Tips And Trick; ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್ ನಿಮಗೊತ್ತಾ!

Updated on 21-Feb-2025
HIGHLIGHTS

ಯೂಟ್ಯೂಬ್ (YouTube) ಪ್ರೈಮರಿ ವೀಡಿಯೊ ಸ್ಟ್ರೀಮಿಂಗ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್ಫೋನ್ ಮೂಲಕ ಯಾವುದೇ ಅಪ್ಲಿಕೇಶನ್ ಬಳಕೆಗೆ ಮೂಲ ಇಂಟರ್‌ನೆಟ್ ಬೇಕೇ ಬೇಕು ಅಲ್ವಾ?

ಆದರೆ ಇಂದು ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್ ಬಗ್ಗೆ ಮಾಹಿತಿ ಇಲ್ಲಿದೆ.

Use YouTube Without Internet: ಆನ್‌ಲೈನ್ ಕನೆಕ್ಷನ್ ಹೊಂದಿರುವ ಬಹುತೇಕ ಎಲ್ಲರಿಗೂ ಯೂಟ್ಯೂಬ್ (YouTube) ಪ್ರೈಮರಿ ವೀಡಿಯೊ ಸ್ಟ್ರೀಮಿಂಗ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಮಕ್ಕಳಿಂದ ಮುದುಕರವರೆಗೆ ಸರಿ ಸುಮಾರು ಸ್ಮಾರ್ಟ್ಫೋನ್ ಎಲ್ಲರ ಕೈಯಲ್ಲಿ ಕಂಡಿರಬಹುದು. ಅಲ್ಲದೆ ಜನಪ್ರಿಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ನೆಟ್‌ವರ್ಕ್‌ಗಳ ಬಳಕೆಯ ಹವ್ಯಾಸವಾಗಿರುವುದು ಸಹ ಕಾಣಬಹುದು.

YouTube Tips And Trick

ಆದರೆ ಈ ಎಲ್ಲಾ ಪ್ಲಾಟ್‌ಫಾರಂ ಬಳಕೆಗೆ ಮೂಲ ಇಂಟರ್‌ನೆಟ್ ಬೇಕೇ ಬೇಕು ಅನ್ನೋದು ನಮಗೆಲ್ಲ ತಿಳಿದ ಮಾಹಿತಿಯಾಗಿದೆ. ಕೇವಲ ಇಂಟರ್‌ನೆಟ್ ಸ್ಪೀಡ್ ಸ್ವಲ್ಪ ಕಡಿಮೆಯಾದ್ರೂ ವಿಡಿಯೋ ಪ್ಲೇ ಆಗೋದಿಲ್ಲ ಅಲ್ಲದೆ ಹಲವು ಬಾರಿ ನೀವು ಪ್ರಯಾಣದಲ್ಲಿರು ಸಂದರ್ಭದಲ್ಲಿ ಕನೆಕ್ಷನ್ ಏರಿಳಿತಗಳ ಕಾರಣ ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿಡಿಯೋಗಳು ಸ್ಟ್ರೀಮ್ ಮಾಡಲಾಗದು. ಆದರೆ ಇಂದಿಗೂ ಬಹುತೇಕರಿಗೆ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡಬಹುದು ಎನ್ನುವುದರ ಬಗ್ಗೆ ಅರಿವೇ ಇಲ್ಲ.

Use YouTube Without Internet Tips And TrickUse YouTube Without Internet Tips And Trick

ಯುಟ್ಯೂಬ್ Offline Save ಫೀಚರ್ ಬಳಸಿ:

ಆದರೆ ಇಂದು ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇಂಟರ್‌ನೆಟ್ ಇಲ್ಲದೇ ಯುಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಸಲು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನೀವು ಯುಟ್ಯೂಬ್‌ನಲ್ಲಿ “Offline Save” ಫೀಚರ್ ಬಳಸಬಹುದು. ಯುಟ್ಯೂಬ್ ತನ್ನ ಅಫಿಷಿಯಲ್ ಅಪ್ಲಿಕೇಶನ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವ ಆಯ್ಕೆ ನೀಡಲಾಗಿದೆ.

Also Read: SIM Card Rules: ನೀವೊಂದು ಸಿಮ್ ಕಾರ್ಡ್ ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಈ ಹೊಸ ನಿಯಮಗಳನ್ನು ತಿಳಿಯಿರಿ!

ಯುಟ್ಯೂಬ್ Offline Save ಫೀಚರ್ ಮೂಲಕ ಡೌನ್‌ಲೋಡ್ ಮಾಡೋದು ಹೇಗೆ?

ಇಲ್ಲಿ ನೀವು ವಿಡಿಯೋ ಡೌನ್‌ಲೋಡ್ ಮಾಡಿಕೊಂಡಿದ್ರೆ ಇಂಟರ್‌ನೆಟ್ ಇಲ್ಲದಿರೋ ಸಂದರ್ಭದಲ್ಲಿಯೂ ವಿಡಿಯೋಗಳನ್ನು ನೋಡಬಹುದು. ಈ ಫೀಚರ್ ಬಳಸಲು ಯುಟ್ಯೂಬ್ ತೆರೆದು ನಿಮಗಿಷ್ಟ ಬಂದ ವಿಡಿಯೋಗಳನ್ನು ಸರ್ಚ್ ಮಾಡಿಪ್ಲೇ ಮಾಡಿ. ಈಗ ಕೆಳಗಡೆ ನೀಡಲಾಗಿರುವ ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೇಕಾದ ಕ್ವಾಲಿಟಿಯ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳಬಹುದು.

YouTube Playables

ಈ ವಿಡಿಯೋ ಲ್ರೈಬ್ರರಿಯಲ್ಲಿ ಸೇವ್ ಆಗಿರುತ್ತದೆ. ಲೈಬ್ರರಿಗೆ ಹೋಗಿ ನಿಮ್ಮಿಷ್ಟದ ವಿಡಿಯೋ ವೀಕ್ಷಿಸಿ ನೀವು ಯುಟ್ಯೂಬ್‌ನಲ್ಲಿ ಪ್ರೀಮಿಯಂ ಬಳಕೆದಾರರಾಗಿದ್ದರೆ ಜಾಹೀರಾತು-ಮುಕ್ತ ವೀಡಿಯೊ ಸ್ಟ್ರೀಮಿಂಗ್ ಮತ್ತು ಆಫ್‌ಲೈನ್ ಡೌನ್‌ಲೋಡ್‌ಗಳ ಆಯ್ಕೆ ಲಭ್ಯವಾಗುತ್ತದೆ. ಪ್ರೀಮಿಯಂ ಬಳಕೆದಾರರು ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ನೀವು ಬೇರೆ ವೆಬ್‌ಸೈಟ್ ಅಥವಾ ಪ್ಲಾಟ್‌ಫಾರಂ ಮೂಲಕ ಯುಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಕೊಳ್ಳಬಹುದು. ಆದರೆ ಇದು YouTube ನೀತಿಗೆ ವಿರುದ್ಧವಾಗಿದೆ ಮತ್ತು ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು. ಸ್ಮಾಲ್ ಕಂಟೆಂಟ್ ವಿಡಿಯೋಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀವು ಬಳಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :