ಆಧಾರ್ ಕಾರ್ಡ್ (Aadhaar Card) ಭಾರತ ಸರ್ಕಾರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಭಾರತದ ನಾಗರಿಕರಿಗೆ ನೀಡಲಾದ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ನಾಗರಿಕ ಸೇವೆಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರಿ ಡೇಟಾಬೇಸ್‌ನಲ್ಲಿ ವೈಯಕ್ತಿಕ ವಿವರಗಳು, ಜನಸಂಖ್ಯಾ ವಿವರಗಳು ಮತ್ತು ನಿವಾಸಿ ವ್ಯಕ್ತಿಗಳ ಬಯೋಮೆಟ್ರಿಕ್ ವಿವರಗಳನ್ನು ಈ ಕಾರ್ಡ್ ಹೊಂದಿರುತ್ತದೆ. ಆಧಾರ್ ಕಾರ್ಡ್ ಭಾರತೀಯರ ಅತಿದೊಡ್ಡ ಗುರುತಿನ ಮತ್ತು ಅಡ್ರೆಸ್ ಪುರಾವೆಯಾಗಿ ಬಳಸಬಹುದಾದ ಪ್ರಮುಖ ದಾಖಲೆಯಾಗಿದೆ. ಇದರಿಂದ ದೇಶದ ಪ್ರಜೆಗಳು ಸರ್ಕಾರದ ಸಬ್ಸಿಡಿ ಮತ್ತು ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ.
ಆಧಾರ್ ಸೇವೆಗಳ ಉತ್ತಮ ಭಾಗವೆಂದರೆ ಅದರ ಮಹತ್ವ ಮತ್ತು ಸುಲಭ ಮತ್ತು ಸರಳವಾಗಿ ಪಡೆಬಹುದು. ಒಮ್ಮೆ ನೀವು ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಅದು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇದನ್ನು ಇ-ಆಧಾರ್ ಕಾರ್ಡ್ (e-Aadhaar) ಎಂದು ಕರೆಯಲಾಗುತ್ತದೆ. ಇದನ್ನು ಯಾವುದೇ ತೊಂದರೆಗಳಿಲ್ಲದೆ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು. ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಹಲವಾರು ವಿಧಾನಗಳಿಂದ ಆನ್‌ಲೈನ್‌ನಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು.
ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ
➥ಮೊದಲಿಗೆ ನೀವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
➥ಇಲ್ಲವಾದರೆ ನೇರವಾಗಿ https://myaadhaar.uidai.gov.in/genricDownloadAadhaar ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
➥ಇದರ ನಂತರ ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಕ್ಯಾಪ್ಚವನ್ನು ನಮೂದಿಸಿ Send OTP ಮೇಲೆ ಕ್ಲಿಕ್ ಮಾಡಿ
➥ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಪಡೆಯುವಿರಿ
➥ಸ್ವೀಕರಿಸಿದ OTP ಅನ್ನು ನಮೂದಿಸಿದ ನಂತರ ವ್ಯಾಲಿಡೇಟ್ ಮಾಡಿದ ನಂತರ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ ಸಾಕು
➥ಈಗ ಈ ನಿಮ್ಮ ಇ-ಆಧಾರ್ ಕಾರ್ಡ್ ಪಾಸ್‌ವರ್ಡ್‌ನೊಂದಿಗೆ ರಕ್ಷಿಸಲಾಗಿರುವ PDF ಫಾರ್ಮ್ಯಾಟ್‌ನಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಆಗುತ್ತದೆ
➥ನಂತರ ಈ ನಿಮ್ಮ ಇ-ಆಧಾರ್ ಪಿಡಿಎಫ್ ಡಾಕ್ಯುಮೆಂಟ್ ಅನ್ನು ತೆರೆಯಲು ಪಾಸ್ವರ್ಡ್ ಬೇಕಾಗುತ್ತದೆ. ಇದನ್ನು ಯಾರ ಆಧಾರ್ ಕಾರ್ಡ್ ಇದ್ಯೋ ಅವರ ಮೊದಲ ಹೆಸರಿನ ಮೊದಲ 4 ಆಂಗ್ಲ ಅಕ್ಷರಗಳೊಂದಿಗೆ ಅವರ ಹುಟ್ಟಿದ ವರ್ಷವನ್ನು ನೀಡಿ ತೆರೆಯಬಹುದು. ಈಗ ಇದನ್ನು ನೀವು ಪ್ರಿಂಟ್ ಸಹ ಮಾಡಿಕೊಳ್ಳಬಹುದು.
ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನುಸೇರಿಕೊಳ್ಳಿ
➥ಈ ವಿಧಾನ ಕೊಂಚ ಸುಲಭವಾಗಿದ್ದು ಸದಾ ನಿಮ್ಮ ಫೋನ್ ಒಳಗೆ ಲಾಕ್ ಮಾಡಿಡಬಹುದು.
➥ಇದಕ್ಕಾಗಿ ಮೊದಲಿಗೆ ನೀವು ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಎಂ-ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
➥ಈ ಎಂ-ಆಧಾರ್ ಅಪ್ಲಿಕೇಶನ್ ತೆರೆದು 4 ಸಂಖ್ಯೆಯ ಪಿನ್ ಅನ್ನು ಆರಿಸಿಕೊಳ್ಳಿ ನಂತರ ಪುನಃ ಹಾಕಿ ಖಚಿತ ಪಡಿಸಿಕೊಳ್ಳಿ
➥ಈಗ ಇದರಲ್ಲಿ ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಕೆಳಗಿನ ಕ್ಯಾಪ್ಚವನ್ನು ಹಾಕಿ Request OTP ಮೇಲೆ ಕ್ಲಿಕ್ ಮಾಡಿ
➥ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಪಡೆಯುವಿರಿ
➥ಸ್ವೀಕರಿಸಿದ OTP ಅನ್ನು ನಮೂದಿಸಿದ ನಂತರ ವ್ಯಾಲಿಡೇಟ್ ಮಾಡಿ ಅಪ್ಲಿಕೇಶನ್‌ನಿಂದ ಡೌನ್ಲೋಡ್ ಮಾಡಿಕೊಳ್ಳಿ ಅಷ್ಟೇ.
ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ