Money Withdrawal: ನಿಮ್ಮ ಆಧಾರ್ ಕಾರ್ಡ್‌ನಿಂದ ಹಣ ಹಿಂಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ!

Updated on 11-Dec-2024
HIGHLIGHTS

ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆಯಾಗಿದೆ

ಇಂದಿನ ಸಮಯದಲ್ಲಿ ನೋಡಿದರೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಆಧಾರ್ ಕಾರ್ಡ್‌ನಿಂದ ಹಣ ಹಿಂಪಡೆಯಲು (Money Withdrawal) ಅಗತ್ಯತೆಗಳೇನು? ಎಲ್ಲವನ್ನು ತಿಳಿಯಿರಿ.

Money Withdrawal: ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಇದನ್ನು ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ಇಂದಿನ ಸಮಯದಲ್ಲಿ ನೋಡಿದರೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಧಾರ್ ಕಾರ್ಡ್‌ನಿಂದ (Aadhaar Card) ಹಣ ಹಿಂಪಡೆಯುವುದು ಕೂಡ ಇದರ ಅಡಿಯಲ್ಲಿ ಬರುತ್ತದೆ.

ಇಂತಹ ಸೇವೆಗಳನ್ನು ಹೆಚ್ಚಾಗಿ ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ ಇದಕ್ಕೆ ಕಾರಣವೆಂದರೆ ಬ್ಯಾಂಕ್ ಬಳಿ ಸೇರುವ ಸಾಲುಗಳಾಗಿರಬಹುದು ಅಥವಾ ATM ಮೇಷನ್ ಕೆಟ್ಟಿರಬಹುದು ಅಥವಾ ತುರ್ತು ಸಮಯಕ್ಕೆ ಬ್ಯಾಂಕ್ ಆಗೋಲ್ಲ ಎನ್ನುವ ಸನ್ನಿವೇಶಗಗಳಲ್ಲಿ ಇದು ಹೆಚ್ಚು ಅನುಕೂಲವಾಗಿರುತ್ತದೆ.

Also Read: ದಿನಕ್ಕೆ 10 ರೂಗಳು ಮತ್ತು ತಿಂಗಳಿಗೆ 90GB ಡೇಟಾ ಮತ್ತು ಕರೆ ಪಡೆಯುವ ಈ BSNL ಜಬರ್ದಸ್ತ್ ಪ್ಲಾನ್ ಎಷ್ಟು ಗೊತ್ತಾ?

ಆಧಾರ್ ಕಾರ್ಡ್‌ನಿಂದ ಹಣ ಹಿಂಪಡೆಯಲು (Money Withdrawal) ಅಗತ್ಯತೆಗಳೇನು?

ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಹಣ ಹಿಂಪಡೆಯಲು ಬಯಸುವುದಾದರೆ ಈ ಪ್ರಕ್ರಿಯೆ ತುಂಬ ಸರಳ ಮತ್ತು ಸುರಕ್ಷವಾಗಿದೆ ಎಂದು ನಂಬುವುದು ಕೊಂಚ ಸರಿಯಲ್ಲ ಅನ್ನೋದು ನನ್ನ ಅನಿಸಿಕೆ. ಆದರೂ ಅನೇಕ ಅನಿವಾರ್ಯತೆಗಳ ಕಾರಣ ಈಗಾಗಲೇ ಮೇಲೆ ತಿಳಿಸಿರುವಂತೆ ಇಂತಹ ಸೇವೆಗಳನ್ನು ಹೆಚ್ಚಾಗಿ ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಈ ಪ್ರಕ್ರಿಯಯ ಸಮಯದಲ್ಲಿ ಈ ಸೇವೆಯನ್ನು ಬಳಸುವ ಮೊದಲು ಈ ಮುಖ್ಯಾಂಶಗಳ ಅಗತ್ಯವಿರುತ್ತದೆ.

ಆಧಾರ ನಂಬರ್ ಮತ್ತು ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಯ ಮಾಹಿತಿ ನಿಮ್ಮೊಂದಿಗಿರಬೇಕು. ಅಲ್ಲದೆ ಈ ಸೇವೆಯನ್ನು ಮೈಕ್ರೋ ಎಟಿಎಂ ಮತ್ತು ಮೊಬೈಲ್ ಅಪ್ಲಿಕೇಶನ್ ಎಂಬ ಎರಡು ಸರಳ ಮಾದರಿಗಳನ್ನು ಬಳಸಬಹುದು. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಸೈಬರ್ ಕೇಫ್ಯವರ ಬಳಿಯಿಂದಲೂ ಈ ತುರ್ತು ಸೇವೆಯನ್ನು ಪಡೆಯಬಹುದು. ಈ ಕೆಲಸಕ್ಕಾಗಿ ಅವರು ಒಂದಿಷ್ಟು % ಮೊತ್ತವನ್ನು ಸಹ ಪಡೆಯುತ್ತಾರೆನ್ನುವುದನ್ನು ಗಮನದಲ್ಲಿಸಿಕೊಳ್ಳಿ.

ಮೈಕ್ರೋ ಎಟಿಎಂ ಮೂಲಕ ಆಧಾರ್ ಕಾರ್ಡ್‌ನಿಂದ ಹಣ ಹಿಂಪಡೆಯುವುದು ಹೇಗೆ?

ಇದಕ್ಕಾಗಿ ಮೊದಲು ಮೈಕ್ರೋ ಎಟಿಎಂ ಸೌಲಭ್ಯ ಹೊಂದಿರುವ ನಿಮ್ಮ ಹತ್ತಿರದ ಅಂಗಡಿಗೆ ನೀವು ಹೋಗಬೇಕಾಗುತ್ತದೆ. ಇದರ ನಂತರ ನೀವು ನಿಮ್ಮ ಆಧಾರ್ ಅನ್ನು ಆ ಅಂಗಡಿಯವರಿಗೆ ನೀಡಿ ಅಥವಾ ನಿಮ್ಮ ಆಧಾರ್ ಸಂಖ್ಯೆಯನ್ನು ಹೇಳುವ ಮೂಲಕ ತಿಳಿಸಿ. ಈಗ ಅವರು ನಿಮ್ಮ ಹೆಬ್ಬೆರಳು ಅಥವಾ ಯಾವುದೇ ಬೆರಳನ್ನು ಯಂತ್ರದ ಸ್ಕ್ಯಾನರ್‌ನಲ್ಲಿ ಇರಿಸಲು ಕೇಳುತ್ತಾರೆ.

ನಿಮ್ಮ ಹೆಬ್ಬೆರಳು ಅಥವಾ ಬೆರಳನ್ನು ಅದರ ಮೇಲೆ ಇರಿಸಿದಾಗ ಅದನ್ನು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಇದರ ನಂತರ ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಅನ್ನು ಪ್ರದರ್ಶಿಸಲಾಗುತ್ತದೆ. ಬ್ಯಾಂಕ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಸುಲಭವಾಗಿ ನಿಮ್ಮ ಹಣವನ್ನು ಹಿಂಪಡೆಯಬಹುದು.

ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಕಾರ್ಡ್‌ನಿಂದ ಹಣ ಹಿಂಪಡೆಯುವುದು ಹೇಗೆ?

ನೀವು ಮೈಕ್ರೋ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾದರೆ ನೀವು ಕೆಳಗೆ ನೀಡಲಾದ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಮೈಕ್ರೋ ಎಟಿಎಂನಿಂದ ಹಣವನ್ನು ಹಿಂಪಡೆಯುವುದಕ್ಕಿಂತ ಮೊಬೈಲ್ ಅಪ್ಲಿಕೇಶನ್‌ನಿಂದ ಹಣವನ್ನು ಹಿಂಪಡೆಯುವ ವಿಧಾನವು ಸರಳ ಮತ್ತು ಸುಲಭವಾಗಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಹಣವನ್ನು ಹಿಂಪಡೆಯಲು ತಮ್ಮ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸುವ ಕೆಲವು ಪ್ರಸಿದ್ಧ CSC DigiPay, PayNearby, FinoMitra, Spice Money Adhikari ಮತ್ತು Aadhaar ATM ಕಂಪನಿಗಳ ಅಪ್ಲಿಕೇಶನ್ ಸಹ ಬಳಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :