ಸ್ನೇಹಿತರೇ ಈ ದಿನಗಳಲ್ಲಿ ಮೆಸೇಜ್, ಫೋಟೋ, ವಿಡಿಯೋ ಅಥವಾ ಡಾಕ್ಯುಮೆಂಟ್ಗಳನ್ನು ಕಳುಹಿಸಲು WhatsApp ಅನ್ನು ನೀವು ಬಳಸುವುದು ಅನಿವಾರ್ಯವಾಗಿದೆ. ಆದರೆ ಈ ಅಪ್ಲಿಕೇಶನ್ ಬಳಸಲು ಸಹಾಯ ಮಾಡುವ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ಅಥವಾ ಎಲ್ಲೋ ಕಳ್ಳತನವಾದರೆ ಊಹಿಸಿರಿ ಒಂದು ಕ್ಷಣಕ್ಕೆ ನಿಮಗೆಷ್ಟು ದುಃಖವಾಗುತ್ತದೆ. ನಿಮ್ಮ ಮೊಬೈಲ್ ಸಾಧನಗಳನ್ನು ಕಳೆದುಕೊಳ್ಳುವುದು ಕೇವಲ ಫೋನ್ ಮಾತ್ರವಲ್ಲ ಇದರೊಂದಿಗೆ ಅದರಲ್ಲಿರುವ ನಿಮ್ಮ ಪ್ರಮುಖ WhatsApp ಡೇಟಾವನ್ನು ಸಹ ಕಳೆದುಕೊಳ್ಳುವಿರಿ.
Also Read: UPI Fraud: ನಿಮ್ಮ ಸುರಕ್ಷಿತ ವಹಿವಾಟಿಗಾಗಿ UPI ವಂಚನೆಯನ್ನು ಹೇಗೆ ತಪ್ಪಿಸಲು ಅತ್ಯುತ್ತಮ ಟಿಪ್‌ಗಳು ಇಲ್ಲಿವೆ
ಒಂದು ವೇಳೆ ನೀವು ನಿಮ್ಮ ಫೋನ್ ಎಲ್ಲೋ ಕಳೆದುಕೊಂಡರೆ ಅಥವಾ ಕಳ್ಳ ಕದೀಮರಿಂದ ನಿಮ್ಮ ಫೋನ್ ಕಳೆದುಹೋದರೆ ನಿಮ್ಮ WhatsApp ಡೇಟಾವನ್ನು ಸುರಕ್ಷಿತವಾಗಿರುವುದರಿಂದ ನೀವು ಬಹಳಷ್ಟು ವಿಷಯಗಳನ್ನು ಮಾಡಬೇಕಾಗಿದೆ. ಈ ವಿಷಯವನ್ನು ನಾನು ಗಮನದಲ್ಲಿಟ್ಟುಕೊಂಡು ಇದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೋಸ್ಕರ ವಿವರಿಸಿದ್ದೇವೆ.
ಮೊದಲಿಗೆ ನೀವು ನಿಮ್ಮ WhatsApp ಖಾತೆಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಮೊದಲಿಗೆ ಅದು ಸಂವಹನ ಸಾಧನವಾಗಿ ಮಾರ್ಪಟ್ಟಿರುತ್ತದೆ. ಮತ್ತು ನೀವು ಇತರರನ್ನು WhatsApp ಬಳಸಿದ ನಂತರ ಫೋನ್ ಕಳೆದುಕೊಳ್ಳುವುದು ನಿಜವಾಗಿಯೂ ಅಪಾಯಕಾರಿಯಾದ ಸಂಗತಿಯಾಗಿದೆ.
ಹಂತ 1: ಮೊದಲು ನಿಮ್ಮ Sim ಸರ್ವಿಸ್ ಪೂರೈಕೆದಾರ ಕಸ್ಟಮರ್ ಕೇರ್ಗೆ ಕರೆ ಮಾಡಿ ನಿಮ್ಮ Sim ಅನ್ನು ಡಿಆಕ್ಟಿವೇಟ್ ಮಾಡಿಸಿ.
ಹಂತ 2: ಈಗ ನೀವು ಡುಪ್ಲಿಕೇಟ್ Sim ಪಡೆದು ನಿಮ್ಮ ಹಳೆಯ ಅಕೌಂಟನ್ನು ಡಿಆಕ್ಟಿವೇಟ್ ಮಾಡಿ (ಮತ್ತೊಂಮ್ಮೆ ಅದೇ ನಂಬರ್ ಯೂಸ್ ಮಾಡೋಕೆ).
ಹಂತ 3: ಈಗ ನೀವು WhatsApp ತಂಡಕ್ಕೆ ನೀವೊಂದು ಮೆಸೇಜ್ / ಇಮೇಲ್ ಮಾಡಬೇಕಾಗುತ್ತದೆ.
ಹಂತ 4: ನಿಮ್ಮ WhatsApp ದುರುಪಯೋಗಪಡಿಸಿಕೊಳ್ಳಬಾರದು ಎಂದು ನೀವು ಖಚಿತಪಡಿಸಿಕೊಳ್ಳಲು ಇದು ಅತಿ ಮುಖ್ಯ.
ಹಂತ 5: ಇಮೇಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. To: support@whatsapp.com Sub: Lost/Stolen: Please deactivate my account ASAP.
ಹಂತ 6: WhatsApp ತಂಡದ E-mail ಮತ್ತು ಸಬ್ಜೆಕ್ಟ್ ನಿಮ್ಮ ವಾಟ್ಸಾಪ್ ನಂಬರ್ ಮತ್ತು ಕಾಂಟ್ರೀ ಕೋಡ್ ಮತ್ತು ಇಮೇಲ್ ನೀಡಬೇಕಗುತ್ತದೆ.
ಹಂತ 7: ಇಮೇಲ್ ಪಡೆದ WhatsApp ತಂಡ ಕೆಲವೇ ಘಂಟೆಗಳಲ್ಲಿ ನಿಮ್ಮ ಅಕೌಂಟನ್ನು ಡಿಆಕ್ಟಿವೇಟ್ ಮಾಡುತ್ತೆ.