ಇತ್ತೀಚೆಗೆ ಬಿಡುಗಡೆ ಆಗಿರುವ ಬಹುತೇಕ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ (Call recorder) ಆಯ್ಕೆ ನೀಡಲಾಗುತ್ತಿದೆ. ಇದರಿಂದ ಬಳಕೆದಾರರಿಗೆ ತುಂಬಾ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ವಾಟ್ಸ್ಆ್ಯಪ್ನಲ್ಲಿ (WhatsApp) ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ಪ್ರತಿ ತಿಂಗಳು ವಾಟ್ಸ್ಆ್ಯಪ್ನಲ್ಲಿ ಸುಮಾರು100 ಬಿಲಿಯನ್ ಮೆಸೇಜ್ಗಳು ಹರಿದಾಡುತ್ತಿವೆ. ಪ್ರತಿದಿನ 100 ಕೋಟಿಗೂ ಅಧಿಕ ಮಂದಿ ಕರೆ ಮಾಡುತ್ತಿದ್ದಾರೆ. ಆದರೇ ವಾಟ್ಸ್ಆ್ಯಪ್ ಕರೆಗಳನ್ನು (WhatsApp Call) ರೆಕಾರ್ಡ್ ಮಾಡಲು ಇಲ್ಲಿವರೆಗೂ ಯಾವುದೇ ಫೀಚರ್ಗಳು ಬರಲಿಲ್ಲ. ಇದರಿಂದ ಹಲವು ಬಳಕೆದಾರರು ನಿರಾಶೆಗೊಳಗಾಗಿದ್ದರು ಆದರೇ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.
ಸಾಮಾನ್ಯವಾಗಿ ವಾಟ್ಸ್ಆ್ಯಪ್ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಸ್ಮಾರ್ಟ್ಫೋನ್ ಇರುವುದು ಅವಶ್ಯ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್ಗಳಲ್ಲಿ ಒಂದಾದ “ವಾಯ್ಸ್ ರೆಕಾರ್ಡರ್” ಬಳಸಬಹುದು.
Otter.Ai app ಕೂಡ ವಾಯ್ಸ್ ರೆಕಾರ್ಡ್ಗೆ ಪರಿಣಾಮಕಾರಿಯಾಗಿದ್ದು ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.
ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಲವು ವಾಯ್ಸ್ ಕಾಲ್ ರೆಕಾರ್ಡ್ ಗಳು ಲಭ್ಯವಿದೆ. ಇದರಲ್ಲಿ “ರೆಕಾರ್ಡ್ ವಾಟ್ಸ್ಆ್ಯಪ್ ಕಾಲ್” ಅತ್ಯುತ್ತಮವಾಗಿ ಬಳಕೆ ಸ್ನೇಹಿಯಾಗಿದೆ. ಇದರಲ್ಲಿ ಅಟೋಮ್ಯಾಟಿಕ್ ಆಗಿ ವಾಟ್ಸ್ಆ್ಯಪ್ ಕರೆಗಳು ರೆಕಾರ್ಡ್ ಆಗುವುದು ಮಾತ್ರವಲ್ಲದೆ ಗೂಗಲ್ ಡ್ರೈವ್ಗೂ ಅಪ್ಲೋಡ್ ಆಗುವುದು.
ವಾಟ್ಸ್ಆ್ಯಪ್ನಲ್ಲಿ ವಾಯ್ಸ್ ಕಾಲ್ ನಂತೆಯೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಬಹುದು. ಇದಕ್ಕೆ ಕೂಡ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಡಿಯು ರೆಕಾರ್ಡರ್ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್ ರೆಕಾರ್ಡರ್ ಆಪ್ ಆಗಿದೆ. ಈ ಆ್ಯಪ್ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು ಸ್ಕ್ರೀನ್ ಮೇಲಿನ ಪ್ಲೋಟಿಂಗ್ ಐಕಾನ್ ಮೂಲಕ ಸ್ಕ್ರೀನ್ ರೆಕಾರ್ಡ್ ಮಾಡಬಹುದಾಗಿದೆ.
ಪ್ಲೋಟಿಂಗ್ ಐಕಾನ್ ನಿಮಗೆ ವಿವಿಧ ಆಯ್ಕೆಗಳನ್ನು ನೀಡುತ್ತದೆ. ನೀವು ಸ್ಕ್ರೀನ್ ರೆಕಾರ್ಡ್ ಅನ್ನು ಇಲ್ಲಿ ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದಾಗಿದೆ. ಅದಲ್ಲದೇ ವಿಡಿಯೋದಲ್ಲಿ ಶಬ್ಧವಿದ್ದರೆ ಅದನ್ನು ಕೂಡ ಡಿಯು ರೆಕಾರ್ಡರ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಆ್ಯಪ್ ಮೂಲಕ ವಿಡಿಯೋ ಕಾಲಿಂಗ್ ರೆಕಾರ್ಡ್ ಮಾಡುವುದು ಉತ್ತಮವಾಗಿದೆ.