WhatsApp ಮೆಸೇಜ್‌ಗಳ ಮೂಲ ವಿವರ ಬೇಕೆಂದ ಕೇಂದ್ರ ಸರ್ಕಾರ! ಇದಕ್ಕೆ ಮೆಟಾ ನೀಡಿದ ಉತ್ತರವೇನು? | Tech News

Updated on 17-Oct-2023
HIGHLIGHTS

WhatsApp ಮೆಸೇಜ್‌ಗಳ ಮೂಲ ವಿವರ ಬೇಕೆಂದ ಕೇಂದ್ರ ಸರ್ಕಾರ

ಚುನಾವಣಾ ಸಮಯದಲ್ಲಿ WhatsApp ನಕಲಿ ವೀಡಿಯೊ ಮತ್ತು ನಕಲಿ ಮೆಸೇಜ್‌ಗಳ ಹರಡಲು ಬಳಸಲಾಗುತ್ತದೆ.

ಈ ಹೊಸ ನಿಯಮವು ಅದರ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸಿಸ್ಟಮ್‌ಗೆ ಅಪಾಯವಾಗಿದೆ.

ಮೆಟಾ-ಮಾಲೀಕತ್ವದ WhatsApp ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಚುನಾವಣಾ ಸಮಯದಲ್ಲಿ ಕೆಲವೊಮ್ಮೆ ನಕಲಿ ವೀಡಿಯೊಗಳು ಮತ್ತು ನಕಲಿ ಮೆಸೇಜ್‌ಗಳ ಹರಡಲು ಬಳಸಲಾಗುತ್ತದೆ. ಅದೇ ಸಮಯದಲ್ಲಿ 2024 ಲೋಕಸಭಾ ಚುನಾವಣೆಯ (Lok Sabha Election) ಮೊದಲು ಭಾರತ ಸರ್ಕಾರವು ಅಂತಹ ಕಾನೂನನ್ನು ತರಲು ಯೋಚಿಸುತ್ತಿದೆ. ಅದರಡಿಯಲ್ಲಿ ಮೊದಲ ಮೆಸೇಜ್‌ಗಳನ್ನು ಯಾರು ಕಳುಹಿಸಿದ್ದಾರೆ ಎಂಬ ಮೂಲ ವಿವರಗಳು ಬೇಕೆಂದ ಸರ್ಕಾರ ಕೇಳುತ್ತಿದೆ.

ಮೆಟಾ ನೀಡಿದ ಉತ್ತರವೇನು?

ಸರ್ಕಾರದ ಈ ಬೇಡಿಕೆಗೆ ಮೆಟಾ ಕೂಡ ತನ್ನ ಉತ್ತರವನ್ನು ನೀಡಿದೆ. ಇದು ಬಳಕೆದಾರರ ಖಾಸಗಿತನದ ಮೇಲೆ ಪರಿಣಾಮ ಬೀರಬಹುದು ಎಂದು ಕಂಪನಿ ಹೇಳಿದೆ. ಈ ಹೊಸ ನಿಯಮವು ಅದರ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸಿಸ್ಟಮ್‌ಗೆ ಅಪಾಯವಾಗಿದೆ. ಇದರೊಂದಿಗೆ ಮೆಟಾ ಕಂಪನಿಯು ಇಬ್ಬರ ನಡುವಿನ ಸಂಭಾಷಣೆಯ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿದೆ.

WhatsApp ಮೆಸೇಜ್‌ಗಳ ಮೂಲ ವಿವರದ ಬೇಡಿಕೆ ಏಕೆ?

ಮಾಧ್ಯಮ ವರದಿಯ ಪ್ರಕಾರ ರಾಜಕಾರಣಿಗಳ ನಕಲಿ ವೀಡಿಯೊಗಳು ಕೆಲವೊಮ್ಮೆ ದೊಡ್ಡ ಕೋಲಾಹಲಕ್ಕೆ ಕಾರಣವಾಗುವುದರಿಂದ ಸರ್ಕಾರವು ಮೊದಲು ಮೆಸೇಜ್‌ ಯಾರು ಕಳುಹಿಸಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಹುಡುಕುತ್ತಿದೆ. ಈ ಸಮಸ್ಯೆ ಹೆಚ್ಚಾಗಿ ವೇದಿಕೆಯಲ್ಲಿ ಕಂಡುಬರುತ್ತದೆ. ಇದನ್ನು ನಿಭಾಯಿಸಲು ಸರ್ಕಾರ ಈಗ ಇಂತಹ ಬೇಡಿಕೆಯನ್ನು ಮುಂದಿಡುತ್ತಿದೆ.

ಇದನ್ನೂ ಓದಿ: 200MP ಕ್ಯಾಮೆರಾದ Attractive ಸ್ಮಾರ್ಟ್‌ಫೋನ್‌ಗಳು ಈಗ ನಿಮ್ಮ ಕೈಗೆಟಕುವ ಬೆಲೆಗೆ ಪಡೆಯಿರಿ | Special Offer

ಈ ಹಿಂದೆಯೂ WhatsApp ಆಕ್ಷೇಪ ವ್ಯಕ್ತಪಡಿಸಿತ್ತು!

ವಾಟ್ಸಾಪ್ ಮತ್ತು ಫೇಸ್‌ಬುಕ್ 2021 ರಲ್ಲಿ ಈಗಾಗಲೇ ದೆಹಲಿ ಹೈಕೋರ್ಟ್‌ನಲ್ಲಿ ಇಂತಹ ನಿಯಮವನ್ನು ವಿರೋಧಿಸಿವೆ. ಇದು ತಮ್ಮ ಬಳಕೆದಾರರ ಗೌಪ್ಯತೆಗೆ ಧಕ್ಕೆ ತರಬಹುದು ಎಂದು ಅವರು ವಾದಿಸಿದರು. ಮತ್ತೊಂದೆಡೆ ಈ ನಿಯಮದ ಪರಿಚಯವು ದೈನಂದಿನ ಬಳಕೆದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳುತ್ತದೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅಪಾಯದಲ್ಲಿದೆ!

ಭಾರತದಲ್ಲಿ ವಾಟ್ಸಾಪ್ ಹೆಚ್ಚು ಬಳಕೆಯಾಗುವ ಮೆಸೇಜ್‌ ರವಾನೆ ವೇದಿಕೆಯಾಗಿದೆ. ಇತ್ತೀಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಕಂಪನಿಯು ಈ ಹೊಸ ನಿಯಮವು ಅದರ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸಿಸ್ಟಮ್‌ಗೆ ಅಪಾಯವಾಗಿದೆ. ಇದು ಇಬ್ಬರು ಜನರ ನಡುವಿನ ಸಂವಹನವನ್ನು ಸಂಪೂರ್ಣವಾಗಿ ಮುಕ್ತಗೊಳಿಸುತ್ತದೆ. ಈ ಹೊಸ ನಿಯಮವನ್ನು ಜಾರಿಗೊಳಿಸಿದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :