digit zero1 awards

ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ? ಇಲ್ಲಿದೆ WhatsApp Proxy ಮಾಹಿತಿ!

ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ? ಇಲ್ಲಿದೆ WhatsApp Proxy ಮಾಹಿತಿ!
HIGHLIGHTS

ಬಳಕೆದಾರರು ಇಂಟರ್ ನಟ್ ಅನ್ನು ಬ್ಲಾಕ್ ಮಾಡಿದರೂ ಸಹ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಬಹುದು.

ಇಂಟರ್‌ ನೆಟ್ ಕನೆಕ್ಟಿವಿಟಿಯಿಲ್ಲದಿದ್ದಲ್ಲಿ ವಾಲಂಟೀರ್ಸ್ ಅಥವಾ ಆರ್ಗನೈಜೆಷನ್ಸ್ ವಾಟ್ಸಾಪ್ ಪ್ರಾಕ್ಸಿ ಸರ್ವರ್‌ಗಳನ್ನು ಹೊಂದಿಸಬಹುದು.

WhatsApp Proxy Servers: ಮೆಟಾ-ಮಾಲೀಕತ್ವದ ವಾಟ್ಸಾಪ್ ಪ್ರಾಕ್ಸಿ ಸರ್ವರ್‌ಗಳು ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇನ್ಸ್ಟಂಟ್ ಮೆಸೇಜ್ ಇಂಗ್ ಪ್ಲೇಟ್ ಫಾರ್ಮ್ ಇದೀಗ 'WhatsApp ಪ್ರಾಕ್ಸಿ ಸಪೋರ್ಟ್ ಅಥವಾ ವಾಟ್ಸಾಪ್ ಪ್ರಾಕ್ಸಿ ಸರ್ವರ್ ಅನ್ನು ಪರಿಚಯಿಸಿದೆ. ಬಳಕೆದಾರರು ಇಂಟರ್ ನಟ್ ಅನ್ನು ಬ್ಲಾಕ್ ಮಾಡಿದರೂ ಸಹ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಬಹುದು. ಇಂಟರ್‌ ನೆಟ್ ಕನೆಕ್ಟಿವಿಟಿಯಿಲ್ಲದಿದ್ದಲ್ಲಿ ವಾಲಂಟೀರ್ಸ್ ಅಥವಾ ಆರ್ಗನೈಜೆಷನ್ಸ್ ವಾಟ್ಸಾಪ್ ಪ್ರಾಕ್ಸಿ ಸರ್ವರ್‌ಗಳನ್ನು ಹೊಂದಿಸಬಹುದು.

ವಾಟ್ಸಾಪ್ ಪ್ರಾಕ್ಸಿಗೆ ಕನೆಕ್ಟ್ ಮಾಡೋದು ಹೇಗೆ?

ಪ್ರಾಕ್ಸಿಗೆ ಕನೆಕ್ಟ್ ಮಾಡಲು ಬಳಕೆದಾರರು WhatsApp ನ ಇತ್ತೀಚಿನ ಲೇಟೆಸ್ಟ್  ವರ್ಷನ್ ನ ಬಳಸಬೇಕಾಗುತ್ತದೆ. 
 
ಚಾಟ್ಸ್ ಟ್ಯಾಬ್‌ನಲ್ಲಿ ಮೊರ್ ಒಪ್ಶನ್ಸ್ ಟ್ಯಾಪ್ ಮಾಡಿ ನಂತರ ಸೆಟ್ಟಿಂಗ್ಸ್‌ ನ ಸೆಲೆಕ್ಟ್  ಮಾಡಿ.
 
ಸ್ಟೋರೇಜ್  ಮತ್ತು ಡೇಟಾವನ್ನು ಟ್ಯಾಪ್ ಮಾಡಿ ನಂತರ ಪ್ರಾಕ್ಸಿಗೆ ಹೋಗಿ.
 
ಯೂಸ್ ಪ್ರಾಕ್ಸಿ ಮೇಲೆ ಸೆಲೆಕ್ಟ್ ಮಾಡಿ.
 
ಪ್ರಾಕ್ಸಿ ಟ್ಯಾಪ್ ಮಾಡಿದ ನಂತರ ಪ್ರಾಕ್ಸಿ ಅಡ್ರೆಸ್ ನ ಎಂಟ್ರಿ ಮಾಡಿ.
 
ಸೆವ್‌ ಬಟನ್ ಟ್ಯಾಪ್ ಮಾಡಿ.
 
ಕನೆಕ್ಷನ್ ಯಶಸ್ವಿಯಾದರೆ ಚೆಕ್ ಮಾರ್ಕ್ ತೋರಿಸುತ್ತದೆ.

ಈ ಸರ್ವರ್‌ಗಳಿಗೆ ಕನೆಕ್ಟಿವಿಟಿಗೊಳಿಸುವುದರಿಂದ ವಾಟ್ಸಾಪ್ ಬಳಕೆದಾರರು ಯವುದೇ ನಿರ್ಬಂಧಗಳಿಲ್ಲದೆ ಆರಾಮಾಗಿ ಕಂಮ್ಯುನಿಕೇಟ್ ಮಾಡಬಹುದು. ನಮ್ಮಲ್ಲಿ ಅನೇಕರು WA ನಲ್ಲಿ ನಮ್ಮ ಪ್ರೀತಿಪಾತ್ರರಿಗೆ ಮೆಸೇಜ್ ಮಾಡುವ ಮೂಲಕ ಆಚರಿಸಿದರೆ ಲಕ್ಷಾಂತರ ಜನರು ಇರಾನ್‌ನಲ್ಲಿ ಮತ್ತು ಇತರೆಡೆಗಳಲ್ಲಿ ಮುಕ್ತವಾಗಿ ಮತ್ತು ಖಾಸಗಿಯಾಗಿ ಮಾತನಾಡುವ ಸ್ವಾತಂತ್ರ್ಯವನ್ನು ನಿರಾಕರಿಸುತ್ತಲ್ಲೇ ಇದ್ದಾರೆ.

ಆದ್ದರಿಂದ ಕ್ಯಾತ್‌ಕಾರ್ಟ್ ಟ್ವೀಟ್‌ನಲ್ಲಿ ಇಂದು ನಾವು ಪ್ರಾಕ್ಸಿಯನ್ನು ಬಳಸಿಕೊಂಡು WA ಗೆ ಸಂಪರ್ಕಿಸಲು ಯಾರಿಗಾದರೂ ಸುಲಭವಾಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರಾಕ್ಸಿಯನ್ನು ಬಳಸಿಕೊಂಡು WhatsApp ಮೆಸೇಜ್ ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಇನ್ನೂ ಸಾಧ್ಯವಾಗುತ್ತಿಲ್ಲವಾದರೆ ಅದು ಬ್ಲಾಕ್ ಆಗಿರಬಹುದು. ಈ ಬ್ಲಾಕ್ ಆಗಿರುವ ಪ್ರಾಕ್ಸಿ ಅಡ್ರೆಸ್ ಅನ್ನು ಡಿಲೀಟ್  ಮಾಡಲು ಬಳಕೆದಾರರು ಲಾಂಗ್ ಪ್ರೆಸ್ ಮಾಡಬೇಕು. ನಂತರ ಅವರು ಬೇರೆ ಪ್ರಾಕ್ಸಿ ಅಡ್ರೆಸ್ ಅನ್ನು ಎಂಟ್ರಿ ಮಾಡುವ ಮೂಲಕ ಮತ್ತೆ ಪ್ರಯತ್ನಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo