WhatsApp Tips: ಈ ವಿಷಯ ನಿಜಕ್ಕೂ ತುಂಬಾ ಜನರಿಗೆ ಹೆಚ್ಚು ಅವಶ್ಯವಾಯಿರುತ್ತದೆ. ಕೆಲವೊಮ್ಮೆ ನಿಮಗೆ ಬಂದ ಮೆಸೇಜ್ ಹಲವಾರು ಕಾರಣದಿಂದಾಗಿ ಡಿಲೀಟ್ ಕೂಡ ಆಗುತ್ತದೆ. ಆದರೆ ಆ ಮೆಸೇಜ್ ಅಲ್ಲಿ ಏನಿರಬಹುದು, ಡಿಲೀಟ್ ಮಾಡಲು ಕಾರಣವೇನು ಎನ್ನೋ ಪ್ರಶ್ನೆಗಳು ಬರುವುದು ಅನಿವಾರ್ಯ. ಆದರೆ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಓದಲು ನಾವು ಹಲವಾರು ಟ್ರಿಕ್ಸ್ ಬಳಸುತ್ತೇವೆ. ಇದರಿಂದ ನಮಗೆ ಕೆಲವು ಪ್ರೈವಸಿ ಪ್ರಾಬ್ಲಮ್ ಆಗಬಹುದು. ಆದರೂ ಈ ರೀತಿಯಾಗಿ ನಿಮಗೆ ವಾಟ್ಸಪ್ನಲ್ಲಿ ಬಂದು ಡಿಲೀಟ್ ಆದ ಮೆಸ್ಸೇಜ್ಗಳನ್ನು ಪುನಃ ಓದಬಹುದು.
ಡಿಲೀಟ್ ಆದ ಮೆಸೇಜ್ಗಳನ್ನು ನೋಡಲು ಎರಡು ವಿಧಾನಗಳಿವೆ. ನೀವು ಹಳೆಯ ಚಾಟ್ ಬ್ಯಾಕಪ್ ಬಳಸಿ ಇದನ್ನು ಹಿಂಪಡೆಯಬಹುದು. ಆದರೆ ಇದನ್ನು ಮಾಡಲು ನೀವು WhatsApp ಬ್ಯಾಕಪ್ ಅನ್ನು ಆನ್ ಮಾಡಬೇಕು. WhatsApp ಚಾಟ್ ಬ್ಯಾಕಪ್‌ಗಾಗಿ ಐದು ಆಯ್ಕೆಗಳನ್ನು ನೀಡುತ್ತದೆ. Never, Manual Backup, Daily Backup, Weekly ಮತ್ತು Monthly Backup ಮೂಲಕ ನೀವು ಪ್ರತಿದಿನ ಮೆಸೇಜ್ ಕಳುಹಿಸುವವರು ಕೆಲವೇ ಸೆಕೆಂಡುಗಳಲ್ಲಿ ಸಾಮಾನ್ಯವಾಗಿ ಅದನ್ನು ಡಿಲೀಟ್ ಮಾಡುವುದರಿಂದ ಅದನ್ನು ಬ್ಯಾಕಪ್ ಮಾಡುವುದು ಉತ್ತಮ. ಈ ವಿಧಾನದಿಂದ ಡಿಲೀಟ್ ಆದ ಮೆಸೇಜ್ಗಳನ್ನು ನೀವು ನೋಡಬಹುದು.
ನಿಮಗೆ ಬಂದು ಡಿಲೀಟ್ ಆದ WhatsApp ಮೆಸೇಜ್ಗಳನ್ನು ನೋಡಲು ಮತ್ತೊಂದು ವಿಧಾನವೆಂದರೆ ನೋಟಿಕೇಶನ್ ಹಿಸ್ಟರಿ ಅನ್ನು ನೋಡುವುದು. ಆಂಡ್ರಾಯ್ಡ್ 11 ಮತ್ತು ನಂತರದ ಅಪ್ಡೇಟ್ ಗಳು ಮಾತ್ರ ಈ ಫೀಚರ್ ಅನ್ನು ಹೊಂದಿವೆ. ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಇದನ್ನು ಪ್ರಾರಂಭಿಸಬಹುದು. ಇದನ್ನು ಪ್ರಾರಂಭಿಸಲು ನೀವು ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು. ನಂತರ ನೀವು ನೋಟಿಕೇಶನ್ ಲಿಂಕ್‌ಗೆ ಹೋಗಿ.
ಇದರ ನಂತರ ಮೋರ್ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ. ಇದರ ನಂತರ ನೀವು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ನೋಟಿಕೇಶನ್ ಹಿಸ್ಟರಿ ಅನ್ನು ಆನ್ ಮಾಡಿ. ಈ ಆಯ್ಕೆ ಆನ್ ಮಾಡಿದಾಗ ಮೇಲಿನ ವಿಧಾನದಂತೆ ನಿಮ್ಮ ಫೋನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನೀವು ಪಡೆದ ಪ್ರತಿಯೊಂದು ನೋಟಿಕೇಶನ್ ಅನ್ನು ನೀವು ವೀಕ್ಷಿಸಬಹುದು. ಇದರಲ್ಲಿ ಡಿಲೀಟ್ ಆದ ಮೆಸೇಜ್ಗಳು ಸಹ ಒಳಗೊಂಡಿರುತ್ತವೆ. ಆದರೆ ಇದನ್ನು ಬಳಸಿಕೊಂಡು ನೀವು ಟೆಕ್ಸ್ಟ್ ಮೆಸೇಜ್ಗಳನ್ನು ಮಾತ್ರ ಓದಲು ಸಾಧ್ಯವಾಗುತ್ತದೆ.