ವಾಟ್ಸ್ಆ್ಯಪ್ (WhatsApp) ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲು ಯೋಜಿಸುತ್ತಿದೆ. ಮತ್ತು ಈ ಬಾರಿ ಧ್ವನಿ/ವೀಡಿಯೊ ಕರೆಗಳು ಅಥವಾ ಧ್ವನಿ ಟಿಪ್ಪಣಿಗಳ ಮೇಲೆ ಕೇಂದ್ರೀಕರಿಸಿಲ್ಲ. ಬದಲಾಗಿ ಚಿತ್ರಗಳನ್ನು ಕಳುಹಿಸುವ ಮೊದಲು ಅವುಗಳನ್ನು ಎಡಿಟ್ ಮಾಡಲು ಹೆಚ್ಚಿನ ಮಾರ್ಗಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯದಲ್ಲಿ ಫೋಟೋ ಅಥವಾ ಸ್ಕ್ರೀನ್ಶಾಟ್ ಅನ್ನು ತಕ್ಷಣವೇ ಪರಿಚಯಿಸುವ ಸಾಧ್ಯತೆಯಿದೆ.
WABetaInfo ವರದಿಯ ಪ್ರಕಾರ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಇನ್-ಬಿಲ್ಟ್ ಮೀಡಿಯಾ ಎಡಿಟರ್ಗೆ ಎರಡು ಹೊಸ ಪೆನ್ಸಿಲ್ಗಳನ್ನು ಸೇರಿಸುತ್ತಿದೆ. ಇದರರ್ಥ WhatsApp ಶೀಘ್ರದಲ್ಲೇ ಮೂರು ಪೆನ್ಸಿಲ್ಗಳನ್ನು ಪರಿಚಯಿಸಬಹುದಾದ ಸಾಧ್ಯತೆಯಿದೆ. ಇದರ ಮೂಲಕ ಬಳಕೆದಾರರು ಚಿತ್ರಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಕಳುಹಿಸುವ ಒಲವು ಹೊಂದಿರುತ್ತಾರೆ. ವಾಟ್ಸ್ಆ್ಯಪ್ ಪ್ಲಾಟ್ಫಾರ್ಮ್ನಲ್ಲಿ ಹೊಸ ಬ್ಲರ್ ವೈಶಿಷ್ಟ್ಯವನ್ನು ತರಲು ಸಹ ಸಿದ್ಧವಾಗಿದೆ. ಅದು ಬಳಕೆದಾರರಿಗೆ ಫೋಟೋವನ್ನು ಕಳುಹಿಸುವ ಮೊದಲು ಅದರ ಭಾಗಗಳನ್ನು ಬ್ಲರ್ ಮಾಡಲು ಅನುಮತಿಸುತ್ತದೆ.
ಇದು ಪ್ಲಾಟ್ಫಾರ್ಮ್ಗೆ ಹೆಚ್ಚು ಅಗತ್ಯವಿರುವ ಸೇರ್ಪಡೆಯಾಗಿರಬಹುದು ಮತ್ತು ಸೂಕ್ಷ್ಮ ಡೇಟಾದೊಂದಿಗೆ ನೀವು ಸಾಕಷ್ಟು ಸ್ಕ್ರೀನ್ಶಾಟ್ಗಳನ್ನು ಕಳುಹಿಸಿದರೆ ಅದು ತುಂಬಾ ಉಪಯುಕ್ತವಾಗಿರುತ್ತದೆ. ಚಿತ್ರದ ಸೂಕ್ಷ್ಮ ಭಾಗವನ್ನು ಕ್ರಾಪ್ ಮಾಡುವುದು ಒಂದು ಆಯ್ಕೆಯಾಗಿದೆ. ಆದರೆ ಇದು ಯಾವಾಗಲೂ ಕೆಲಸ ಮಾಡುವುದಿಲ್ಲ. ಉದಾಹರಣೆಗೆ ಸಂಭಾಷಣೆಯ ಮಧ್ಯದಲ್ಲಿರುವ ಚಾಟ್ನ ಭಾಗವನ್ನು ನೀವು ಕ್ರಾಪ್ ಮಾಡಲು ಸಾಧ್ಯವಿಲ್ಲ.
ಅಂತಹ ಸಂದರ್ಭಗಳಲ್ಲಿ ಆಯ್ದ ಬ್ಲರ್ ಅಥವಾ ಎಡಿಟ್ಗಾಗಿ WhatsApp ಬಳಕೆದಾರರು ಬೇರೆ ಆ್ಯಪ್ನ ಮೊರೆ ಹೋಗುತ್ತಾರೆ. ಅಂದಹಾಗೆಯೇ ವಾಟ್ಸ್ಆ್ಯಪ್ನಲ್ಲಿ ಶೀಘ್ರವೇ ಎಡಿಟ್ ಮತ್ತು ಕ್ರಾಪ್ ಮಾಡುವ ವೈಶಿಷ್ಟ್ಯ ಸೇರ್ಪಡೆಯಾಗಲಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ ಹೊಸ ಫೀಚರ್ಸ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಅಪ್ಡೇಟ್ಗೆ ಕಾಯಬೇಕಿದೆ.