4 ವರ್ಷದ ಹಿಂದೆ ಬಿಡುಗಡೆಯಾಗಿದ್ಧ ಕನ್ನಡಿಗನ ಹೆಮ್ಮೆಯ ಕೂ ಅಪ್ಲಿಕೇಶನ್ (Koo App) ಈಗ ಬಂದ್! ಕಾರಣವೇನು ಗೊತ್ತಾ?

4 ವರ್ಷದ ಹಿಂದೆ ಬಿಡುಗಡೆಯಾಗಿದ್ಧ ಕನ್ನಡಿಗನ ಹೆಮ್ಮೆಯ ಕೂ ಅಪ್ಲಿಕೇಶನ್ (Koo App) ಈಗ ಬಂದ್! ಕಾರಣವೇನು ಗೊತ್ತಾ?
HIGHLIGHTS

ಕೂ ಅಪ್ಲಿಕೇಶನ್ (Koo App) ಸೋಶಿಯಲ್ ಮೀಡಿಯಾದಿಂದ ಈಗ ಹಲವಾರು ಕಾರಣಗಳ ಮೇರೆಗೆ ಬಂದ್ ಆಗಿದೆ.

Koo App ಸತತ ಪ್ರಯತ್ನಗಳನ್ನು ಮಾಡಿದ ನಂತರವೂ ಯಾವುದೇ ಫಲಕೊಡದೇ ಹೋದ್ದರಿಂದ ವಿದಾಯ ಹೇಳಲಾಗಿದೆ

Koo App ಅಪ್ರಮೇಯ ರಾಧಾಕೃಷ್ಣ (Aprameya Radhakrishna) ಈ ಅಪ್ಲಿಕೇಶನ್ 2020 ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದರು.

ಜಗತ್ತಿನಲ್ಲೇ ಹೆಚ್ಚು ವೇಗದ ಬ್ರಾಂಡ್ ಸುದ್ದಿ ಭಂಡಾರವಾಗಿರುವ ವಿದೇಶಿ ಬ್ರಾಂಡ್ ಟ್ವಿಟ್ಟರ್ (Twitter) ಅಪ್ಲಿಕೇಶನ್ ವಿರುದ್ಧವಾಗಿ ತಲೆ ಎತ್ತಿ ನಿಲ್ಲಲು ಸೋಶಿಯಲ್ ಮೀಡಿಯಾ ಮಾರುಕಟ್ಟೆಗೆ ಕಾಲಿಟ್ಟದ್ದ ಕೂ ಅಪ್ಲಿಕೇಶನ್ (Koo App) ಈಗ ಹಲವಾರು ಕಾರಣಗಳಿಂದ ಮುಚ್ಚಿಹೋಗಿದೆ. ಭಾರತದ ಸ್ವದೇಶಿಯ ಅದರಲ್ಲೂ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ (Aprameya Radhakrishna) ರವರ ಈ ಅಪ್ಲಿಕೇಶನ್ ನಾಲ್ಕು ವರ್ಷಗಳ ಹಿಂದೆ 2020 ಮಾರ್ಚ್ ತಿಂಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿತ್ತು.

ಕಂಪನಿಯ ಮಾಲೀಕನ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ವಿವರವಾಗಿ ಬರೆದಿದ್ದು ಸತತ ಪ್ರಯತ್ನಗಳನ್ನು ಮಾಡಿದ ನಂತರವೂ ಯಾವುದೇ ಫಲಕೊಡದೇ ಹೋದ್ದರಿಂದ ಅಂತಿಮವಾಗಿ ಈ ವಿದಾಯ ಹೇಳುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದರೆ. ಹಾಗಾದ್ರೆ ಇದರ ಬಗ್ಗೆ ಒಂದಿಷ್ಟು ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.

Also Read: 200MP ಕ್ಯಾಮೆರಾದ ಈ Smartphone ಮೇಲೆ ಬರೋಬ್ಬರಿ 12,000 ರೂಪಾಯಿಗಳ ಭಾರಿ ರಿಯಾಯಿತಿ!

Koo App ಭಾರತದ ಹೆಮ್ಮೆಯ ಸೋಷಿಯಲ್ ಮೀಡಿಯಾ ಆ್ಯಪ್:

ಮೈಕ್ರೋಬ್ಲಾಗಿಂಗ್ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಭಾರತದ ಏಕೈಕ ಸೋಷಿಯಲ್ ಮೀಡಿಯಾ ಆ್ಯಪ್ ಎಂಬ ಹೆಗ್ಗಳಿಕೆಯಲ್ಲಿದ್ದ ಕೂ ಅಪ್ಲಿಕೇಶನ್ (Koo App) ಧ್ವನಿ ನಿಂತಂತಾಗಿದೆ. ಯಾಕೆಂದರೆ ಈ ಅಪ್ಲಿಕೇಶನ್ ಅಷ್ಟು ಸಾಮಾನ್ಯವಾದ ಅಪ್ಲಿಕೇಶನ್ ಅಲ್ಲ ಕೇಂದ್ರ ಸರ್ಕಾರದಿಂದ ಇದೊಂದು ಆತ್ಮನಿರ್ಭರ್ ಅಪ್ಲಿಕೇಶನ್ ಎಂದು ಘೋಷಿಸಲಾಗಿದೆ ಮತ್ತು ಆಗಸ್ಟ್ 2020 ರಲ್ಲಿ ಭಾರತ ಸರ್ಕಾರವು ನಡೆಸಿದ ಆತ್ಮನಿರ್ಭರ್ ಅಪ್ಲಿಕೇಶನ್ ಇನ್ನೋವೇಶನ್ ಚಾಲೆಂಜ್ ಅನ್ನು ಸಹ ಈ ಅಪ್ಲಿಕೇಶನ್ ಗೆದ್ದಿದೆ.

KOO App shutting down in India 2024
KOO App shutting down in India 2024

ಯಾಕೆಂದರೆ ಈ ಕೂ ಅಪ್ಲಿಕೇಶನ್ (Koo App) ಭಾರತೀಯರಿಗೆ ಇಂದಿನ X (ಟ್ವಿಟರ್) ಪರ್ಯಾಯವಾಗಿದೆ ಬಳಸಲಾಗುತ್ತಿತ್ತು ಇವೆಲ್ಲ ಕಾರಣಗಳಿಂದಾಗಿ Koo App ಭಾರತದ ಹೆಮ್ಮೆಯ ಸೋಷಿಯಲ್ ಮೀಡಿಯಾ ಆ್ಯಪ್ ಎನ್ನುವುದರಲ್ಲಿ ತಪ್ಪಿಲ್ಲ ಆದರೆ ಈಗ ಇದನ್ನು ಬಂದ್ ಮಾಡಲಾಗಿದೆ.

ಕೂ ಅಪ್ಲಿಕೇಶನ್ ಇಟ್ಟುಕೊಳ್ಳಲು ಯಾರೂ ಆಸಕ್ತಿ ತೋರಲಿಲ್ಲ!

ಈ ಜನಪ್ರಿಯ ಕೂ ಅಪ್ಲಿಕೇಶನ್ ಅನ್ನು ಇದೆ ರೀತಿಯಾಗಿ ನಷ್ಟದಲ್ಲಿ ಮತ್ತು ಯಾವುದೇ ಫಂಡ್ ಇಲ್ಲದೆ ಮುನ್ನಡೆಸಲು ಆಗುವುದಿಲ್ಲ ಎಂದು ಅರಿತ ಅಪ್ರಮೇಯ ರಾಧಾಕೃಷ್ಣ (Aprameya Radhakrishna) ಮತ್ತು ತಂಡ ಕಂಪನಿಯನ್ನು ಮಾರಲು ಮುಂದಾದರು. ಇದನ್ನು ಮೊದಲಿಗೆ ಜನಪ್ರಿಯ ಮತ್ತು ದೊಡ್ಡ ಸುದ್ದಿ ಭಂಡಾರವಾಗಿರುವ ಡೈಲಿಹಂಟ್ (Dailyhunt) ಸೇರಿದಂತೆ ಹಲವು ಇಂಟರ್ನೆಟ್ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದರೂ ಸಹ ಕೊನೆಗೆ ಯಾರು ಆಸಕ್ತಿ ತೋರದ ಕಾರಣ ಕೂ ಅಪ್ಲಿಕೇಶನ್ (Koo App) ವಿದಾಯ ಹೇಳುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

KOO App shutting down in India 2024
KOO App shutting down in India 2024

ಇದರೊಂದಿಗೆ ಪ್ರಸ್ತುತ ಸೋಶಿಯಲ್ ಮೀಡಿಯಾ ಹೆಜ್ಜೆ ಹೆಜ್ಜೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅಥವಾ ಬಾಹ್ಯಾಕಾಶ ಅಥವಾ EV ಕ್ಷೇತ್ರಗಳಲ್ಲಿ ಭಾರತದಿಂದ ಮಹತ್ವಾಕಾಂಕ್ಷೆಯನ್ನು ಎತ್ತಲು ಧೀರ್ಘಾವಧಿಯ ಬಂಡವಾಳದ ಅಗತ್ಯವಿದೆ. ಜಾಗತಿಕ ದೈತ್ಯರ ವಿರುದ್ಧ ಸ್ಪರ್ಧಿಸುವಾಗ ಗಣನೀಯ ಬಂಡವಾಳದ ಅಗತ್ಯವಿರುತ್ತದೆ. ಈ ಉದ್ಯಮಗಳು ಏರಿಳಿತದ ಬಂಡವಾಳ ಮಾರುಕಟ್ಟೆಯ ಮೇಲೆ ಅವಲಂಬಿತರಾಗುವುದಿಲ್ಲ ಅವರ ಬೆಳವಣಿಗೆ ಮತ್ತು ಸಮರ್ಥನೀಯತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಕಾರ್ಯತಂತ್ರದ ವಿಧಾನದ ಅಗತ್ಯವಿರುತ್ತದೆಂದು ಹೇಳಿದ್ದಾರೆ. ಅಂತೂ ಇಂತೂ ಕನ್ನಡಿಗನ ಮನಸಾರೆ ಕಟ್ಟಿದ ಜಬರ್ದಸ್ತ್ ಕೂ ಅಪ್ಲಿಕೇಶನ್ (Koo App) ಇನ್ನಿಲ್ಲ ಎನ್ನುವ ಕಹಿ ಸತ್ಯವನ್ನು ನಂಬಲೇಬೇಕಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo