Samsung Galaxy S10 Plus ಸ್ಮಾರ್ಟ್ಫೋನಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ಟಾಪ್ 5 ಫೀಚರ್ಗಳು

Samsung Galaxy S10 Plus ಸ್ಮಾರ್ಟ್ಫೋನಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ಟಾಪ್ 5 ಫೀಚರ್ಗಳು
HIGHLIGHTS

Samsung Galaxy S10 Plus ಈ ಫೋನ್ಗಳಲ್ಲಿ ದೊಡ್ಡ ಮತ್ತು ನಂಬಲಾಗದ ಫೀಚರ್ಗಳನ್ನು ಒಳಗೊಂಡಿದೆ.

ಸ್ನೇಹಿತರೇ ಸ್ಯಾಮ್ಸಂಗ್ ಈ ವರ್ಷ S ಸರಣಿಯ ಮೂರು ಅದ್ದೂರಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ Samsung Galaxy S10, Galaxy S10+ ಮತ್ತು Galaxy S10e. ಏಕೆಂದರೆ Galaxy S10 Plus ಈ ಫೋನ್ಗಳಲ್ಲಿ ದೊಡ್ಡ ಮತ್ತು ನಂಬಲಾಗದ ಫೀಚರ್ಗಳನ್ನು ಒಳಗೊಂಡಿದೆ.  ಯಾವುದೇ ಟೈಮ್ ವೆಸ್ಟ್ ಮಾಡ್ದೆ Samsung Galaxy S10 Plus ಸ್ಮಾರ್ಟ್ಫೋನಿನ ಟಾಪ್ 5 ನೀವು ನಾವು ತಿಳಿದುಕೊಳ್ಳಲೇಬೇಕಾದ ಫೀಚರ್ ಅಥವಾ ಅಂಶಗಳ ಬಗ್ಗೆ ನೋಡೋಣ. 

ಐದನೇಯದಾಗಿ ಈ Samsung Galaxy S10 Plus ಸ್ಮಾರ್ಟ್ಫೋನಲ್ಲಿ ರಿವರ್ಸ್ ವಯರ್ಲೆಸ್ ಚಾರ್ಜಿಂಗನ್ನು ಸಪೋರ್ಟ್ ಮಾಡುತ್ತದೆ. ರಿವರ್ಸ್ ವಯರ್ಲೆಸ್ ಚಾರ್ಜಿಂಗ್ ಮೊದಲ ಬಾರಿಗೆ ಹುವಾವೆ ತನ್ನ Mate 20 Pro ಫೋನಿನ ಮೂಲಕ ಪರಿಚಸಿತ್ತು ಈ ಫೀಚರನ್ನು Samsung Galaxy S10 Plus ಒಳಗೊಂಡಿದೆ. ಈ ರೀತಿಯಲ್ಲಿ ಮತ್ತೋಂದು ರಿವರ್ಸ್ ವಯರ್ಲೆಸ್ ಚಾರ್ಜಿಂಗ್ ಫೋನಿನ ಮೂಲಕ ಚಾರ್ಜ್ ಮಾಡಬವುದು.       

ನಾಲ್ಕನೇಯದಾಗಿ Samsung Galaxy S10 Plus ಹೊಸ HDR 10+ ಸರ್ಟಿಫಿಕೇಷನ್ ಹೊಂದಿದೆ. ಈ HDR 10+ಸ್ಟ್ಯಾಂಡರ್ಡ್ಗಳನ್ನು ಮೇಲಿಡಲು ಸ್ಯಾಮ್ಸಂಗ್ ಈ ಹೊಸ Galaxy S10 Plus ನಲ್ಲಿ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇಯನ್ನು ನೀಡಿದೆ. ಅಂಗಾದ್ರೆ ಏನಪ್ಪಾ ಅಂತೀರಾ ನೀವು ನೋಡುವ ಯಾವುದೇ ಕಂಟೆಂಟಲ್ಲಿ ಅದರ ಕಾಂಟ್ರಾಸ್ಟ್ ಮತ್ತು ಬ್ರೈಟ್ನೆಸ್ ಮಾಹಿತಿಯ ಬದಲಾವಣೆಗಳು. ಇದರಿಂದಾಗಿ ಡಿಸ್ಪ್ಲೇ ತನ್ನನ್ ತಾನೇ ಡಿಸ್ಪ್ಲೇಯಲ್ಲಿನ ಬದಲಾವಣೆಗಳೊಂದಿಗೆ ನಿಮಗೆ ಅತ್ಯುತ್ತಮವಾದ ವೀಕ್ಷಣಾ ಅನುಭವವನ್ನು ನೀಡುತ್ತದೆ.

ಮೂರನೇಯದಾಗಿ ಇದರಲ್ಲಿನ ಟ್ರಿಪಲ್ ಕ್ಯಾಮೆರಾ ಸೆಟಪ್. ಕಳೆದ ವರ್ಷ S9+ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪನ್ನು ಹೊಂದಿತ್ತು. ಈ ವರ್ಷ Galaxy S10 Plus ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 12MP ವೈಡ್ ಆಂಗಲ್, 16MP ಅಲ್ಟ್ರಾ ವೈಡ್ ಆಂಗಲ್ ಮತ್ತು 12MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದ್ದು ಕ್ಯಾಮೆರಾ ಪ್ರಿಯರಿಗೆ ಪ್ರೀತಿ ಪಾತ್ರವಾಗಿದೆ.

ಎರಡನೇದಾಗಿ Samsung Galaxy S10 Plus ಸ್ಮಾರ್ಟ್ಪೋನ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ. ಈ ಫೀಚರ್ ಈಗಾಗಲೇ ಹಲವಾರು ಫೋನ್ಗಳು ಒಳಗೊಂಡಿದೆ ಎನ್ನಬವುದು ಆದರೆ ಇದು ನಾರ್ಮಲ್ ಅಲ್ಲದೆ ಮೊತ್ತ ಮೊದಲ ಅಲ್ಟ್ರ ಸಾನಿಕ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ. ಬೇರೆ ಫೋನ್ಗಳಲ್ಲಿ ಆಪ್ಟಿಕಲ್ ಸಾನಿಕ್ ಸೆನ್ಸರ್ ಹೊಂದಿರುತ್ತದೆ. ಇದು ಸೌಂಡ್ ವೆವ್ಗಳೊಂದಿಗೆ ಮ್ಯಾಪ್ ಮಾಡುತ್ತದೆ. ಸ್ಯಾಮ್ಸಂಗ್ ಇದನ್ನು ಇದೊಂದು ಮಾರುಕಟ್ಟೆಯಲ್ಲಿ ಈಗಾಗಲೇ ಅರುವ ಫಿಂಗರ್ಪ್ರಿಂಟ್ ಸೆನ್ಸರ್ಗಳಲ್ಲಿ ಅತ್ಯುತ್ತಮವಾದ ಮತ್ತು ಹೆಚ್ಚು ಸೇಫ್ ಅಂಥ ಹೇಳಿದೆ. 

ಮೊದಲನೇಯದಾಗಿ Samsung Galaxy S10 Plus ಸ್ಮಾರ್ಟ್ಫೋನಲ್ಲಿ ನಿಮಗೆ ಎರಡು ಸೆಲ್ಫಿ ಕ್ಯಾಮೆರಾಗಳನ್ನು ನೀಡಲಾಗಿದೆ. ಇದರಲ್ಲಿ ಒಂದು 10MP ಪ್ರೈಮರಿ ಕ್ಯಾಮೆರಾ ಇದರಲ್ಲಿ ಡುಯಲ್ ಪಿಕ್ಸೆಲ್ AI ಹೊಂದಿದೆ. ಇದರ ಪಕ್ಕದಲ್ಲಿ 8MP ಡೆಪ್ತ್ ಸೆನ್ಸರ್ ಕ್ಯಾಮೆರಾ ಒಳಗೊಂಡಿದೆ. ಇದೇನಪ್ಪಾ ಮಾಡುತ್ತೆ ಅಂದ್ರೆ ನಿಮಗೆ ಫ್ರಂಟ್ ಫೇಸಿಂಗಲ್ಲಿ ಅದ್ಭುತವಾದ ಪೋಟ್ರೇಟ್ ಶಾಟ್ಗಳನ್ನು ತೆಗೆಯಲು ಸಹಕರಿಸುತ್ತದೆ. ಸ್ಯಾಮ್ಸಂಗ್  ಈ ಬಾರಿ ಸಿಮಿಲೇಷನ್ ಮೋಡ್ಗಳನ್ನು ಸಹ ನೀಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo