ವಾಟ್ಸಾಪ್ (WhatsApp) ಅಪ್ಲಿಕೇಶನ್ ನಿಮ್ಮ ಪ್ರೀತಿಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಲು ಮತ್ತು ಫೋಟೋ, ವೀಡಿಯೊ, ಆಡಿಯೋ ಮತ್ತು ಫೈಲುಗಳನ್ನು ಕಳುಹಿಸಲು ಮತ್ತು ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ. ಆದರೆ ವಾಟ್ಸಾಪ್ (WhatsApp) ಅಲ್ಲಿ ಬರುವ ಅಗತ್ಯಗಿಂತ ಹೆಚ್ಚಾಗಿ ಪ್ರತಿದಿನದ ಗುಡ್ ಮಾರ್ನಿಂಗ್ ಮೆಸೇಜ್ಗಳು, ಫೋಟೋ, ಆಡಿಯೋ, ಮೀಮ್ ವಿಡಿಯೋಗಳಿಂದ ನಿಮ್ಮ ಫೋನ್ ಸ್ಟೋರೇಜ್ ಜಾಸ್ತಿಯಾಗುವುದು ಸಾಮಾನ್ಯ. ಆದರೆ ವಾಟ್ಸಾಪ್ (WhatsApp) ಈ ಫೋಟೋ ಮತ್ತು ವೀಡಿಯೊಗಳು ಆಗಾಗ್ಗೆ ನಿಮಗೆ ತಿಳಿಯದೆ ಡೌನ್‌ಲೋಡ್ ಆಗುತ್ತವೆ. ಸಮಯ ಕಳೆದಂತೆ ಮಬೈಲ್ ಸ್ಟೋರೇಜ್ ಸ್ಪೇಸ್ ಹೆಚ್ಚು ಬಳಕೆಯಾಗುತ್ತದೆ.
ವಿಶೇಷವಾಗಿ ಹಲವು ವಾಟ್ಸಾಪ್ (WhatsApp) ಗ್ರೂಪ್ ಸೇರಿದವರಿಗೆ ಅಥವಾ ಹಲವಾರು ಜನರಿಂದ ಫೋಟೋಗಳು, ವೀಡಿಯೊಗಳು, ಫೈಲ್‌ಗಳು ಮತ್ತು ಇತರ ಫೈಲ್‌ಗಳಂತಹ ದೊಡ್ಡ ಮಟ್ಟದ ಮಾಧ್ಯಮವನ್ನು ಸ್ವೀಕರಿಸುವವರಿಗೆ ಯಾವ ಚಾಟ್‌ಗಳು ಎಷ್ಟು ಸ್ಟೋರೇಜ್ ಸ್ಪೇಸ್ ಬಳಸುತ್ತಿವೆ ಎಂಬುದನ್ನು ನೋಡಲು ಮತ್ತು ಫೈಲ್ ಸೈಜ್ ಪ್ರಕಾರ ವಿಂಗಡಿಸಲು ನಿಮಗೆ ಅನುಮತಿಸುವ ಅಪ್ಲಿಕೇಶನ್‌ನಲ್ಲಿನ ಸ್ಟೋರೇಜ್ ಸ್ಪೇಸ್ ಅನ್ನು ಒಳಗೊಂಡಿದೆ. ವಾಟ್ಸಾಪ್ (WhatsApp) ನಿಮ್ಮ ಮೊಬೈಲ್ ನಲ್ಲಿ ಸ್ವಲ್ಪ ಜಾಗವನ್ನು ಮುಕ್ತಗೊಳಿಸುವ ಬಗೆ ಇಲ್ಲಿದೆ ನೋಡಿ. ಇದರಿಂದ ನಿಮ್ಮ ಆಂಡ್ರಾಯ್ಡ್ ಫೋನ್ ಬಳಕೆಯಲ್ಲಿ ಸ್ಲೋ ಆಗುತ್ತದೆ. ಬಿಲ್ಟ್-ಇನ್ ಟೂಲ್ ಅನ್ನು ಬಳಸಿ ಹೇಗೆ ಹೇಗೆ ಈ ಫೈಲ್ಗಳನ್ನು ಡಿಲೀಟ್ ಮಾಡೊದು ಹೇಗೆ ಎಂಬುದನ್ನು ತಿಳಿಯಿರಿ.
➥ಮೊದಲಿಗೆ WhatsApp ತೆರೆದು ಚಾಟ್ ಟ್ಯಾಬ್‌ಗೆ ಹೋಗಿ ಇಲ್ಲಿ 'More Options' ಮೇಲೆ ಟ್ಯಾಪ್ ಮಾಡಿ ಸೆಟ್ಟಿಂಗ್ ಆಯ್ಕೆ ಮಾಡಿ
➥ಇದರ ನಂತರ ಸ್ಟೋರೇಜ್ ಮತ್ತು ಡೇಟಾದ ಆಯ್ಕೆಯಲ್ಲಿ ಮ್ಯಾನೇಜ್ ಸ್ಟೋರೇಜ್ ಆಯ್ಕೆಯನ್ನು ಹುಡುಕಿರಿ.
➥ಈಗ ಇಲ್ಲಿ ಹಲವಾರು ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಈ ಪುಟದ ಮೇಲ್ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಇದರ ಕೆಳಗೆ 5MB ಗಿಂತ ದೊಡ್ಡದಾದ ಫೈಲ್‌ಗಳ ಪಟ್ಟಿಯಿರುತ್ತದೆ.
➥ಮೇಲೆ ತಿಳಿಸಲಾದ ಪ್ರತಿಯೊಂದು ವಿಭಾಗಗಳನ್ನು ಪ್ರತ್ಯೇಕವಾಗಿ ಅಥವಾ ಒಂದೇ ಬಾರಿಗೆ ಟ್ಯಾಪ್ ಮಾಡುವ ಮೂಲಕ ಸೆಲೆಕ್ಟ್ ಮತ್ತು ಡಿಲೀಟ್ ಮಾಡಲು ನೀವು ಆಯ್ಕೆ ಮಾಡಬಹುದು.
➥ನಂತರ ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿ ಡಿಲೀಟ್ ಐಕಾನ್ ನೋಡಬವುದು ಇಲ್ಲಿ ನಿಮಗೆ ಬೇಕಾದುದನ್ನು ಸೆಲೆಕ್ಟ್ ಮಾಡಿ ಒಮ್ಮೆಲೇ ಡಿಲೀಟ್ ಮಾಡಬುವುದು.
➥ಅಲ್ಲದೆ ನಿಮಗೆ ಇದರಲ್ಲಿ ಯಾವುದಾದರು ಮುಖ್ಯವಾಗಿದ್ದರೆ ಅದನ್ನು ಸರ್ಚ್ ಫೀಚರ್ ಬಳಸಿ ಚಾಟ್‌ನಿಂದ ಆ ಡೇಟಾವನ್ನು ಉಳಿಸಿಕೊಳ್ಳಬವುದು.
➥ಕೊನೆಯದಾಗಿ ಮೊದಲಿನಂತೆ ಚಾಟ್ ಹೋಗಿ ಫೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್ ಆಯ್ಕೆ ಮಾಡಿ ಡಿಲೀಟ್ ಬಟನ್ ಮೇಲೆ ಒತ್ತಿ ಒಟ್ಟಾರೆಯಾಗಿ ಡಿಲೀಟ್ ಮಾಡಿ ನಿಮ್ಮ ಫೋನಿನ ಸ್ಟೋರೇಜ್ ಅನ್ನು ಕ್ಲಿಯರ್ ಮಾಡಬವುದು.