ವಾಟ್ಸಾಪ್ (WhatsApp) ಅಪ್ಲಿಕೇಶನ್ ಈಗ ತಮ್ಮ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಹೊರ ತಂದಿದೆ.
WhatsApp ಈ ಅಪ್ಡೇಟ್ ಅಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತನ್ನ ಡಿಸೈನ್ ಆನ್ ಪೂರ್ತಿಯಾಗಿ ಬದಲಾಯಿಸಲಿದೆ
WhatsApp ಸ್ಕ್ರೀನ್ ಶಾಟ್ ಅನ್ನು ಈಗಾಗಲೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ @WABetaInfo ಸಾಕಷ್ಟು ಸ್ವಚ್ಛವಾಗಿಟ್ಟಿದೆ
ಜಗತ್ತಿನ ಜನಪ್ರಿಯ ಮತ್ತು ಉಚಿತವಾಗಿ ತ್ವರಿತ ಮೆಸೇಜ್ ಮಾಡಲು ಲಭ್ಯವಲಿರುವ ವಾಟ್ಸಾಪ್ (WhatsApp) ಅಪ್ಲಿಕೇಶನ್ ಈಗ ತಮ್ಮ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಹೊರ ತಂದಿದೆ. ಈ ಬಾರಿಯ ಈ ಅಪ್ಡೇಟ್ ನಿಜಕ್ಕೂ ವಾಟ್ಸಾಪ್ (WhatsApp) ಅಪ್ಲಿಕೇಶನ್ ಬಳಸುವ ಪ್ರತಿಯೊಬ್ಬರಿಗೂ ಅಚ್ಚರಿ ಮತ್ತು ಹೆಚ್ಚು ಆತುರವನ್ನು ಹೆಚ್ಚುಸುತ್ತದೆ. ಏಕೆಂದರೆ ಈ ಅಪ್ಡೇಟ್ ಅಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತನ್ನ ಡಿಸೈನ್ ಅನ್ನು ಸಾಕಾಗುವಷ್ಟು ಮಟ್ಟಕ್ಕೆ ಬದಲಾಯಿಸಲಿದೆ. ಇದರ ಸ್ಕ್ರೀನ್ ಶಾಟ್ ಅನ್ನು ಈಗಾಗಲೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ @WABetaInfo ಸಾಕಷ್ಟು ಸ್ವಚ್ಛವಾಗಿಟ್ಟಿದೆ. ಒಟ್ಟಾರೆಯಾಗಿ ಬೀಟಾದ ಇತ್ತೀಚಿನ ಹೊಸ ಆವೃತ್ತಿಯಲ್ಲಿ ನಿಮಗೆ ಹೊಸ ಲುಕ್ ಕಾಣಬಹುದು.
WhatsApp ಡಿಸೈನ್ ಪೂರ್ತಿಯಾಗಿ ಬದಲಾಗಿಲ್ಲ!
ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದ ಕಂಪನಿ ಈ ಹೊಸ ಅಪ್ಡೇಟ್ ಒಳಗೆ ಎಲ್ಲವನ್ನು ಬದಲಾಯಿಸಿಲ್ಲ! ಇದು ಕೇವಲ ವಾಟ್ಸಾಪ್ ವಿಂಡೋದಲ್ಲಿನ ಡಿಸೈನ್ ಅನ್ನು ಮಾತ್ರ ಬದಲಾಯಿಸಿದೆ. ಸ್ಕ್ರೀನ್ ಶಾಟ್ ಒಳಗೆ ನೋಡುವಂತೆ ಸೆಟ್ಟಿಂಗ್, ಚಾಟ್‌ಗಳು, ಆಡಿಯೋ ವಿಡಿಯೋ ಕರೆಗಳು, ಕಮ್ಯುನಿಟಿ ಮತ್ತು ಸ್ಟೇಟಸ್ ಟ್ಯಾಬ್‌ಗಳನ್ನು ನೀವು ಹೆಚ್ಚು ಆಕರ್ಷಕವಾಗಿ ಕಾಣಬಹುದು. ನಿಮ್ಮ ಫೋನ್ ಸಣ್ಣದು ಅಥವಾ ದೊಡ್ಡಗಿದ್ದರೆ ನೀವು ಬಯಸುವ ಆಯ್ಕೆಯನ್ನು ಸರಳವಾಗಿ ಒಂದೇ ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಲು ಹೆಚ್ಚು ಸಹಕಾರಿಯಾಗಲಿದೆ.
WhatsApp beta for iOS 23.11.0.75: what's new?
WhatsApp is working on a redesigned settings page, and it will be available in a future update of the app!https://t.co/GSsoJzULgX pic.twitter.com/C0xfGojRZk
— WABetaInfo (@WABetaInfo) June 2, 2023
ಹಳೆ WhatsApp ಇಂಟರ್ಫೇಸ್ ಪಡೆಯಲು ಸಾಧ್ಯವಿಲ್ಲ!
ಬಾಕಿಯಂತೆ ಉಳಿದ ಬೇರೆಲ್ಲಾ ಇಂಟರ್ಫೇಸ್ ಹಳೆಯ WhatsApp ಡಿಸೈನಿಂಗ್ ಅನ್ನೇ ಹೊಂದಿರುತ್ತದೆ. ನಿಮಗೊತ್ತಾ ಐಫೋನ್ ಬಳಕೆದಾರರು ಈಗಾಗಲೇ ಇದೇ ರೀತಿಯ ಇಂಟರ್ಫೇಸ್ ಬಳಸುತ್ತಿದ್ದಾರೆ. ಆದ್ದರಿಂದ ಈ ಹೊಸ ಅಪ್ಡೇಟ್ ಹೆಚ್ಚಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಆತುರವನ್ನು ನಿರೀಕ್ಷಿಸುತ್ತಿದೆ. ಒಮ್ಮೆ ಈ ಇಂಟರ್ಫೇಸ್ ಅಪ್ಡೇಟ್ ಬಂದ ನಂತರ ನಿಮಗೆ ಹೊಸ ಇಂಟರ್ಫೇಸ್ ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲಿ ನೀವು ಹಳೆಯ ಇಂಟರ್ಫೇಸ್ ಪಡೆಯಲು ಸಾಧ್ಯವಿರೋದಿಲ್ಲ.
ಮೊದಲು WhatsApp ಬೀಟಾ ಬಳಕೆದಾರರಿಗೆ ಲಭ್ಯ!
ಯಾತ ಪ್ರಕಾರ ಪ್ರತಿಯೊಂದು ಹೊಸ ಅಪ್ಡೇಟ್ ಮೊದಲಿಗೆ WhatsApp ಬೀಟಾ ಬಳಕೆದಾರರಿಗೆ ಲಭ್ಯವಾಗಲಿದ್ದು ಇದು ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಅಪ್ಡೇಟ್ ಮಾಡುವುದರ ಮೂಲಕ ಲಭ್ಯವಿದೆ. ಆದ್ದರಿಂದ ನೀವು ಆಂಡ್ರಾಯ್ಡ್ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಜನರು ಹೊಸ ವಿನ್ಯಾಸವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಬೀಟಾ ಪರೀಕ್ಷೆಯಲ್ಲಿ ಎಲ್ಲವೂ ಸುಗಮವಾಗಿ ಕಾರ್ಯನಿರ್ವಹಿಸಿದ ನಂತರ ಇದು ಶೀಘ್ರದಲ್ಲೇ ವಾಟ್ಸಾಪ್‌ನ ಸ್ಟೇಟಸ್ ಆವೃತ್ತಿಯಲ್ಲಿಯೂ ಆಗಮಿಸುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile