How To Apply For Passport Online: ಭಾರತದಲ್ಲಿ ಪಾಸ್‌ಪೋರ್ಟ್ (Passport) ಇದೊಂದು ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರದ ಅಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs (MEA) ನೀಡುವ ಪವರ್ಫುಲ್ ದಾಖಲೆಗಳಲ್ಲಿ ಒಂದಾಗಿದೆ. ಒಂದು ರಾಷ್ಟ್ರ ತನ್ನ ದೇಶದ ನಾಗರೀಕನಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಮತ್ತು ಈ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡಲಾಗುವ ಅತಿ ಮುಖ್ಯ ದಾಖಲೆಯಾಗಿದೆ.
ಆನ್‌ಲೈನ್ ಮೂಲಕ ಹೊಸ ಪಾಸ್ಪೋರ್ಟ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ ಸಾಕು! ಮನೆಗೆ ಬಂದು ಸೇರುತ್ತೆ! ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳಗಳು ಆ ವ್ಯಕ್ತಿ ಗುರುತಿನ ಅಂಶಗಳನ್ನು ಹೊಂದಿರುತ್ತದೆ. ಈ ಪಾಸ್‌ಪೋರ್ಟ್ (Passport) ನಿಮಗೆ ಅಥವಾ ನಿಮಗೆ ತಿಳಿದವರಿಗೆ ಬೇಕಿದ್ದರೆ ಒಮ್ಮೆ ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಭಾರತದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಒಳಗೊಂಡಿರಬೇಕು. ಮೊದಲಿಗೆ ನೀವು ಭಾರತದ ಪಾಸ್ಪೋರ್ಟ್ ಪಡೆಯಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ಇದೊಂದಿಗೆ ಈ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
Also Read: mAadhaar App: ನಿಮ್ಮ ಫೋನಲ್ಲಿ ಈ ಆಧಾರ್ ಅಪ್ಲಿಕೇಶನ್ ಇದ್ದರೆ ಏನೇಲ್ಲ ಪ್ರಯೋಜನಗಳಿವೆ ನಿಮಗೊತ್ತಾ?
ಮತ್ತೊಂದೆಡೆ ಇದರೊಂದಿಗೆ Passport Seva Kendra / Post Office Passport Seva Kendra ಕಚೇರಿಗೆ ನಿಮ್ಮ ಅರ್ಜಿಯ ಜೊತೆಗೆ ಎಲ್ಲಾ ಸಂಬಂಧಿತ ದಾಖಲೆಗಳ ಸ್ವಯಂ-ದೃಢೀಕರಿಸಿದ ಫೋಟೊಕಾಪಿಗಳನ್ನು ನೀವು ಸಲ್ಲಿಸಬೇಕು. PSK/POPSK ಮೂಲಕ ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸುವಾಗ ಕೌಂಟರ್‌ನಲ್ಲಿ ನಿಮ್ಮ ಮೂಲ ದಾಖಲೆಗಳನ್ನು ನೀವು ಒದಗಿಸಬೇಕಾಗುತ್ತದೆ. ಪರಿಶೀಲನೆಯ ನಂತರ ಇವುಗಳನ್ನು ಹಿಂತಿರುಗಿಸಲಾಗುತ್ತದೆ.
ನೀವೊಂದು ಹೊಸ ಪಾಸ್ಪೋರ್ಟ್ ಪಡೆಯಲು ವಯಸ್ಸಿನ ಪುರಾವೆಯಡಿಯಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ (PAN), ಜನನ ಪ್ರಮಾಣಪತ್ರ ಅಥವಾ ನಿಮ್ಮ ಮತದಾರರ ಕಾರ್ಡ್ ಐಡಿಯನ್ನು ನೀಡಬಹುದು. ಇದರ ಕ್ರಮವಾಗಿ ವಿಳಾಸ ಪುರಾವೆಯಡಿಯಲ್ಲಿ ನೀವು ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಅಥವಾ ರೆಂಟ್ ಅಗ್ರಿಮೆಂಟ್, ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಚುನಾವಣಾ ಆಯೋಗದ ಫೋಟೋ ಐಡಿಯನ್ನು ಸಹ ನೀಡಬಹುದು.
ಅಲ್ಲದೆ ಕೊನೆಯದಾಗಿ ನೀವು ಅರ್ಜಿ ನಮೂನೆಯ ಮುದ್ರಿತ ಪ್ರತಿಯ ಮೇಲೆ ನಿಮ್ಮ ಫೋಟೋವನ್ನು ಅಂಟಿಸಬೇಕಾಗುತ್ತದೆ. ಇದಕ್ಕಾಗಿ ಬಿಳಿ ಹಿನ್ನೆಲೆಯನ್ನು (White Background) ಹೊಂದಿರುವ 4.5 cm x 3.5 cm ಗಾತ್ರದಲ್ಲಿನ 5 ಕಲರ್ಫುಲ್ ಫೋಟೋಗಳನ್ನು ಸಹ ಒಯ್ಯಬೇಕಾಗುತ್ತದೆ.
Also Read: ಅಬ್ಬಬ್ಬಾ! 200 ದಿನಗಳ ವ್ಯಾಲಿಡಿಟಿ, 500GB ಡೇಟಾ ನೀಡುವ Reliance Jio ನ್ಯೂ ಇಯರ್ ಪ್ಲಾನ್ ಪರಿಚಯ!
ಪಾಸ್ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸುವ ಮೂಲಕ ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ನೋಂದಣಿ ಮಾಡಿದ ನಂತರ, ನೀವು ನೋಂದಾಯಿತ ಲಾಗ್ ಇನ್ ಐಡಿಯನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗಿನ್ ಮಾಡಬಹುದು ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು, ಅಪಾಯಿಂಟ್‌ಮೆಂಟ್ ನಿಗದಿಪಡಿಸುವುದು ಮತ್ತು ಅಗತ್ಯ ಶುಲ್ಕವನ್ನು ಪಾವತಿಸುವುದು ಮುಂತಾದ ಅಗತ್ಯಗಳನ್ನು ಮಾಡಬಹುದು.
ನಿಮ್ಮ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿದಾಗ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ SMS ಅಪಾಯಿಂಟ್‌ಮೆಂಟ್ ವಿವರಗಳನ್ನು ಒಳಗೊಂಡಿರುವುದರಿಂದ ಅರ್ಜಿದಾರರು ಅರ್ಜಿಯ ರಸೀದಿಯ ಪ್ರಿಂಟ್‌ಔಟ್ ಅನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಅಲ್ಲದೆ ವ್ಯಕ್ತಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ)/ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ) ಗೆ ಒಯ್ಯಬೇಕಾಗುತ್ತದೆ.