ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂದು ಹೊಸ ಮೊಬೈಲ್ ಸಿಮ್‌ನಿಂದ ಹಿಡಿದು ಸರ್ಕಾರಿ ಉದ್ದೇಶಗಳವರೆಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಇತ್ತೀಚೆಗೆ ಇಂತಹ ಹಲವು ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ಅನೇಕ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿರುವುದು ಕಂಡುಬಂದಿದೆ. ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ ನಂತರವೂ ಅನೇಕ ವಂಚನೆ ಪ್ರಕರಣಗಳು ನೋಡುತ್ತಿರಬಹುದು. ನಿಮಗೊತ್ತಾ ಹೊಸ ಸಿಮ್ ಕಾರ್ಡ್ ಪಡೆಯಲು ಈಗ ನೀವು ಯಾವುದೇ ಪ್ರತಿಗಳನ್ನು ನೀಡುವ ಅಗತ್ಯಗಳಿಲ್ಲ. ಬದಲಾಗಿ ಕೇವಲ ನಿಮ್ಮ ಆಧಾರ್ ಸಂಖ್ಯೆ ನೀಡಿದರೆ ಸಾಕು.
ಆನ್ಲೈನ್ ಸಿಮ್ ಕಾರ್ಡ್ ವಂಚನೆಗಳನ್ನು ತಪ್ಪಿಸಲು ದೂರಸಂಪರ್ಕ ಇಲಾಖೆ ಹೊಸ ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್‌ನ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP). ಈ ಪೋರ್ಟಲ್ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್ ಎಷ್ಟು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿದೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ Aadhaar ಕಾರ್ಡ್‌ನಿಂದ ಎಷ್ಟು Sim ಕಾರ್ಡ್ ಖರೀದಿಯಾಗಿದೆ ತಿಳಿಯೋದು ಹೇಗೆ ಮುಂದೆ ತಿಳಿಯಿರಿ.
ಇದನ್ನೂ ಓದಿ: ಇವೇ ನೋಡಿ Amazon ಸೇಲ್‌ನಲ್ಲಿ Attractive ಡಿಸ್ಕೌಂಟ್‍ನಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿಗಳು
➥ಮೊದಲು ನೀವು TAFCOP (https://tafcop.dgtelecom.gov.in/) ನ ಪೋರ್ಟಲ್‌ಗೆ ಹೋಗಬೇಕು.
➥ಇದರ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
➥ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ.
➥ಇದರ ನಂತರ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗಳಲ್ಲಿ ಎಷ್ಟು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ಇಲ್ಲಿ ಪರಿಶೀಲಿಸಬಹುದು.
➥ಯಾವುದೇ ಸಂಖ್ಯೆಯ ಬಗ್ಗೆ ನಿಮಗೆ ಅನುಮಾನವಿದ್ದರೆ ನೀವು ಅದನ್ನು ನಿರ್ಬಂಧಿಸಬಹುದು.
ಸರ್ಕಾರದ ಟೆಲಿಕಾಂ ಇಲಾಖೆಯ (DoT) ಹೊರಡಿಸಿರುವ ನಿಯಮಗಳ ಪ್ರಕಾರ ಒಂದು ಆಧಾರ್ ಕಾರ್ಡ್‌ಗೆ 9 ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಬಹುದು ಯಾವುದೇ ಆಧಾರ್ ಬಳಕೆದಾರರ ಆಧಾರ್ ಕಾರ್ಡ್ 9 ಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿದ್ದರೆ ನಂತರ ಅವರಿಗೆ ಸಂದೇಶ ಬರುತ್ತದೆ. ಒಂದೇ ಆಧಾರ್ ನಂಬರ್‌ರಿಂದ ಬಹು ಕನೆಕ್ಷನ್ ತೆಗೆದುಕೊಳ್ಳುವ ಸಂದರ್ಭಗಳು ದೊಡ್ಡ ಕುಟುಂಬಗಳಿಗೆ ಅನಿವಾರ್ಯವಾಗಿ ಈ ಸೌಲಭ್ಯವನ್ನು ಒದಗಿಸಲಾಗಿದೆ. ಆದಾಗ್ಯೂ ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ.