Facebook ಮತ್ತು Instagram ಈಗ ಆಯ್ದ ದೇಶಗಳಲ್ಲಿ ಬ್ಲೂ ಟಿಕ್‌ ಮಾರಾಟ! ಬೆಲೆ ಎಷ್ಟು?

Updated on 20-Mar-2023
HIGHLIGHTS

ಮೆಟಾ ಈಗ Instagram ಮತ್ತು Facebook ನಲ್ಲಿ ನೀಲಿ ಟಿಕ್‌ಗಳನ್ನು ಮಾರಾಟ ಇಟ್ಟಿದೆ.

ಈ ಹಿಂದೆ ಗಮನಾರ್ಹ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿದ್ದ ಬ್ಲೂ ಟಿಕ್ ಅನ್ನು ಟ್ವಿಟರ್ ಮಾರಾಟ ಮಾಡುವಂತೆ ಮಾಡಿತ್ತು

ಟ್ವಿಟರ್ ನಂತರ ಮೆಟಾ ಈಗ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ಬ್ಲೂ ಟಿಕ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದೆ

Facebook and Instagram: ಟ್ವಿಟರ್ ನಂತರ ಮೆಟಾ ಈಗ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ಬ್ಲೂ ಟಿಕ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದೆ. ಇದರರ್ಥ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಗದಿತ ಮೊತ್ತವನ್ನು ಪಾವತಿಸಲು ಸಿದ್ಧರಿರುವ ಪ್ರೊಫೈಲ್‌ಗಳಿಗೆ ಮಾತ್ರ ಬ್ಲೂ ಟಿಕ್ ಹೊಂದಲು ಅನುಮತಿಸುತ್ತದೆ. ಈ ಸೇವೆಯನ್ನು ಈಗಾಗಲೇ ಮೆಟಾ ಅಮೆರಿಕದಲ್ಲಿನ ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಶೀಘ್ರದಲ್ಲೇ ಜಗತ್ತಿನ ಮತ್ತಷ್ಟು ದೇಶಗಳಿಗೆ ಈ ನಿಯಮವನ್ನು ಶುರು ಮಾಡಲಿದೆ. ಈ ಹಿಂದೆ ಗಮನಾರ್ಹ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿದ್ದ ಬ್ಲೂ ಟಿಕ್ ಅನ್ನು ಟ್ವಿಟರ್ ಮಾರಾಟ ಮಾಡುವಂತೆ ಮಾಡಿತ್ತು. 

Instagram ಮತ್ತು Facebook ಬ್ಲೂ ಟಿಕ್‌

Instagram ನ ನೀತಿಯು ಈ ಹಿಂದೆ ಮಾಧ್ಯಮ ಸಂಸ್ಥೆಗಳು, ಪ್ರಭಾವಿಗಳು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಹೆಸರಿನ ಜೊತೆಗೆ ನೀಲಿ ಟಿಕ್ ಅನ್ನು ಹೊಂದಲು ಅವಕಾಶ ಮಾಡಿಕೊಟ್ಟಿತು. ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ನಡೆಸಿದ ನಂತರ ಮೆಟಾ ಪ್ರಸ್ತುತ US ನಲ್ಲಿ ಸೇವೆಗಳನ್ನು ಹೊರತಂದಿದೆ. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ತಿಂಗಳಿಗೆ $11.99 ಅಯಾನ್ ರೂ 989 ಅಥವಾ ಮೊಬೈಲ್ ಆಪ್ ಸ್ಟೋರ್ ಮೂಲಕ $14.99 ಅಥವಾ ರೂ 1237. ನೀವು ವೆಬ್‌ನಲ್ಲಿ ಸೈನ್ ಅಪ್ ಮಾಡಿದರೆ ನೀವು ಮೊಬೈಲ್‌ನಲ್ಲಿ ನೀಲಿ ಚೆಕ್‌ಮಾರ್ಕ್ ಅನ್ನು ಫೇಸ್‌ಬುಕ್‌ನಲ್ಲಿ ಮಾತ್ರ ಸ್ವೀಕರಿಸುತ್ತೀರಿ.

 

ಬ್ಲೂ ಚೆಕ್‌ಮಾರ್ಕ್ ಪ್ರಯೋಜನಗಳೇನು?

ಆಪ್ ಸ್ಟೋರ್ ಆಯ್ಕೆಯು Facebook ಮತ್ತು Instagram ಎರಡಕ್ಕೂ ನೀಲಿ ಚೆಕ್‌ಮಾರ್ಕ್ ಅನ್ನು ಒಳಗೊಂಡಿದೆ. ನೀಲಿ ಚೆಕ್‌ಮಾರ್ಕ್ ಪರಿಶೀಲನೆಯ ಬ್ಯಾಡ್ಜ್ ಆಗಿದ್ದು ಅದು ಖಾತೆಯು ಅಧಿಕೃತವಾಗಿದೆ. ಮತ್ತು ಸಾರ್ವಜನಿಕ ವ್ಯಕ್ತಿ, ಸೆಲೆಬ್ರಿಟಿ ಅಥವಾ ಬ್ರ್ಯಾಂಡ್‌ಗೆ ಸೇರಿದೆ ಎಂದು ಸೂಚಿಸುತ್ತದೆ. ಇದರಿಂದ ಕೋಲಬ್ರೆಷನ್ ಅಥವಾ ಬ್ರಾಂಡ್ ಜೊತೆಗೆ ಕೆಲಸ ಮಾಡಲು ಇದು ಮುಖ್ಯವಾಗಿರುತ್ತದೆ. ಅಲ್ಲದೆ Instagram ನಲ್ಲಿ ನೀಲಿ ಟಿಕ್ ಅನ್ನು ಖರೀದಿಸಲು ನೀವು 18 ವರ್ಷ ವಯಸ್ಸಿನವರಾಗಿರಬೇಕು ನಿಮ್ಮ ಫೋಟೋ ಐಡಿಯನ್ನು ಸಲ್ಲಿಸಬೇಕು ಮತ್ತು ನಿಮ್ಮ ಡಿಸ್ಪ್ಲೇ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್ ಅನ್ನು ಪಡೆಯಲು ಪರಿಶೀಲನೆ ಪ್ರಕ್ರಿಯೆಯ ಮೂಲಕ ಹೋಗಬೇಕು. 

ಒಮ್ಮೆ ನೀವು ಮೆಟಾದಲ್ಲಿ ಪರಿಶೀಲಿಸಿದರೆ ನಿಮ್ಮ ಪ್ರೊಫೈಲ್ ಹೆಸರು ಅಥವಾ ಡಿಸ್‌ಪ್ಲೇ ಹೆಸರು ಅಥವಾ ಪ್ರೊಫೈಲ್‌ನಲ್ಲಿನ ಯಾವುದೇ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ. ಆದರೂ ನೀವು ಪುನಃ ಬದಲಾಯಿಸಲೇಬೇಕೆಂದರೆ ನೀವು ಮತ್ತೊಮ್ಮೆ ಮೊದಲಿನಿಂದ ಪರಿಶೀಲನೆ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕಾಗುತ್ತದೆ. ವರದಿಗಳ ಪ್ರಕಾರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಈಗಾಗಲೇ ಪರಿಶೀಲಿಸಿದ ಬಳಕೆದಾರರು ಮೆಟಾದ ಪಾವತಿಸಿದ ಪರಿಶೀಲನೆ ಯೋಜನೆಗೆ ಪಾವತಿಸಬೇಕಾಗಿಲ್ಲ. ಮೆಟಾ ಲೆಗಸಿ ಖಾತೆಗಳನ್ನು ತೊಡೆದುಹಾಕಲು ಯೋಜಿಸಿದರೆ ನಿಯಮಗಳು ಬದಲಾಗಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :