಲ್ಲಿ ಪ್ರದರ್ಶಿಸಲಾಗುತ್ತದೆ.
ಈಗಾಗಲೇ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಎರಡರಲ್ಲು ಈ ಸ್ಟೇಟಸ್ ಫೀಚರ್ ಮೂಲಕ ಬಳಕೆದಾರರು ಈಗ ವಾಟ್ಸಾಪ್ ಸ್ಟೇಟಸ್ ಹಂಚಿಕೊಳ್ಳಬಹುದು. ಆದರೆ ವಾಟ್ಸಾಪ್ ನಲ್ಲಿ ಹೆಚ್ಚು ದಿನ ಈ ಫೀಚರ್ ಲಭ್ಯವಿರುವುದಿಲ್ಲ. WhatsApp ನ ಬಳಕೆದಾರರಿಗಾಗಿ ಇದೀಗ ಹೊಸ ಅಪ್‌ಡೇಟ್ ಒಂದನ್ನ ಬಿಡುಗಡೆ ಮಾಡಿದ್ದು ಅಪ್ಲಿಕೇಶನ್‌ನಿಂದ ನೇರವಾಗಿ ತಮ್ಮ WhatsApp ಸ್ಟೇಟಸ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು. ಅದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ನಿಮ್ಮ ಮೊಬೈಲ್ ನಲ್ಲಿ WhatsApp Open ಮಾಡಿ.
2. ಸ್ಟೇಟಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
3. ಕ್ಯಾಮರಾ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು Facebook ನಲ್ಲಿ ನೀವು ಹಂಚಿಕೊಳ್ಳಲು ಬಯಸುವ ಸ್ಟೇಟಸ್ ಅನ್ನು ಆಯ್ಕೆಮಾಡಿ.
4. ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
5. ಸ್ಟೇಟಸ್ ಪೋಸ್ಟ್ ಮಾಡಿದ ನಂತರ ಪಕ್ಕದಲ್ಲಿರುವ 3 ಅಡ್ಡಲಾಗಿರುವ ಗೆರೆಗಳ ಮೇಲೆ ಕ್ಲಿಕ್ ಮಾಡಿ.
6. ಇದರ ನಂತರ 'Share on Facebook' ಆಯ್ಕೆ ಮಾಡಿ.
7. ನಿಮ್ಮ WhatsApp ಖಾತೆಯನ್ನು ನೀವು ಇನ್ನು ಫೇಸ್‌ಬುಕ್‌ಗೆ ಲಿಂಕ್ ಮಾಡದಿದ್ದರೆ ಅದನ್ನು ಲಿಂಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
8. ನೀವು ಬಯಸಿದರೆ ಯಾವುದೇ ಹೊಸ ಕ್ಯಾಪ್ಶನ್ ಅಥವಾ ಕಾಮೆಂಟ್‌ಗಳನ್ನು ಸೇರಿಸಬಹುದು.
9. ನೀವು ಪೋಸ್ಟ್ ಅನ್ನು ಹಂಚಿಕೊಳ್ಳಲು ಬಯಸುವ ಪ್ರೇಕ್ಷಕರನ್ನು Public, Friends, ಅಥವಾ Only Me ಮೂಲಕ ಆಯ್ಕೆ ಮಾಡಬಹುದು.
10. ನಂತರ Facebook ನಲ್ಲಿ ನಿಮ್ಮ WhatsApp ಸ್ಟೇಟಸ್ ಅನ್ನು ಹಂಚಿಕೊಳ್ಳಲು 'ಪೋಸ್ಟ್' ಬಟನ್ ಅನ್ನು ಕ್ಲಿಕ್ ಮಾಡಿ.