SBI Balance Check: ಭಾರತದ ಜನಪ್ರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಖಾತೆ ಹೊಂದಿರುವವರಲ್ಲಿ ನೀವೊಬ್ಬರಾಗಿದ್ದರೆ ನಿಮ್ಮ ಖಾತೆಯ ಎಲ್ಲಾ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಅನುವು ಮಾಡಿಕೊಡುವ ಅನೇಕ ಆನ್‌ಲೈನ್ ಸೇವೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ನೀಡುತ್ತದೆ. ಪ್ರತಿದಿನ ನಿಮ್ಮ SBI ಖಾತೆಯ ಬ್ಯಾಲೆನ್ಸ್ ಪರಿಶಿಸಲಿಸುವುದು ಭಾರಿ ಮುಖ್ಯವಾಗಿದ್ದು ಇದಕ್ಕಾಗಿ ನೀವು ಮೊದಲಿನಂತೆ ದೀರ್ಘ ಸರದಿಯಲ್ಲಿ ಬ್ಯಾಂಕ್ ಹೋಗಿ ಕಾಯಬೇಕಾದ ದಿನಗಳು ಕಳೆದುಹೋಗಿವೆ. ನಿಮ್ಮ SBI ಬ್ಯಾಲೆನ್ಸ್ ಚೆಕ್ (SBI Balance Check) ಫೀಚರ್ ಕೆಲವೇ ಸ್ಪರ್ಶಗಳಲ್ಲಿ ಪಡೆಯಬಹುದು.
ಮಿಸ್ಡ್ ಕಾಲಿಂಗ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಂಡು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು SBI ನಿಮಗೆ ಅನುಮತಿಸುತ್ತದೆ. ನೀವು ಮೊದಲು ಈ ಸೇವೆಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಮೊದಲಿಗೆ ನೀವು ನೋಂದಾಯಿಸಿಕೊಳ್ಳಲು ಈ ಮೆಸೇಜ್ ಕಳುಹಿಸಬೇಕಾಗುತ್ತದೆ. ಮೊದಲಿಗೆ REG<ಸ್ಪೇಸ್>ಖಾತೆ ಸಂಖ್ಯೆಯನ್ನು ಟೈಪ್ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 09223488888 ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಮಿಸ್ಡ್ ಕಾಲ್ ನೀಡಿ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ (SBI Balance) ಮಾಡಲು ಸಾಧ್ಯವಾಗುತ್ತದೆ.
ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಂಡು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು SBI ನಿಮಗೆ ಅನುಮತಿಸುತ್ತದೆ. ನೀವು ಮೊದಲು ಈ ಸೇವೆಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಮೊದಲಿಗೆ ನೀವು ನೋಂದಾಯಿಸಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ +919022690226 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಾಟ್ ಬಾಕ್ಸ್‌ನಲ್ಲಿ ಆ ನಂಬರ್ Hi ಎಂದು ಟೈಪ್ ಮಾಡುವ ಮೂಲಕ ಹೊಸ ಚಾಟ್ ಪ್ರಾರಂಭಿಸಬಹುದು. ಈಗ ಪ್ರತಿಕ್ರಿಯೆಯಲ್ಲಿ ಪ್ರಾಂಪ್ಟ್‌ನಿಂದ ಗೆಟ್ ಬ್ಯಾಲೆನ್ಸ್ ಕ್ಲಿಕ್ ಮಾಡಿ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ (SBI Balance) ಮಾಡಲು ಸಾಧ್ಯವಾಗುತ್ತದೆ.
Also Read: Samsung Galaxy M15 5G Prime Edition ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ನಿಮ್ಮ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ https://www.onlinesbi.sbi/ ವೆಬ್‌ಸೈಟ್‌ಗೆ ಲಾಗಿನ್ ಮಾಡಿ. ವೈಯಕ್ತಿಕ ಬ್ಯಾಂಕಿಂಗ್ ಅಡಿಯಲ್ಲಿ ಲಾಗಿನ್ ಕ್ಲಿಕ್ ಮಾಡಿ. ನೀವು ಕಾರ್ಪೊರೇಟ್ ಖಾತೆಯನ್ನು ಹೊಂದಿದ್ದರೆ ನೀವು ಕಾರ್ಪೊರೇಟ್ ಬ್ಯಾಂಕಿಂಗ್ ಅಡಿಯಲ್ಲಿ ಲಾಗಿನ್ ಅನ್ನು ಆಯ್ಕೆ ಮಾಡಬಹುದು. ಲಾಗಿನ್ ಮಾಡಲು ಮುಂದುವರಿಸಿ ಕ್ಲಿಕ್ ಮಾಡಿ ಮತ್ತು ಇಮೇಜ್ ಕ್ಯಾಪ್ಚಾ ಕೋಡ್ ಜೊತೆಗೆ ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಒಮ್ಮೆ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸಿ ನಮೂದಿಸಿ. ಈಗ ಖಾತೆ ಸಾರಾಂಶ ಟ್ಯಾಬ್‌ಗೆ ಹೋಗಿ ಮತ್ತು ವಹಿವಾಟು ಖಾತೆಗಳ ಅಡಿಯಲ್ಲಿ ಬ್ಯಾಲೆನ್ಸ್ ಆಯ್ಕೆಗಾಗಿ ಇಲ್ಲಿ ಕ್ಲಿಕ್ ಮಾಡಿ. ಇದರೊಂದಿಗೆ ನಿಮ್ಮ SBI ಖಾತೆಯ ಬ್ಯಾಲೆನ್ಸ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ.