digit zero1 awards

Jio ಬಳಕೆದಾರರು 5G ಡೇಟಾ ಮತ್ತು ಕರೆಗಳೊಂದಿಗೆ 2 ವರ್ಷಗಳ FREE YouTube Premium ಪಡೆಯುವುದು ಹೇಗೆ?

Jio ಬಳಕೆದಾರರು 5G ಡೇಟಾ ಮತ್ತು ಕರೆಗಳೊಂದಿಗೆ 2 ವರ್ಷಗಳ FREE YouTube Premium ಪಡೆಯುವುದು ಹೇಗೆ?
HIGHLIGHTS

YouTube Premium ಜಾಹೀರಾತು ಮುಕ್ತ ಸ್ಟ್ರೀಮಿಂಗ್, ಆಫ್‌ಲೈನ್ ವೀಡಿಯೊಗಳು ಮತ್ತು ಹಿನ್ನೆಲೆ ಪ್ಲೇ ಫೀಚರ್ ಹೊಂದಿದೆ.

ಕೇವಲ JioFiber ಮತ್ತು Jio AirFiber ಬಳಕೆದಾರರಲ್ಲಿ 888 ರೂಗಳಿಂದ ಅಧಿಕ ಪ್ಲಾನ್ ಬಳಸುವವರಿಗೆ ಮಾತ್ರ ಈ ಆಫರ್ ಲಭ್ಯ.

ಜಿಯೋ ಆಯ್ದ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಯೂಟ್ಯೂಬ್ ಪ್ರೀಮಿಯಂ ಅನ್ನು ಉಚಿತವಾಗಿ ಬರೋಬ್ಬರಿ 2 ವರ್ಷಕ್ಕೆ ಪಡೆಯಬಹುದು.

FREE YouTube Premium: ರಿಲಯನ್ಸ್ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಹೊಸ ವರ್ಷದ ಕೊಡುಗೆಯಾಗಿ ಬಿಡುಗಡೆ ಮಾಡಿದೆ. ಆಯ್ದ JioFiber ಮತ್ತು Jio AirFiber ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಎರಡು ವರ್ಷಗಳವರೆಗೆ ಉಚಿತ ಯೂಟ್ಯೂಬ್ ಪ್ರೀಮಿಯಂ (FREE YouTube Premium) ಅನ್ನು ಉಚಿತವಾಗಿ ಮಾಡುತ್ತದೆ.

YouTube ನಿರಂತರ ಜಾಹೀರಾತುಗಳಿಂದ ಬೇಸರಗೊಂಡಿರುವ ಜಿಯೋ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಳಸುವವರು ನೀವಾಗಿದ್ದರೆ ನಿಮಗೆ ಅತ್ಯುತ್ತಮ ಆಫರ್ ಜಿಯೋ ನೀಡುತ್ತಿದೆ. ಪ್ರಪಂಚದ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಯೂಟ್ಯೂಬ್ (YouTube ) ಯಾವುದೇ ಜಾಹೀರಾತುಗಳಿಲ್ಲದೆ ಹೆಚ್ಚಿನ ಫೀಚರ್ಗಳೊಂದಿಗೆ ಉಚಿತವಾಗಿ ಬರೋಬ್ಬರಿ 2 ವರ್ಷಕ್ಕೆ ಪಡೆಯಬಹುದು.

ರಿಲಯನ್ಸ್ ಜಿಯೋದ Free YouTube Premium ಆಫರ್:

ಸಾಮಾನ್ಯವಾಗಿ ನೀವು YouTube Premium ಚಂದಾದಾರಿಕೆ ಪಡೆಯಲು ತಿಂಗಳಿಗೆ 159 ರೂಗಳು ಮತ್ತು ವರ್ಷಕ್ಕೆ 1490 ರೂಗಳಾಗಿವೆ. ಆದರೆ ಜಿಯೋ ಇದನ್ನು 2 ವರ್ಷಕ್ಕೆ ಉಚಿತವಾಗಿ ನೀಡಲು ಮುಂದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋದ ಈ ಕೆಳಗಿನ ಯೋಜನೆಗಳಿಗೆ ಚಂದಾದಾರರಾಗಿರುವ JioFiber /AirFiber ಪೋಸ್ಟ್‌ಪೇಯ್ಡ್ ಗ್ರಾಹಕರು ಈ ಆಫರ್‌ಗೆ ಅರ್ಹರಾಗುತ್ತಾರೆ. ಇದರಲ್ಲಿ ನಿಮಗೆ ರೂ 888, ರೂ 1199, ರೂ 1499, ರೂ 2499, ಮತ್ತು ರೂ 3499 ಯೋಜನೆಗಳಿಗೆ ಜಿಯೋ ಈ ಹೊಸ ಆಫರ್ ಅನ್ವಯಿಸುತ್ತದೆ.

Reliance Jio offers YouTube Premium free

ಈ YouTube Premium ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

ಮೊದಲನೆಯದಾಗಿ ನೀವು JioFiber ಅಥವಾ AirFiber ನಿಂದ ಅರ್ಹವಾದ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಖರೀದಿಸಬೇಕು ಅಥವಾ ಚಂದಾದಾರರಾಗಬೇಕು. ಅದರ ನಂತರ ನಿಮ್ಮ MyJio ಖಾತೆಗೆ ಲಾಗಿನ್ ಮಾಡಿ ಮತ್ತು ಅಪ್ಲಿಕೇಶನ್/ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ YouTube ಪ್ರೀಮಿಯಂ ಬ್ಯಾನರ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯೌಟ್ಯೂಬ್ ಖಾತೆಗೆ ಸೈನ್-ಇನ್ ಮಾಡಿ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಹೊಸದನ್ನು ರಚಿಸಬೇಕಾಗುತ್ತದೆ.

Also Read: ಅಮೆಜಾನ್ ಸೇಲ್‌ನಲ್ಲಿ Dual Display ಹೊಂದಿರುವ ಈ 5G Smartphones ಮೇಲೆ ಭಾರಿ ಡೀಲ್ ಡಿಸ್ಕೌಂಟ್‌ಗಳು!

ಇದರ ನಂತರ ನೀವು 2 ವರ್ಷಗಳ ಕಾಲ JioFiber/AirFiber ಸೇವೆಯೊಂದಿಗೆ YouTube Premium ಅನ್ನು ಆರಾಮವಾಗಿ ಆನಂದಿಸಲು ಸಾಧ್ಯವಾಗುತ್ತದೆ. ನೀವು ಜಿಯೋದ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಚಂದಾದಾರರಾಗಿದ್ದರೆ ನಿಮಗೆ ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್ ಒದಗಿಸಲು ಕಂಪನಿಗೆ ನೀವು ವಿನಂತಿಸಬಹುದು ಮತ್ತು ಅದನ್ನು ಬಳಸಿಕೊಂಡು ನಿಮ್ಮ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಿ ಒಟಿಟಿಯನ್ನು ವೀಕ್ಷಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo