digit zero1 awards

WhatsApp ಸ್ಟೇಟಸಲ್ಲಿ ಬರುವ ಫೋಟೋ, ವೀಡಿಯೊಗಳನ್ನು ಹೀಗೆ ಡೌನ್ಲೋಡ್ ಮಾಡಬವುದು

WhatsApp ಸ್ಟೇಟಸಲ್ಲಿ ಬರುವ ಫೋಟೋ, ವೀಡಿಯೊಗಳನ್ನು ಹೀಗೆ ಡೌನ್ಲೋಡ್ ಮಾಡಬವುದು
HIGHLIGHTS

ಸ್ಟೇಟಸಲ್ಲಿ ಹಾಕಿರುವ ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಹೇಗೆ ಸೇವ್/ಡೌನ್ಲೋಡ್ ಮಾಡಿಕೊಳ್ಳಬವುದೆಂದು ತಿಳಿಸುತ್ತೇವೆ.

ಪ್ಲೇ ಸ್ಟೋರ್ಗೆ ಹೋಗಿ ಅಲ್ಲಿಂದ 'Status Saver' ಈ ಅಪ್ಲಿಕೇಶನ್ ಬಳಸುವ ಮೂಲಕ ಸೇವ್/ಡೌನ್ಲೋಡ್ ಮಾಡಿಕೊಳ್ಳಬವುದು

ನೀವು ಸೇವ್/ಡೌನ್ಲೋಡ್ ಮಾಡಲು ಬಯಸುವ ಫೋಟೋಗಳು, ವೀಡಿಯೊಗಳು ಮತ್ತು GIFಗಳು ನಿಮ್ಮ ಗ್ಯಾಲರಿಯಲ್ಲಿ ಸಂಗ್ರಹವಾಗುತ್ತವೆ.

WhatsApp ಫೆಬ್ರವರಿಯಲ್ಲಿ "ಸ್ಟೇಟಸ್" ಫೀಚರ್ ಅನ್ನು ಬಳಕೆದಾರರಿಗೆ ಅಧಿಕೃತಗೊಳಿಸಿತು. ಇದರಲ್ಲಿ ಬಳಕೆದಾರರು ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ನಂತರ 24 ಗಂಟೆಗಳ ನಂತರ ಅವೇಲ್ಲ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಈ ವೈಶಿಷ್ಟ್ಯವನ್ನು ಮೊದಲು ಬಳಕೆದಾರರು ಮತ್ತು ಸ್ನಾತಕೋತ್ತರ ತಜ್ಞರು ಸ್ನಾಪ್ಚಾಟ್ ಸ್ಟೋರೀಸ್ನ "ಕ್ಲೋನ್" ಎಂದು ಕರೆಯುತ್ತಾರೆ. ಅದೇನೇ ಇದ್ದರೂ ಈ ವೈಶಿಷ್ಟ್ಯವು ನಿಧಾನವಾಗಿ ಪ್ರತಿ ಬಳಕೆದಾರರಿಗೆ ಈಗ ಹೆಚ್ಚು ಜನಪ್ರಿಯವಾಗಿದೆ.

WhatsApp ಸ್ಟೇಟಸ್ ಅಪ್ಡೇಟ್ಗಳು ಸ್ವಭಾವತಃ ಕಣ್ಮರೆಯಾಗುತ್ತವೆ. ಆದ್ದರಿಂದ ಇವೇಲ್ಲವನ್ನು ಉಳಿಸಲು WhatsApp ಯಾವುದೇ "ಅಧಿಕೃತ" ಮಾರ್ಗವನ್ನು ಒದಗಿಸುವುದಿಲ್ಲ. ಆದರೆ ಫೋಟೋಗಳನ್ನು ಸ್ಟೇಟಸ್ಗಳ ಸೇವ್/ಡೌನ್ಲೋಡ್ ಮಾಡಲು ಬಳಕೆದಾರರು ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತಾರೆ. ಆದರೆ  ವೀಡಿಯೊಗಳು ಮತ್ತು GIF ಗಳ ಬಗ್ಗೆ ಏನು ಮಾಡುತ್ತೀರಾ? ಇಲ್ಲಿ ನಾವು ನಿಮಗೆ ಸ್ಟೇಟಸಲ್ಲಿ ಹಾಕಿರುವ ಫೋಟೋಗಳು, ವೀಡಿಯೊಗಳು ಮತ್ತು GIF ಗಳನ್ನು ಹೇಗೆ ಸೇವ್/ಡೌನ್ಲೋಡ್ ಮಾಡಿಕೊಳ್ಳಬವುದೆಂದು ತಿಳಿಸುತ್ತೇವೆ.

ನಿಮ್ಮ ಸ್ನೇಹಿತರ WhatsApp ಸ್ಟೇಟಸ್ ಸೇವ್/ಡೌನ್ಲೋಡ್ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಅವಲಂಬಿಸಬಹುದು. ಪ್ಲೇ ಸ್ಟೋರ್ಗೆ ಹೋಗಿ ಅಲ್ಲಿಂದ 'Status Saver' ಈ ಅಪ್ಲಿಕೇಶನ್ ಬಳಸುವ ಮೂಲಕ ನೀವು ಸ್ವಯಂಚಾಲಿತವಾಗಿ ಪೂರ್ತಿಯಾಗಿ ನೋಡಿದ ಸ್ಟೇಟಸ್ಗಳನ್ನು ಮಾತ್ರ ಸಂಗ್ರಹಿಸುತ್ತದೆ. ಮತ್ತು ತನ್ನದೆಯಾದ ರೀತಿಯಲ್ಲಿ ಅವುಗಳನ್ನು ಗ್ಯಾಲರಿಯಲ್ಲಿ ತೋರಿಸುತ್ತದೆ.

ನಂತರ WhatsApp ತೆರೆದು ನೀವು ಸೇವ್/ಡೌನ್ಲೋಡ್ ಮಾಡಲು ಬೇಕಾಗಿರುವ ಸ್ಟೇಟಸ್ಗಳನ್ನು ಪೂರ್ತಿಯಾಗಿ ನೋಡಿ.

ನಂತರ ಸೇವ್/ಡೌನ್ಲೋಡ್ ಮಾಡಲು ಬಯಸುವ ಫೋಟೋಗಳು, ವೀಡಿಯೊಗಳು ಮತ್ತು GIFಗಳನ್ನು ಆಯ್ಕೆ ಮಾಡಿ ಮತ್ತು ಸೇವ್ ಐಕಾನ್ ನಲ್ಲಿ ಟ್ಯಾಪ್ ಮಾಡಿ.

ನೀವು ಸೇವ್/ಡೌನ್ಲೋಡ್ ಮಾಡಲು ಬಯಸುವ ಫೋಟೋಗಳು, ವೀಡಿಯೊಗಳು ಮತ್ತು GIFಗಳು ನಿಮ್ಮ ಗ್ಯಾಲರಿಯಲ್ಲಿ ಸಂಗ್ರಹವಾಗುತ್ತವೆ.

ಹೀಗೆ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಅವರು ಹಾಕಿರುವ ಫೋಟೋಗಳು, ವೀಡಿಯೊಗಳು ಮತ್ತು GIFಗಳನ್ನು ಸುಲಭವಾಗಿ ಸೇವ್ ಮಾಡಿಕೊಂಡು ನೀವು ಬಳಸಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo