eSanjeevani App: ಆನ್‌ಲೈನ್ ವೈದ್ಯಕೀಯ ಸಮಾಲೋಚನೆಗಳನ್ನು ಸುಗಮಗೊಳಿಸುವ ಇ-ಸಂಜೀವನಿ ಅಪ್ಲಿಕೇಶನ್ ಭಾರತದ ಡಿಜಿಟಲ್ ಕ್ರಾಂತಿಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದುವರೆಗೆ 10 ಕೋಟಿಗೂ ಹೆಚ್ಚು ಜನರು ಇದರಿಂದ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ತಮ್ಮ ತಿಂಗಳ ಮನ್ ಕಿ ಬಾತ್ ಪ್ರಸಾರದಲ್ಲಿ ಸಾಮಾನ್ಯ ವ್ಯಕ್ತಿ ಅಥವಾ ಮಧ್ಯಮ ವರ್ಗ ಮತ್ತು ದೂರದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಈ ಆ್ಯಪ್ ಜೀವ ರಕ್ಷಣೆಯ ಅಪ್ಲಿಕೇಶನ್ ಆಗಿದೆ ಎಂದು ಮೋದಿ ಹೇಳಿದರು.
ಇದೊಂದು ಸಾಧನೆಯಾಗಿದ್ದು ಭಾರತೀಯರು ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದರ ಜೀವಂತ ಉದಾಹರಣೆಯಾಗಿದೆ. ಇ-ಸಂಜೀವನಿ ಅಪ್ಲಿಕೇಶನ್ ಕರೋನಾ ಸಮಯದಲ್ಲಿ ಜನರಿಗೆ ತುಂಬಾ ಸಹಾಯವಾಗಿದ್ದನ್ನು ನಾವು ಗಮನಿಸಿದ್ದೇವೆ ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ ಮೋದಿಯವರು ದೇಶದ ವಿವಿಧ ಪ್ರದೇಶಗಳಲ್ಲಿ ಜನರು ಕೈಗೊಂಡಿರುವ ಸ್ವಚ್ಛತಾ ಉಪಕ್ರಮಗಳ ಬಗ್ಗೆ ಒತ್ತಿ ಹೇಳುವ ಮೂಲಕ ಇದು "ಸ್ವಚ್ಛ ಭಾರತ" ಸಾಮೂಹಿಕ ಆಂದೋಲನವಾಗಿದೆ ಎಂದರು.
ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮತ್ತು ಸಿಂಗಾಪುರದ PayNow ನಡುವಿನ ಇತ್ತೀಚಿನ ಒಪ್ಪಂದದ ಬಗ್ಗೆಯೂ ಅವರು ಉಲ್ಲೇಖಿಸುವುದರು. ಈ ಮೂಲಕ ಎರಡು ದೇಶಗಳ ಜನರ ನಡುವೆ ಸರಳಾಗಿ ಹಣ ವರ್ಗಾವಣೆ ಮಾಡಲು ದೇಶದ ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಯಿಂದ ಜೀವನ ಮಟ್ಟದಲ್ಲಿ ಸುಧಾರಣೆ ತಂದಿದೆ ಎಂದು ಹೇಳಿದರು. ಪ್ರಧಾನ ಮಂತ್ರಿಗಳು ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸುವಲ್ಲಿ ಅಪ್ಲಿಕೇಶನ್ ಎಷ್ಟು ಸಹಾಯಕವಾಗಿದೆ ಎಂಬುದನ್ನು ಎತ್ತಿ ತೋರಿಸಲು ವೈದ್ಯರು ಮತ್ತು ರೋಗಿಯೊಂದಿಗೆ ಮಾತನಾಡಿದರು.
ಅವರ ಭಾಷಣದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಉತ್ತೇಜಿಸಲು ತೆಗೆದುಕೊಳ್ಳುತ್ತಿರುವ ಹಲವಾರು ಉಪಕ್ರಮಗಳ ವಿಷಯವು ಕಾಣಿಸಿಕೊಂಡಿವೆ. ಅಕ್ಟೋಬರ್ 31 ರಂದು ಸರ್ದಾರ್ ಪಟೇಲರ ಜನ್ಮದಿನವನ್ನು ಏಕತಾ ದಿನ ಎಂದೂ ಆಚರಿಸಲಾಗುತ್ತದೆ. ದೇಶಭಕ್ತಿ ಗೀತೆ, ರಂಗೋಲಿ ಸೇರಿದಂತೆ ಮೂರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ 700 ಕ್ಕೂ ಹೆಚ್ಚು ಜಿಲ್ಲೆಗಳಿಂದ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.