ಗೂಗಲ್ ಪೇ ಇತ್ತೀಚೆಗೆ ಗೂಗಲ್ ಪೇ ಬಳಕೆದಾರರಿಗೊಂದು ಹೊಸ ಸ್ಟ್ಯಾಂಪ್ಸ್ ಕಾರ್ಡ್ ಕೊಡುಗೆಯನ್ನು 2020 ಮೂಲಕ ಸ್ವಾಗತಿಸಿದೆ. ಇದನ್ನು Welcome 2020 Stamps ಎಂದು ಕರೆಯಲಾಗುತ್ತದೆ. ಈ ಕೊಡುಗೆಯ ವ್ಯಾಲಿಡಿಟಿ ಇದೇ ವರ್ಷದ 31ನೇ ಡಿಸೆಂಬರ್ 2019 ರಂದು ಕೊನೆಗೊಳ್ಳುತ್ತದೆ. ಆದ್ದರಿಂದ ನಾನು ನಿಮಗೆ ಗೂಗಲ್ ಪೇಯಲ್ಲಿ ಸ್ಟ್ಯಾಂಪ್ ಸಂಗ್ರಹಿಸಿ ಸುಮಾರು ₹202 ರೂಗಳಿಂದ ₹2020 ರೂಗಳವರೆಗಿನ ಬೋನಸ್ ಪಡೆಯುವುದೇಗೆ ಎನ್ನುವುದರ ಬಗ್ಗೆ ತಿಳಿಸಲಿದ್ದೇನೆ.
ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಗೂಗಲ್ ಪೇ ಈ ಮೊದಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಂಗೋಲಿ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಆಫರ್ ನೀಡಿತು. ಇದು ಮೊದಲು ದೀಪಾವಳಿವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಜನರಿಂದ ಹೆಚ್ಚು ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಬಂದ ಕಾರಣ ಈ ಆಫರ್ ನವೆಂಬರ್ 11ರ ವರೆಗೆ ವಿಸ್ತರಿಸಲಾಗಿತ್ತು. ಈ ಕೇಕ್ ನ ಮೂರು ಹಂತಗಳಲ್ಲಿ ಒಂದು ಹಂತವನ್ನು ಮುಗಿಸಿದರೂ 1 ಬೋನಸ್ ರಿವಾರ್ಡ್ ಸಿಗಲಿದೆ ಮೂರು ಹಂತ ಮುಗಿಸಿದರೆ ಮೂರು ಬೋನಸ್ ರಿವಾರ್ಡ್ ಸಿಗುತ್ತದೆ. ಡಿಸೆಂಬರ್ 23 ರಿಂದ 31ರವರೆಗಿನ ಅವಧಿಯಲ್ಲಿ ಈ ಕೆಳಗಿನ ರೀತಿಯಲ್ಲಿ ಮಾಡಿದ್ದಲ್ಲಿ ಈ ಸ್ಟ್ಯಾಂಪ್ ಗಳು ಸಿಗುತ್ತದೆ.
ಅದೇ ಮಾದರಿಯನ್ನು ಈಗ ಅನುಸರಿಸಲಾಗಿದ್ದು ಡಿಸೆಂಬರ್ 23 ರಿಂದ 31ರವರೆಗೆ ಗೂಗಲ್ ಪೇ ವೆಲ್ಕಂ 2020 ಸ್ಟ್ಯಾಂಪ್ಸ್ ಆಫರ್ ನೀಡಿದೆ. ಹಾಗಿದ್ದರೆ ಗೂಗಲ್ ಪೇನಲ್ಲಿ ಸ್ಟ್ಯಾಂಪ್ ಗಳನ್ನ ಸಂಗ್ರಹಿಸುವುದು ಹೇಗೆ ಎಂಬುದರ ಬಗ್ಗೆ ವಿವರಣೆ ಈ ಕೆಳಗಿದೆ. ಗೂಗಲ್ ಪೇ ವೆಲ್ಕಂ 2020 ಗೇಮ್ ನಲ್ಲಿ ಒಟ್ಟು 7 ಸ್ಟ್ಯಾಂಪ್ಸ್ ಗಳನ್ನು ಸಂಗ್ರಹಿಸಬೇಕಾಗುತ್ತದೆ. ಕೇಕ್ ಮಾದರಿಯಲ್ಲಿರುವ ಈ ಗೇಮ್ ನಲ್ಲಿ ಸ್ಟ್ಯಾಂಪ್ಸ್ ಗಳನ್ನು ಸಂಗ್ರಹಿಸುತ್ತಾ ಹೋದಂತೆ ಗೇಮ್ ಮುಕ್ತಾಯಗೊಳ್ಳುತ್ತದೆ.
ಒಟ್ಟು 7 ಸ್ಟ್ಯಾಂಪ್ಸ್ ಗಳನ್ನು ಸಂಗ್ರಹಿಸಬೇಕಾಗುತ್ತದೆ.
ಈ ಬಲೂನ್, ಡಿಜೆ, ಸನ್ ಗ್ಲಾಸ್, ಟಾಫಿ, ಸೆಲ್ಫಿ, ಪಿಜ್ಹಾ, ಡಿಸ್ಕೊ ಎಂಬ ಹೆಸರಿನ 7 ಸ್ಟ್ಯಾಂಪ್ಸ್ ಸಂಗ್ರಹಿಸಿದರೆ ಹಣ ಗಳಿಸಬಹುದು ಎಂದು ಗೂಗಲ್ ಪೇ ಪ್ರಕಟಿಸಿದೆ. ಇದರಲ್ಲಿ 98 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಗೂಗಲ್ ಪೇ ಬಳಸುವ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಅಥವಾ ಗೂಗಲ್ ಪೇಯುಳ್ಳ ಅಂಗಡಿಗಳಲ್ಲಿ ಅವರ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಮೂಲಕ ಸ್ಟ್ಯಾಂಪ್ ಸಂಗ್ರಹಿಸಬಹುದು.
98 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಗೂಗಲ್ ಪೇ ಬಳಸುವ ನಿಮ್ಮ ಸ್ನೇಹಿತರಿಗೆ ಸಂಬಂಧಿಕರಿಗೆ ಅಥವಾ ಗೂಗಲ್ ಪೇಯುಳ್ಳ ಅಂಗಡಿಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಮೂಲಕ ಸ್ಟ್ಯಾಂಪ್ ಸಂಗ್ರಹಿಸಬಹುದು.
300 ರುಪಾಯಿಗಿಂತ ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮೂಲಕ ಅಥವಾ 98 ರೂಪಾಯಿಗಿಂತ ಹೆಚ್ಚಿನ ಮೊಬೈಲ್ ರೀಚಾರ್ಜ್ ಮೂಲಕ ಸ್ಟ್ಯಾಂಪ್ ಸಂಗ್ರಹಿಸುವುದು.
ನಿಮ್ಮ ಸ್ನೇಹಿತರು ಸಂಬಂಧಿಕರಿಗೆ ಗೂಗಲ್ ಪ್ಲೇ ಲಿಂಕ್ & ಕಳುಹಿಸಿ ಇನ್ವೈಟ್ ಮಾಡಿ ಅವರು ನಿಮ್ಮ ರೆಫರಲ್ ಕೋಡ್ ಮೂಲಕ ಗೂಗಲ್ ಪೇ Sign UP ಆದರೆ ಸ್ಟ್ಯಾಂಪ್ ಪಡೆಯಬಹುದು.
ನಿಮ್ಮ ಗಿಫ್ಟ್ & ಬೋರ್ಡ್ ಮೂಲಕ ನಿಮ್ಮ ಸ್ನೇಹಿತರು ಗಿಫ್ಟ್ ಸ್ವೀಕರಿಸಿದರೆ ಸ್ಟ್ಯಾಂಪ್ ಗೆಲ್ಲಬಹುದು.
ನಿಮ್ಮ ಸುತ್ತಮುತ್ತಲಿರುವ ಯಾವುದೇ 2020 ಸಂಖ್ಯೆಯನ್ನು ಸ್ಕ್ಯಾನ್ ಮಾಡಿದರೆ ಸ್ಟ್ಯಾಂಪ್ ಸಿಗುತ್ತದೆ.