WhatsApp Trick: ವಾಟ್ಸಾಪ್ ಅಲ್ಲಿ ಯಾವುದೇ ವಿಡಿಯೋವನ್ನು GIF ಆಗಿ ಬದಲಾವಣೆ ಮಾಡಿ ಹೀಗೆ ಕಳುಯಿಸಬವುದು.

WhatsApp Trick: ವಾಟ್ಸಾಪ್ ಅಲ್ಲಿ ಯಾವುದೇ ವಿಡಿಯೋವನ್ನು GIF ಆಗಿ ಬದಲಾವಣೆ ಮಾಡಿ ಹೀಗೆ ಕಳುಯಿಸಬವುದು.
HIGHLIGHTS

ವಾಟ್ಸಾಪ್ ಅಲ್ಲಿ GIF ಗೆ ಪರಿವರ್ತಿಸುವ ಕೆಲ ವೆಬ್ ಉಪಕರಣಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ತಿಳಿದುಕೊಳ್ಳಿ.

ಇಂದಿನ ದಿನಗಳಲ್ಲಿ GIFಗಳು ಹೆಚ್ಚಾಗಿ ಸೋಶಿಯಲ್ ನೆಟ್ವರ್ಕ್ಗಳಲ್ಲಿ ಹಲವಾರು ವರ್ಷಗಳಿಂದ ಕಾಣಿಸಿಕೊಂಡರೂ ಆದರೆ ವಾಸ್ತವವಾಗಿ ಪ್ರಸಿದ್ಧವಾಗಿರುವ ಮತ್ತು ಪ್ರಪಂಚದ ಅತಿ ಹೆಚ್ಚು ಬಳಕೆಯಲ್ಲಿರುವ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ WhatsApp ಈಗಾಗಲೇ ಈ ರೀತಿಯ ಮೋಜಿನ ಮತ್ತು ಹೆಚ್ಚು ಆಕರ್ಷಿತ ಚಿತ್ರಗಳನ್ನು ಕಳುಹಿಸುವುದನ್ನು ಅನುಮತಿಸುತ್ತದೆ. ಅಲ್ಲದೆ ಅದರ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಈ ಫೀಚರನ್ನು ಸಾಮಾನ್ಯ ಜನರಿಗೆ ನೀಡುತ್ತಿರುವ ಈ ಸನ್ನಿವೇಶದಲ್ಲಿ GIF ಗಳ ಬಳಕೆಯನ್ನು ಮತ್ತಷ್ಟು ವಿಸ್ತರಿಸಿದೆ. 

ಇದಕ್ಕಾಗಿ ಈ ಅಸಾಮಾನ್ಯವಾದ ಲೇಖನದಲ್ಲಿ ನಾವು ಕೇವಲ ವೀಡಿಯೊವನ್ನು GIF ಗೆ ಪರಿವರ್ತಿಸುವ ಸಾಮರ್ಥ್ಯವನ್ನು ಒದಗಿಸುವ ಕೆಲವು ವೆಬ್ ಉಪಕರಣಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ನಾವು ತೋರಿಸುತ್ತೇವೆ. ಆದ್ದರಿಂದ ಇದೀಗ ಹೆಚ್ಚು ಸಮಯವನ್ನು ವ್ಯರ್ಥಮಾಡದೆ ಈ ಮೂಲಕ WhatsApp ನಲ್ಲಿ ಯಾವುದೇ ವಿಡಿಯೋವನ್ನು GIF ಆಗಿ ಬದಲಾವಣೆ ಮಾಡಿ ಸೆಂಡ್ ಮಾಡುವುದೇಗೆಂದು ಇಲ್ಲಿಂದ ತಿಳಿದುಕೊಳ್ಳಿ. 

ಮೊದಲಿಗೆ ಇದನ್ನು ಮಾಡಲು ಇಲ್ಲಿಂದ Giphy ಸೈಟ್ಗೆ ಹೋಗಬೇಕಾಗಿದೆ.

ಇದರ ಮೇಲಿನ ಕೊನೆಯಲ್ಲಿ ನಿಮಗೊಂದು + ಆಕಾರದ ಐಕಾನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ  

ಈಗ ನೀವು ಕೇವಲ GIF ಗೆ ಪರಿವರ್ತಿಸಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ ಇಲ್ಲಿಡಿ.

ಮೇಲಿನ ಹಂತದ ನಂತರ ನೀವು ಬಯಸಿದರೆ ನೀವು ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಕೆಲವು ಸೆಟ್ಟಿಂಗ್ಗಳನ್ನು ಕಾನ್ಫಿಗರ್ ಮಾಡಬಹುದು.
ನಂತರ ಸರಳವಾಗಿ ರಚಿಸಿ GIF  ಬಟನ್ ಅನ್ನು ಕ್ಲಿಕ್ ಮಾಡಿ.

-Giphy ಅಲ್ಲಿ ನಾವು URL ಅನ್ನು ಸಹ ಯೂಟ್ಯೂಬ್ನಂತಹ ನಿರ್ದಿಷ್ಟ ಪ್ಲಾಟ್ಫಾರ್ಮ್ಗಳಲ್ಲಿ ಹೋಸ್ಟ್ ಮಾಡಲಾಗಿರುವ ವೀಡಿಯೋದಲ್ಲಿ GIF ಅನ್ನು ಸಹ ಮಾಡಬಹುದು. 

ಈ ರೀತಿಯ Giphy ಅಥವಾ ZGif ನಂತಹ ಪ್ರಸಿದ್ಧ GIF ಪ್ಲ್ಯಾಟ್ಫಾರ್ಮ್ಗಳು 100MB ಗಿಂತಲೂ ಹೆಚ್ಚಿನ ವೀಡಿಯೊ ಫೈಲ್ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗೆ WhatsApp ನಲ್ಲಿ ಯಾವುದೇ ವಿಡಿಯೋವನ್ನು GIF ಆಗಿ ಬದಲಾವಣೆ ಮಾಡಿ ಸೆಂಡ್ ಮಾಡುವುದು.  ಇದರ ಬಗ್ಗೆ ನೀಮ್ಮ ಆಲೋಚನೆಗಳನ್ನು ಕಾಮೆಂಟ್ಗಳನ್ನು ಹಂಚಿಕೊಳ್ಳಬವುದು.

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo