WhatsApp ನ ಇತ್ತೀಚಿನ ಅನುಸರಣೆ ವರದಿ ಹೊರಬಿದ್ದಿದೆ. ವಾಟ್ಸಾಪ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಟ್ಸಾಪ್ ಭಾರತದಲ್ಲಿ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಿದೆ. ಜನವರಿ 1 ಮತ್ತು ಜನವರಿ 31 ರ ನಡುವೆ WhatsApp ಭಾರತದಲ್ಲಿ ಸುಮಾರು 18,50,000 ಖಾತೆಗಳನ್ನು ನಿಷೇಧಿಸಿದೆ. ಕಂಪನಿಯು ಜನವರಿಯಲ್ಲಿ 495 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ. ಮತ್ತು ಅದೇ ತಿಂಗಳಲ್ಲಿ 24 ರ ಮೇಲೆ ಕ್ರಮ ಕೈಗೊಂಡಿದೆ ಎಂದು ಬಹಿರಂಗಪಡಿಸಿದೆ. WhatsApp ನ ಇತ್ತೀಚಿನ ಅನುಸರಣೆ ವರದಿ ಹೊರಬಿದ್ದಿದೆ. ವಾಟ್ಸಾಪ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಟ್ಸಾಪ್ ಭಾರತದಲ್ಲಿ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಿದೆ.
ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ “ವಾಟ್ಸ್‌ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.
ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.
ಪ್ರಮುಖವಾಗಿ ನೀವು ತುಂಬಾ ಖಾಸಾಗಿ ವಿಷಯಗಳನ್ನು ಯಾವುದೇ ಕಾರಣಕ್ಕೂ ವಾಟ್ಸ್ಆ್ಯಪ್ನಲ್ಲಿ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ (ಪೋರ್ನ್ ವಿಡಿಯೋ) ವಿಡಿಯೋಗಳನ್ನು ಕಳುಹಿಸಿದರೆ ನಿಮ್ಮನ್ನು ಜೈಲಿಗೆ ತಳ್ಳಬಹುದು. ಅಂತಹ ವಿಡಿಯೋಗಳನ್ನು ಕಳುಹಿಸುವಾಗ ನಿಮ್ಮ ಸಂಖ್ಯೆಯನ್ನು ಯಾರಾದರೂ ವರದಿ ಮಾಡಿದರೆ ನಿಮ್ಮ ಖಾತೆಯನ್ನು ಸಹ ನಿಷೇಧಿಸಬಹುದು.
ಇದರ ನಡುವೆಯೇ ಬಳಕೆದಾರರಿಗೆ ಆಕರ್ಷಕ ಫೀಚರ್ಗಳನ್ನು ನೀಡಲು ವಾಟ್ಸ್‌ಆ್ಯಪ್ ಮುಂದಾಗಿದೆ. ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಸೇರ್ಪಡೆ ಆಗಲು ಕಾಲ್ಸ್ ಲಿಂಕ್ಗಳನ್ನು ಕ್ರಿಯೆಟ್ ಮಾಡಲು ಅವಕಾಶ ನೀಡಲಿದೆ. ಇದರಿಂದ ವಾಟ್ಸಾಪ್ ಕಾಲ್ ಅನ್ನು ಕಾಲ್ಸ್ ಲಿಂಕ್ ಮೂಲಕವೇ ಸೇರಬಹುದಾಗಿದೆ. ಗ್ರೂಪ್ ಕಾಲ್ ಹೋಸ್ಟ್ ಮಾಡುವವರು ಕಾಲ್ಸ್ ಲಿಂಕ್ ಮೂಲಕ ತಮ್ಮ ಸ್ನೇಹಿತರನ್ನು ಇನ್ವೈಟ್ ಮಾಡಲು ಸಾಧ್ಯವಾಗಲಿದೆ.
ಮೆಸೇಜಿಂಗ್ ಅಪ್ಲಿಕೇಶನ್ ಇತರ ಬಳಕೆದಾರರಿಂದ ಪಡೆದ ಕುಂದುಕೊರತೆಗಳ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಂಡಿದೆ. ಗಮನಾರ್ಹವಾಗಿ WhatsApp ನ ಸೇವಾ ನಿಯಮಗಳ ಉಲ್ಲಂಘನೆ ಅಥವಾ WhatsApp ನಲ್ಲಿನ ಖಾತೆಗಳ ಕುರಿತು ಪ್ರಶ್ನೆಗಳಿಗೆ ಸಂಬಂಧಿಸಿದಂತೆ WhatsApp ಬಳಕೆದಾರರು grievance_officer_wa@support.whatsapp.com ಗೆ ಇಮೇಲ್‌ಗಳನ್ನು ಕಳುಹಿಸಬಹುದು. ಕುಂದುಕೊರತೆಗಳನ್ನು ಅಂಚೆ ಮೂಲಕ ಭಾರತ ಕುಂದುಕೊರತೆ ಅಧಿಕಾರಿಗೆ ಕಳುಹಿಸಬಹುದು.