WhatsApp ಫೆಬ್ರವರಿಯಲ್ಲಿ "ಸ್ಟೇಟಸ್" ಫೀಚರ್ ಅನ್ನು ಬಳಕೆದಾರರಿಗೆ ಅಧಿಕೃತಗೊಳಿಸಿತು. ಇದರಲ್ಲಿ ಬಳಕೆದಾರರು ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ನಂತರ 24 ಗಂಟೆಗಳ ನಂತರ ಅವೇಲ್ಲ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಈ ವೈಶಿಷ್ಟ್ಯವನ್ನು ಮೊದಲು ಬಳಕೆದಾರರು ಮತ್ತು ಸ್ನಾತಕೋತ್ತರ ತಜ್ಞರು ಸ್ನಾಪ್ಚಾಟ್ ಸ್ಟೋರೀಸ್ನ "ಕ್ಲೋನ್" ಎಂದು ಕರೆಯುತ್ತಾರೆ. ಅದೇನೇ ಇದ್ದರೂ ಈ ವೈಶಿಷ್ಟ್ಯವು ನಿಧಾನವಾಗಿ ಪ್ರತಿ ಬಳಕೆದಾರರಿಗೆ ಈಗ ಹೆಚ್ಚು ಜನಪ್ರಿಯವಾಗಿದೆ.
WhatsApp ಸ್ಟೇಟಸ್ ಅಪ್ಡೇಟ್ಗಳು ಸ್ವಭಾವತಃ ಕಣ್ಮರೆಯಾಗುತ್ತವೆ. ಆದ್ದರಿಂದ ಇವೇಲ್ಲವನ್ನು ಉಳಿಸಲು WhatsApp ಯಾವುದೇ "ಅಧಿಕೃತ" ಮಾರ್ಗವನ್ನು ಒದಗಿಸುವುದಿಲ್ಲ. ಆದರೆ ಫೋಟೋಗಳನ್ನು ಸ್ಟೇಟಸ್ಗಳ ಸೇವ್/ಡೌನ್ಲೋಡ್ ಮಾಡಲು ಬಳಕೆದಾರರು ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತಾರೆ. ಆದರೆ ವೀಡಿಯೊಗಳು ಮತ್ತು GIF ಗಳ ಬಗ್ಗೆ ಏನು ಮಾಡುತ್ತೀರಾ? ಇಲ್ಲಿ ನಾವು ನಿಮಗೆ ಸ್ಟೇಟಸಲ್ಲಿ ಹಾಕಿರುವ ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಹೇಗೆ ಸೇವ್/ಡೌನ್ಲೋಡ್ ಮಾಡಿಕೊಳ್ಳಬವುದೆಂದು ತಿಳಿಸುತ್ತೇವೆ.
ನಿಮ್ಮ ಸ್ನೇಹಿತರ WhatsApp ಸ್ಟೇಟಸ್ ಸೇವ್/ಡೌನ್ಲೋಡ್ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಅವಲಂಬಿಸಬಹುದು. ಪ್ಲೇ ಸ್ಟೋರ್ಗೆ ಹೋಗಿ ಅಲ್ಲಿಂದ 'Status Saver' ಈ ಅಪ್ಲಿಕೇಶನ್ ಬಳಸುವ ಮೂಲಕ ನೀವು ಸ್ವಯಂಚಾಲಿತವಾಗಿ ಪೂರ್ತಿಯಾಗಿ ನೋಡಿದ ಸ್ಟೇಟಸ್ಗಳನ್ನು ಮಾತ್ರ ಸಂಗ್ರಹಿಸುತ್ತದೆ. ಮತ್ತು ತನ್ನದೆಯಾದ ರೀತಿಯಲ್ಲಿ ಅವುಗಳನ್ನು ಗ್ಯಾಲರಿಯಲ್ಲಿ ತೋರಿಸುತ್ತದೆ.
ನಂತರ WhatsApp ತೆರೆದು ನೀವು ಸೇವ್/ಡೌನ್ಲೋಡ್ ಮಾಡಲು ಬೇಕಾಗಿರುವ ಸ್ಟೇಟಸ್ಗಳನ್ನು ಪೂರ್ತಿಯಾಗಿ ನೋಡಿ.
ನಂತರ ಸೇವ್/ಡೌನ್ಲೋಡ್ ಮಾಡಲು ಬಯಸುವ ಫೋಟೋಗಳು, ವೀಡಿಯೊಗಳು ಮತ್ತು GIFಗಳನ್ನು ಆಯ್ಕೆ ಮಾಡಿ ಮತ್ತು ಸೇವ್ ಐಕಾನ್ ನಲ್ಲಿ ಟ್ಯಾಪ್ ಮಾಡಿ.
ನೀವು ಸೇವ್/ಡೌನ್ಲೋಡ್ ಮಾಡಲು ಬಯಸುವ ಫೋಟೋಗಳು, ವೀಡಿಯೊಗಳು ಮತ್ತು GIFಗಳು ನಿಮ್ಮ ಗ್ಯಾಲರಿಯಲ್ಲಿ ಸಂಗ್ರಹವಾಗುತ್ತವೆ.
ಹೀಗೆ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಅವರು ಹಾಕಿರುವ ಫೋಟೋಗಳು, ವೀಡಿಯೊಗಳು ಮತ್ತು GIFಗಳನ್ನು ಸುಲಭವಾಗಿ ಸೇವ್ ಮಾಡಿಕೊಂಡು ನೀವು ಬಳಸಬವುದು.