Voice Status: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಜನಪ್ರಿಯ ಮೆಸೇಜ್ ಕಳುಹಿಸುವ ಒಂದು ಸೇವೆಯಾಗಿದೆ. ಇದರಲ್ಲಿ ಬಳಕೆದಾರರು ಟೆಕ್ಸ್ಟ್ ಮೆಸೇಜ್ಗಳು, ವಾಯ್ಸ್ ಮೆಸೇಜ್ಗಳನ್ನು ಕಳಿಹಿಸಬಹುದು ಜೊತೆಗೆ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಇದೀಗ ಅಪ್ಲಿಕೇಶನ್‌ನ ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ವಾಯ್ಸ್ ಸ್ಟೇಟಸ್ ಅನ್ನು ಶೇರ್ ಮಾಡಬಹುದು. ವಾಟ್ಸಾಪ್ (WhatsApp) ಈ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ಶೇರ್ ಮಾಡುವ ಮೂಲಕ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ನಿಮ್ಮ ಸ್ನೇಹಿತರೊಂದಿಗೆ ನೇರವಾಗಿ ಮಾತನಾಡಲು ಒಂದು ಅದ್ಭುತ ಮಾರ್ಗವಾಗಿದೆ.
ಹಂತ 1: ಮೊದಲಿಗೆ ನಿಮ್ಮ Android ಫೋನ್‌ನಲ್ಲಿ WhatsApp Open ಮಾಡಿ
ಹಂತ 2: ಸ್ಕ್ರೀನ್ ಕೆಳಭಾಗದಲ್ಲಿರುವ "ಸ್ಟೇಟಸ್" ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ಹಂತ 3: ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ "+" ಐಕಾನ್ ಅನ್ನು ಕ್ಲಿಕ್ ಮಾಡಿ.
ಹಂತ 4: ಈ ಹಂತದಲ್ಲಿ ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಲು ಮೈಕ್ರೊಫೋನ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ 5: ಮೈಕ್ರೊಫೋನ್ ಬಟನ್ ಅನ್ನು ಪ್ರೆಸ್ ಮಾಡುವ ಮೂಲಕ ನಿಮ್ಮ ವಾಯ್ಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಿ. ಇಲ್ಲಿ ನೀವು 30 ಸೆಕೆಂಡುಗಳ ಆಡಿಯೊವನ್ನು ರೆಕಾರ್ಡ್ ಮಾಡಬಹುದು.
ಹಂತ 6: ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಿದ ನಂತರ ಪ್ರಿವ್ಯೂಗಾಗಿ "ಪ್ಲೇ" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 7: ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಸರಿಯಿದ್ದರೆ ಅದನ್ನು ನಿಮ್ಮ ಕಾಂಟೆಕ್ಟ್‌ಗಳೊಂದಿಗೆ ಶೇರ್ ಮಾಡಲು "Send" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 8: “Add a caption” ಬಟನ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ನಲ್ಲಿ ಟೆಕ್ಸ್ಟ್ ಅನ್ನು ಸಹ ನೀವು ಸೇರಿಸಬಹುದು.
ಹಂತ 9: ಕೊನೆಯದಾಗಿ ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ಶೇರ್ ಮಾಡಲು ಬಯಸುವ ವ್ಯಕ್ತಿಗಳನ್ನು ಆಯ್ಕೆ ಮಾಡಿದ ನಂತರ "Send" ಬಟನ್ ಟ್ಯಾಪ್ ಮಾಡಿ ಅಷ್ಟೇ.
ಹಂತ 1: ನಿಮ್ಮ iPhone ನಲ್ಲಿ WhatsApp Open ಮಾಡಿ.
ಹಂತ 2: ಸ್ಕ್ರೀನ್ ಕೆಳಭಾಗದಲ್ಲಿರುವ "ಸ್ಟೇಟಸ್" ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ಹಂತ 3: ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ "+" ಐಕಾನ್ ಅನ್ನು ಕ್ಲಿಕ್ ಮಾಡಿ.
ಹಂತ 4: ಈ ಹಂತದಲ್ಲಿ ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಲು ಮೈಕ್ರೊಫೋನ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ 5: ಮೈಕ್ರೊಫೋನ್ ಬಟನ್ ಅನ್ನು ಪ್ರೆಸ್ ಮಾಡುವ ಮೂಲಕ ನಿಮ್ಮ ವಾಯ್ಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಿ. ಇಲ್ಲಿ ನೀವು 30 ಸೆಕೆಂಡುಗಳ ಆಡಿಯೊವನ್ನು ರೆಕಾರ್ಡ್ ಮಾಡಬಹುದು.
ಹಂತ 6: ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಿದ ನಂತರ ಪ್ರಿವ್ಯೂಗಾಗಿ "ಪ್ಲೇ" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 7: ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ಸರಿಯಿದ್ದರೆ ಅದನ್ನು ನಿಮ್ಮ ಕಾಂಟೆಕ್ಟ್‌ಗಳೊಂದಿಗೆ ಶೇರ್ ಮಾಡಲು "Send" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 8: “Add a Caption” ಬಟನ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವಾಯ್ಸ್ ಸ್ಟೇಟಸ್ ಮೆಸೇಜ್ ನಲ್ಲಿ ಟೆಕ್ಸ್ಟ್ ಅನ್ನು ಸಹ ಸೇರಿಸಬಹುದು.