WhatsApp Tips: ಅನವಶ್ಯಕ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಸ್ವಲ್ಪ ತಲೆನೋವು ಅನಿಸುತ್ತೆ ಅಲ್ವ. ಆದರೆ ಈಗ ವಾಟ್ಸಾಪ್‌ನಲ್ಲಿ ನಂಬರ್ ಸೇವ್ ಮಾಡದೇ ಮೆಸೇಜ್ ಮಾಡಬಹುದು.
ಜಾಗತಿಕವಾಗಿ ಅತ್ಯಂತ ಜನಪ್ರಿಯ ಮೆಸೇಜ್ ಕಳುಹಿಸುವಿಕೆ ಅಪ್ಲಿಕೇಶನ್ ವಾಟ್ಸಾಪ್ (WhatsApp) ಮೆಸೇಜ್ ಕಳಿಸುವುದು ತುಂಬಾ ಸುಲಭ ಮತ್ತು ಸರಳ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಅಂದ್ರೆ ಅನವಶ್ಯಕ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಸ್ವಲ್ಪ ತಲೆನೋವು ಅನಿಸುತ್ತೆ ಅಲ್ವ. ಅಪರಿಚಿತರೊಂದಿಗೆ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ ಒಂದೆರಡು ಬರಿ ನಾವು ಯೋಚಿಸುವುದು ಅನಿವಾರ್ಯವಾಗಿದೆ.
ಹಂತ 1: ಮೊದಲಿಗೆ ವೆಬ್ ಬ್ರೌಸರ್ ತೆರೆಯಿರಿ ಮತ್ತು ನಂತರ ನಿಮ್ಮ ಫೋನ್‌ನ ಬ್ರೌಸರ್ ತೆಗೆದು URL ನಲ್ಲಿ ಈ ಲಿಂಕ್ ಬಳಸಿ https://api.whatsapp.com/send?phone=number
ಹಂತ 2: ಸಂಖ್ಯೆಯ ಸ್ಥಳದಲ್ಲಿ ನೀವು ದೇಶದ ಕೋಡ್ನೊಂದಿಗೆ WhatsApp ಮೆಸೇಜ್ ಕಳುಹಿಸಲು ಬಯಸುವ ವ್ಯಕ್ತಿಯ ಫೋನ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಅಂತರರಾಷ್ಟ್ರೀಯ ಸ್ವರೂಪದಲ್ಲಿ ಫೋನ್ ಸಂಖ್ಯೆಯನ್ನು ಸೇರಿಸುವಾಗ ಯಾವುದೇ ಸೊನ್ನೆಗಳು, ಬ್ರಾಕೆಟ್‌ಗಳು ಅಥವಾ ಡ್ಯಾಶ್‌ಗಳಿದ್ದರೆ ಅದನ್ನು ಬಿಟ್ಟುಬಿಡಿ.
ಹಂತ 4: ನೀವು ನೀಡಿದ ಸಂಖ್ಯೆಯು ವಾಟ್ಸಾಪ್ (WhatsApp) ಖಾತೆಯನ್ನು ಹೊಂದಿರಬೇಕು.
ಹಂತ 5: ಈಗ ವಾಟ್ಸಾಪ್ (WhatsApp) ಇದರಲ್ಲಿ ಮೆಸೇಜ್ ಬಟನ್ ಕ್ಲಿಕ್ ಮಾಡಿ.
ಹಂತ 6: ಮೆಸೇಜ್ ಕಳುಯಿಸುವ ನಂಬರ್ ಹಾಕಿದಾಗ ನಿಮ್ಮನ್ನು WhatsApp ಅಪ್ಲಿಕೇಶನ್‌ಗೆ ಕರೆದೊಯ್ಯಲಾಗುತ್ತದೆ.
ಹಂತ 7: ಈ ಪುಟಕ್ಕೆ ಭೇಟಿ ನೀಡಿದ ನಂತರ WhatsApp ನಿಮ್ಮನ್ನು ಹಸಿರು ಮೆಸೇಜ್ ಬಟನ್‌ನೊಂದಿಗೆ ವೆಬ್‌ಸೈಟ್‌ಗೆ ನಿರ್ದೇಶಿಸುತ್ತದೆ.
ಹಂತ 8: ನೀವು ನಮೂದಿಸಿದ ಸಂಖ್ಯೆಯೊಂದಿಗೆ ಮಾತನಾಡಲು ಈ ಬಟನ್ ಅನ್ನು ಕ್ಲಿಕ್ ಮಾಡಿ ಅಷ್ಟೇ.
ಈ ರೀತಿಯಾಗಿ ಬಳಕೆದಾರರು ವಾಟ್ಸಾಪ್ (WhatsApp) ಸಂಖ್ಯೆಯನ್ನು ಉಳಿಸದೆಯೇ Android ಮತ್ತು iOS ಎರಡರಲ್ಲೂ ಯಾವುದೇ ನೋಂದಾಯಿತ WhatsApp ಸಂಖ್ಯೆಗೆ ಮಾತನಾಡಬಹುದು. ಈ ರೀತಿಯ ಕಾರ್ಯವನ್ನು ನೀಡುವ ಕೆಲವು ಅಪ್ಲಿಕೇಶನ್‌ಗಳು ಸಹ ಇವೆ. ವಾಟ್ಸಾಪ್ (WhatsApp) ಈ ಪ್ರಪಂಚದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.
ಈ ದಿನಗಳಲ್ಲಿ ಬಹುತೇಕ ಎಲ್ಲರೂ WhatsApp ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ಬಳಸಬವುದು. ಈಗ ಇದು ಮಾಧ್ಯಮ ಮತ್ತು ಡಾಕ್ಯುಮೆಂಟ್‌ಗಳ ಹಂಚಿಕೆಗೆ ಒಂದು ನಿಲುಗಡೆ ಪರಿಹಾರವಾಗಿದೆ. ಜೊತೆಗೆ WhatsApp ಪಾವತಿಗಳು ಮತ್ತು WhatsApp ವ್ಯಾಪಾರಗಳು ಈ Facebook-ಮಾಲೀಕತ್ವದ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಹೆಚ್ಚಿನ ಮಾರ್ಗಗಳನ್ನು ತರುತ್ತಿವೆ.