ಸೋಷಿಯಲ್ ಮೀಡಿಯಾ ಕಂಪೆನಿಯಾದ ಫೇಸ್ಬುಕ್ ಅದರ ಸಿಇಓ (CEO) ಮತ್ತು ಸಂಸ್ಥಾಪಕರಾದ ಮಾರ್ಕ್ ಜ್ಯೂಕರ್ಬರ್ಗ್ ತಮ್ಮ ಸಹವರ್ತಿ ಕಂಪನಿಯಾದ ವಾಟ್ಸಾಪ್ ಮತ್ತೊಂದು ವಿಶೇಷವಾದ ಫೀಚರ್ ಅಪ್ಲಿಕೇಶನ್ ಅಂದ್ರೆ ವಾಟ್ಸಾಪ್ ಪೇ (WhatsApp Pay) ಶೀಘ್ರದಲ್ಲೇ ಭಾರತದಲ್ಲಿ ತನ್ನ ಪಾವತಿ ಸೇವೆಯನ್ನು ಪ್ರಾರಂಭಿಸುತ್ತಿದೆಂದು ಮತ್ತೋಮ್ಮೆ ಘೋಷಿಸಿದೆ. ಈ ಸೇವೆಯನ್ನು ಪ್ರಾರಂಭಿಸಲು ಕಂಪನಿಯು ಇದೀಗ ಅದರ ಬಗ್ಗೆಗಿನ ಎಲ್ಲಾ ಸಿದ್ಧತೆಗಳನ್ನು ಸಿದ್ಧಪಡಿಸುತ್ತಿದೆ. ಒಟ್ಟಾರೆಯಾಗಿ ಹೆಳೆಯಬೇಕೆಂದರೆ ಫೇಸ್ಬುಕ್ ಭಾರತದಲ್ಲಿ ಶೀಘ್ರವೇ ಈ 'WhatsApp Pay' ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಲಿದೆ.
ಫೇಸ್ಬುಕ್ ಅದರ ಸಿಇಓ (CEO) ಮತ್ತು ಸಂಸ್ಥಾಪಕರಾದ ಮಾರ್ಕ್ ಜ್ಯೂಕರ್ಬರ್ಗ್ ಈಗಾಗಲೇ ಲಭ್ಯವಿರುವ ಸೇವೆಗಳಂತೆ ಈ ವಾಟ್ಸಾಪ್ ಪೇ (WhatsApp Pay) ಸೇವೆಯ ಎಲ್ಲ ಡೇಟಾ ಮಾಹಿತಿಗಳು ಭಾರಿ ಮಾತ್ರದಲ್ಲಿ ಗೌಪ್ಯವಾಗಿ ಉಳಿಯುತ್ತದೆಂದು ಭರವಸೆ ನೀಡಿದ್ದಾರೆ. ಈ ಕಂಪನಿಯು ಪ್ರಸ್ತುತ ದೇಶದಲ್ಲಿ ತನ್ನ ವಾಟ್ಸಾಪ್ ಪೇ (WhatsApp Pay) ಅಪ್ಲಿಕೇಶನ್ ಅನ್ನು ಬೀಟಾ ಆವೃತ್ತಿಯಲ್ಲಿ ಪರೀಕ್ಷೆಯನ್ನು ಮಾಡುತ್ತಿದೆ. ಶೀಘ್ರದಲ್ಲೇ ಇದನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಲಾಗುವುದೆಂದು ನಿರೀಕ್ಷಿಸಲಾಗಿದೆ.
ಇದು ಬಳಕೆದಾರರಿಗೆ ಯಾವಾಗ ಬಳಸುಲು ಅನುವು ಮಾಡಿಕೊಡುತ್ತದೆಂದು ಕೇಳಿದರೆ ಸದ್ಯಕ್ಕೆ ಇದರ ಡೇಟಾಗಳನ್ನು ಇರಿಸಿಕೊಳ್ಳುವುದು ಅತಿ ಮುಖ್ಯವಾದ ಕಾರಣದಿಂದಾಗಿ ಸಾಕಷ್ಟು ವಿಳಂಬವಿದೆ ಎಂದು ಕಂಪೆನಿ ಹೇಳಿದೆ. ವಿಶ್ವದಲ್ಲಿ ಈ ಫೇಸ್ಬುಕ್ ಬಳಸುವ ಬಳಕೆದಾರರು ಭಾರತ, ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್ ದೇಶದಲ್ಲಿದ್ದರಂತೆ. ಇದರ ಮೂಲಕ ಭಾರತ ಅತಿ ಹೆಚ್ಚು ಬಳಕೆದಾರರನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಬರೋಬ್ಬರಿ 8% ಪ್ರತಿಶತ ಹೆಚ್ಚಾಗಿದೆ.
ಈ ಕಾರಣಕ್ಕಾಗಿ ಜ್ಯೂಕರ್ಬರ್ಗ್ ಈ ವೇದಿಕೆಗೆ ಇತರ ವ್ಯವಹಾರಗಳೊಂದಿಗೆ ಸಂಪರ್ಕ ಮತ್ತು ಸೇವೆಯನ್ನು ಕಲ್ಪಿಸುವುದರ ಮೂಲಕ ಹೆಚ್ಚಿನ ಲಾಭ ಪಡೆಯಬವುದು. WhatsApp ಜೊತೆಗೆ ಕಂಪನಿಯ ಇನ್ನಿತರೇ Instagram ಮತ್ತು Facebook ಮೇಲೆಯು ಇವುಗಳ ಬೆಳವಣಿಗೆಯ ಬಗ್ಗೆ ಹೇಳಿಕೆ ನೀಡಿದರು. ಇದರ ಮೇಲೆ RBI ಸಹ ಭಾರತದ ಬ್ಯಾಂಕಿಂಗ್ ನಿಯಮಗಳನ್ನು ನಿರ್ಧರಿಸುತ್ತದೆ. ಬ್ಯಾಂಕ್ ಖಾತೆಗಳ ಮೂಲಕ ಮಾಡಿದ ಯಾವುದೇ ವಹಿವಾಟು ಇದು RBI ಸೇರಿದಂತೆ ಎಲ್ಲಾ ಏಜೆನ್ಸಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಅನುಮತಿ ಪಡೆಯಲಿದೆ.