ಭಾರತವು ಈ ವರ್ಷ ತನ್ನ 74ನೇ ಗಣರಾಜ್ಯ ದಿನವನ್ನು 26ನೇ ಜನವರಿ 2023 ರಂದು ಆಚರಿಸಲಿದೆ.
ಬಿಆರ್ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ.
ಈ ವರ್ಷದ ರಿಪಬ್ಲಿಕ್ ಡೇ WhatsApp ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸುವುದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ.
ಭಾರತವು ಈ ವರ್ಷ ತನ್ನ 74ನೇ ಗಣರಾಜ್ಯ ದಿನವನ್ನು 26ನೇ ಜನವರಿ 2023 ರಂದು ಆಚರಿಸಲಿದೆ. ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಭಾರತದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನವಾಗಿ ನೆನಪಿಸಿಕೊಳ್ಳಲು ಅಥವಾ ಗುರುತಿಸಲು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಬಿಆರ್ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಈ ದೇಶದ ಹಬ್ಬಕ್ಕಾಗಿ ಜನರು ಪರಸ್ಪರ ಶುಭಾಶಯಗಳನ್ನು ಕೋರಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು WhatsApp ಸ್ಟಿಕ್ಕರ್‌ಗಳು ಮತ್ತು Quotes ಗಳನ್ನು ಡೌನ್‌ಲೋಡ್ ಮಾಡಲು ಇಚ್ಛಿಸುತ್ತಾರೆ. ಅವರಲ್ಲಿ ನೀವು ಒಬ್ಬರಾಗಿದ್ದಾರೆ ಈ ವರ್ಷದ ರಿಪಬ್ಲಿಕ್ ಡೇ WhatsApp ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸುವುದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ.
ರಿಪಬ್ಲಿಕ್ ಡೇ WhatsApp ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಕಳುಹಿಸುವುದು ಹೇಗೆ:
ಹಂತ 1 : ಮೊದಲಿಗೆ Google Play Store ತೆರೆಯಿರಿ ಗಣರಾಜ್ಯೋತ್ಸದ WhatsApp ಸ್ಟಿಕ್ಕರ್‌ಗಳನ್ನು ಹುಡುಕಿ.
ಹಂತ 2 : ಈಗ ನಿಮ್ಮ ಆದ್ಯತೆಯ ಸ್ಟಿಕ್ಕರ್ ಪ್ಯಾಕ್ ಅನ್ನು ಆಯ್ಕೆ ಮಾಡಿ ಮತ್ತು ಡೌನ್‌ಲೋಡ್ ಮಾಡಿ.
ಹಂತ 3 : ಸ್ಟಿಕ್ಕರ್ ಪ್ಯಾಕ್ ಅನ್ನು ತೆರೆದ ನಂತರ "Add" ಅಥವಾ "Add to WhatsApp" ಬಟನ್ ಅನ್ನು ಆಯ್ಕೆಮಾಡಿ.
ಹಂತ 4 : ಖಚಿತಪಡಿಸಲು Add ಬಟನ್ ಮೇಲೆ ಮತ್ತೊಮ್ಮೆ ಟ್ಯಾಪ್ ಮಾಡಿ.
ಹಂತ 5 : ಒಮ್ಮೆ ನೀವು Add ಮಾಡಿದ ನಂತರ WhatsApp ಗೆ ಹೋಗಿ ಮತ್ತು ನೀವು ಅವುಗಳನ್ನು ಕಳುಹಿಸಲು ಬಯಸುವ ಚಾಟ್ ವಿಂಡೋವನ್ನು ಆಯ್ಕೆ ಮಾಡಿ.
ಹಂತ 6 : ಸ್ಟಿಕ್ಕರ್‌ಗಳ ವಿಭಾಗಕ್ಕೆ ಹೋಗಿ ಮತ್ತು ಹೊಸದಾಗಿ Add ಮಾಡಲಾದ ಸ್ಟಿಕ್ಕರ್ ಪ್ಯಾಕ್‌ಗೆ ನ್ಯಾವಿಗೇಟ್ ಮಾಡಿ.
ಹಂತ 7 : ಯಾವುದೇ ಸ್ಟಿಕ್ಕರ್ ಅನ್ನು ಕಳುಹಿಸಲು ಈಗ ಇದನ್ನು ಟ್ಯಾಪ್ ಮಾಡಿ.
ಗಣರಾಜ್ಯೋತ್ಸವದ ವಿಶೇಷತೆ
ಭಾರತೀಯ ಸಂವಿಧಾನದ ಪೀಠಿಕೆಯು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ರಾಜ್ಯವೆಂದು ಘೋಷಿಸುತ್ತದೆ. ಈ ಮಧ್ಯೆ ಬ್ರಾಂಡ್‌ಗಳು ಗಣರಾಜ್ಯೋತ್ಸವದ ಆಚರಣೆಯನ್ನು ಮಾರಾಟದ ಹೆಚ್ಚಳಕ್ಕೆ ಜೋಡಿಸಲು ಅವಸರದಲ್ಲಿವೆ. ಭಾರತದಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಎಲ್ಲಾ ಸಂತೋಷದ ಸಂದರ್ಭಗಳಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಈ ಡೀಲ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಲಭ್ಯವಿರುತ್ತದೆ ಮತ್ತು ನೀವು ಶಾಪಿಂಗ್ ಮಾಡಲು ಹೇಗೆ ಆರಿಸುತ್ತೀರಿ ಎಂಬುದರ ಆಧರಿಸಿ ನೀವು ವಿವಿಧ ರಿಯಾಯಿತಿಗಳನ್ನು ಪಡೆದುಕ್ಕೊಳ್ಳುತ್ತಿರಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile