ಇಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ (Instagram) ಅನೇಕ ಜನರ ದೈನಂದಿನ ಡಿಜಿಟಲ್ ಅಸ್ತಿತ್ವದ ಅವಿಭಾಜ್ಯ ಅಂಗವಾಗಿದೆ.
ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯನ್ನು ನೀವು ಹೇಗೆ ನಿಷ್ಕ್ರಿಯಗೊಳಿಸುವುದು ಹೇಗೆ?
ಇಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಅನೇಕ ಜನರ ದೈನಂದಿನ ಡಿಜಿಟಲ್ ಅಸ್ತಿತ್ವದ ಅವಿಭಾಜ್ಯ ಅಂಗವಾಗಿದೆ. ನೀವು ಯಾವುದಾದರೊಂದು ಕಾರಣಕ್ಕೆ ನಿಮ್ಮ Instagram ಖಾತೆಯನ್ನು ಡಿಲೀಟ್ ಮಾಡಲು ಯೋಚಿಸುತ್ತಿದ್ದರೆ ಅದನ್ನು ಹೇಗೆ ಮಾಡುವುದು ಎನ್ನುವುದರ ಬಗ್ಗೆ ತುಂಬ ಜನರಿಗೆ ಮಾಹಿತಿ ಇಲ್ಲ. ಇದಕ್ಕಾಗಿಯೇ ಕೆಲವು ಜನರು ತಮ್ಮ Instagram ಖಾತೆಗಳನ್ನು ವಿರಾಮಕ್ಕಾಗಿ ಡಿಲೀಟ್ ಮಾಡಲು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಆಯ್ಕೆ ಮಾಡಬಹುದು. ಯಾಕೆಂದರೆ ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ Instagram ಖಾತೆಯನ್ನು ಡಿಲೀಟ್ ಮಾಡುವುದು ಅಸ್ತು ಸುಲಭವಲ್ಲ. ಆದ್ದರಿಂದ ಇದನ್ನು ಹೇಗೆ ಮಾಡುವುದು ಎನ್ನುವುದರ ಬಗ್ಗೆ ಹಂತ ಹಂತವಾಗಿ ತಿಳಿಸಲಾಗಿದೆ.
Also Read: 8GB RAM ಮತ್ತು 5500mAh ಬ್ಯಾಟರಿಯ OnePlus Nord 4 5G ಸ್ಮಾರ್ಟ್ಫೋನ್ ಬೆಲೆ ಇಳಿಕೆ! ಹೊಸ ಬೆಲೆ ಮತ್ತು ಫೀಚರ್ಗಳೇನು?
ನಿಮ್ಮ ಮೊಬೈಲ್‌ನಿಂದ Instagram ಅಕೌಂಟನ್ನು ಡಿಲೀಟ್ ಮಾಡೋದು ಹೇಗೆ?
ಹಂತ 1: ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಅಥವಾ ಐಫೋನ್ ಡಿವೈಸ್‌ಗಳಲ್ಲಿ Instagram ಅಪ್ಲಿಕೇಶನ್ ತೆರೆದು ಮೆನು ಮೇಲೆ ಕ್ಲಿಕ್ ಮಾಡುವ ಮೂಲಕ ಖಾತೆಯ ಪ್ರೊಫೈಲ್‌ಗೆ ಹೋಗಿ.
ಹಂತ 2: ಇದರ ನಂತರ ನೇರವಾಗಿ Personal details > Account Ownership ಮತ್ತು Control> Deactivation or deletion ಮಾಡಲು ಹೋಗಿ.
ಹಂತ 3: ನೀವು ತೆಗೆದುಹಾಕಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ಖಾತೆಯನ್ನು ಡಿಲೀಟ್ ಮಾಡಿ ಆಯ್ಕೆಮಾಡಿ ನಂತರ ಮುಂದುವರಿಸಿ ಟ್ಯಾಪ್ ಮಾಡಿ.
ಹಂತ 4: ನಿಮ್ಮ ಖಾತೆಯನ್ನು ಡಿಲೀಟ್ ಮಾಡಲು ಕಾರಣವನ್ನು ಆಯ್ಕೆಮಾಡಿ. ನಿಮ್ಮ Instagram ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ನಿಮ್ಮ Instagram ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
ನಿಮ್ಮ ಕಂಪ್ಯೂಟರ್‌ನಿಂದ Instagram ಅಕೌಂಟನ್ನು ಡಿಲೀಟ್ ಮಾಡೋದು ಹೇಗೆ?
ಹಂತ 1: ಮೊದಲಿಗೆ ನಿಮ್ಮ ಕಂಪ್ಯೂಟರ್‌ನಲ್ಲಿರುವ ಯಾವುದೇ ಬ್ರೌಸರ್‌ನಲ್ಲಿ ನಿಮ್ಮ Instagram ಖಾತೆಗೆ ಸೈನ್ ಇನ್ ಮಾಡಿ. ಕೆಳಗಿನ ಲಿಂಕ್ ಅನ್ನು ನಮೂದಿಸಿ: https://www.instagram.com/accounts/remove/request/permanent/
ಹಂತ 2: ಈಗ ಡ್ರಾಪ್-ಡೌನ್ ಮೆನುವಿನಿಂದ ಕಾರಣವನ್ನು ಆಯ್ಕೆಮಾಡಿ ಮತ್ತು ನಿಮ್ಮ Instagram ಪಾಸ್‌ವರ್ಡ್ ಅನ್ನು ಮರು-ನಮೂದಿಸಿ.
ಹಂತ 3: ಕೆಳಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಖಾತೆಗಳ ಕೇಂದ್ರ ಆಯ್ಕೆಯನ್ನು ಆರಿಸಿ.
ಹಂತ 4: ಅಲ್ಲದೆ Personal details > Account Ownership ಮತ್ತು Control> Deactivation or deletion ಮಾಡಲು ಹೋಗಿ.
ಹಂತ 5: ನೀವು ಡಿಲೀಟ್ ಮಾಡಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ಮುಂದಿನ ಪರದೆಯಲ್ಲಿ ಖಾತೆಯನ್ನು ಡಿಲೀಟ್ ಮಾಡು ಟ್ಯಾಪ್ ಮಾಡಿ.
ಹಂತ 6: ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ನಿಮ್ಮ Instagram ಖಾತೆಯನ್ನು ಡಿಲೀಟ್ ಮಾಡಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.
Instagram ಖಾತೆಯನ್ನು ಮರುಸಕ್ರಿಯಗೊಳಿಸುವುದು ಹೇಗೆ
ನೀವು Instagram ನಿಷ್ಕ್ರಿಯಗೊಳಿಸುವುದರೊಂದಿಗೆ ನೀವು ಮತ್ತೆ ನಿಮ್ಮ Instagram ಖಾತೆಯನ್ನು ಷರತ್ತುಗಳೊಂದಿಗೆ ಪುನಃ ಲಾಗ್ ಇನ್ ಮಾಡಬಹುದು. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ನಿಮ್ಮ Instagram ಖಾತೆಯನ್ನು ನೀವು ಹೇಗೆ ನಿಷ್ಕ್ರಿಯಗೊಳಿಸುವುದು ಹೇಗೆ ಎನ್ನುವುದು ತಿಳಿದಿರಬಹುದು. ಇದರೊಂದಿಗೆ ನಿಮ್ಮ ಖಾತೆಯನ್ನು ಡಿಲೀಟ್ ಮಾಡಿದ ನಂತರ ಅಥವಾ ನಿಷ್ಕ್ರಿಯಗೊಳಿಸಿದ ನಂತರ ನಿಮ್ಮ ಮನಸ್ಸನ್ನು ಬದಲಾಯಿಸಿದರೆ ಅದನ್ನು ಪುನಃ ಸಕ್ರಿಯಗೊಳಿಸಲು Instagram ನಿಮಗೆ ಅನುಮತಿಸುತ್ತದೆ. ನಿಮ್ಮ ಖಾತೆಯನ್ನು ಡಿಲೀಟ್ ಮಾಡಲು ಅಥವಾ ನಿಷ್ಕ್ರಿಯಗೊಳಿಸಿದ ನಂತರ 30 ದಿನಗಳೊಳಗೆ ಮತ್ತೆ ಬೇಕಿದ್ದರೆ Instagram ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿಕೊಳ್ಳಬಹುದು. ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಇದರೊಂದಿಗೆ ನಿಮ್ಮ ಖಾತೆಯನ್ನು ನೀವು ಸುಲಭವಾಗಿ ಬಳಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile