Samsung Galaxy M34 5G vs Galaxy A25 5G ಟಾಪ್ 5 ವಿಶೇಷಣಗಳ ಹೋಲಿಕೆಯಲ್ಲಿ ಯಾವುದು ಬೆಸ್ಟ್? | Tech News

Updated on 28-Dec-2023
HIGHLIGHTS

ಇವೆರಡರ ಟಾಪ್ 5 ವಿಶೇಷಣಗಳನ್ನು ಒಂದಕ್ಕೊಂದು ಹೋಲಿಸಿ ಹೋಲಿಕೆಗಳನ್ನು ತಿಳಿಯಿರಿ.

Samsung Galaxy M34 5G vs Galaxy A25 5G ಟಾಪ್ 5 ವಿಶೇಷಣಗಳ ಹೋಲಿಕೆ

Samsung Galaxy M34 5G vs Samsung Galaxy A25 5G: ನೀವು ಸ್ಯಾಮ್‌ಸಂಗ್‌ ಫ್ಯಾನ್ ಆಗಿದ್ದರೆ ಈ ದಕ್ಷಿಣ ಕೊರಿಯಾದ ಜನಪ್ರಿಯ ಮತ್ತು ಭರವಸೆಯ ಬ್ರಾಂಡ್ ಸ್ಯಾಮ್‌ಸಂಗ್‌ ವರ್ಷದ ಕೊನೆಯಲ್ಲಿ Galaxy A25 5G ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸಿದೆ. ಇದರ ಬೆಲೆ ಮತ್ತು ಫೀಚರ್ಗಳು ಈಗಾಗಲೇ ಭಾರತದಲ್ಲಿ ಸುಮಾರು 20,000 ರೂಗಳೊಳಗೆ ಬರುವ ಇದೇ ಫೀಚರ್ ಮತ್ತು ಬೆಲೆಯನ್ನು ಹೊಂದಿರುವ Galaxy M34 5G ಸ್ಮಾರ್ಟ್ಫೋನ್ ಜೊತೆಗೆ ಹೊಂದಿಸಿ ಇವೆರಡರ ಟಾಪ್ 5 ವಿಶೇಷಣಗಳನ್ನು ಒಂದಕ್ಕೊಂದು ಹೋಲಿಸಿ ಹೋಲಿಕೆಗಳನ್ನು ತಿಳಿಯಿರಿ. ಇದರಿಂದ ನೀವು ನೀಡುವ ಬೆಲೆಗೆ ಯಾವ ಫೀಚರ್ಗಳು ಎಷ್ಟರ ಮಟ್ಟಕ್ಕೆ ಸರಿಯಾಗಿದೆ ಎಂದು ಪರಿಶೀಲಿಸಬಹುದು. ಮಾಹಿತಿ ಇಷ್ಟವಾದರೆ ತಿಳಿಯದವರರೊಂದಿಗೆ ಹಂಚಿಕೊಳ್ಳಬಹುದು.

Also Read: Inactive UPI: ಬಳಕೆಯಿಲ್ಲದ ಯುಪಿಐ ಐಡಿಗಳನ್ನು 31ನೇ ಡಿಸೆಂಬರ್ 2023 ರಂದು ಬಂದ್ ಮಾಡಲು ಸರ್ಕಾರ ಆಗ್ರಹ

Samsung Galaxy M34 5G vs Samsung Galaxy A25 5G ಡಿಸ್ಪ್ಲೇ ಹೋಲಿಕೆ

ಮೊದಲಿಗೆ ಈ ಸ್ಮಾರ್ಟ್ಫೋನ್ಗಳ ಡಿಸ್ಪ್ಲೇ ಮಾಹಿತಿಯಲ್ಲಿ Samsung Galaxy M34 5G vs Samsung Galaxy A25 5G ಎರಡು ಫೋನ್ಗಳು ಯಾವುದೇ ತಾರತಮ್ಯವಿಲ್ಲದೆ ಒಂದೇ ಮಾದರಿಯ ಡಿಸ್ಪ್ಲೇ ಡಿಸೈನಿಂಗ್ ಹೊಂದಿದೆ. ಫೋನ್ 6.5 ಇಂಚಿನ FHD+ ಸೂಪರ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 1080 x 2340 ಪಿಕ್ಸೆಲ್ ರೆಸುಲ್ಯೂಷನ್ ಅನ್ನು ಹೊಂದಿವೆ. ಡಿಸ್ಪ್ಲೇಯಲ್ಲಿ ಹೆಚ್ಚು ಶಾರ್ಪ್ ಮತ್ತು ಕ್ಲಿಯರ್ ವೀಕ್ಷಣೆಯನ್ನು ನೀಡಲು 396ppi ಡೆನ್ಸಿಟಿಯನ್ನು ನೀಡುತ್ತದೆ. ನಮ್ಮ ಕಣ್ಣುಗಳನ್ನು ಬ್ಲೂ ಲೈಟ್‌ನಿಂದ ರಕ್ಷಿಸಲು ಇವುಗಳಲ್ಲಿ ಕಣ್ಣುಗಳ ಅನುಕೂಲಕರವಾದ ಶೀಲ್ಡ್ ಟೆಕ್ನಾಲಜಿಯನ್ನು ಹೊಂದಿದೆ.

Samsung Galaxy M34 5G vs Samsung Galaxy A25 5G ಕ್ಯಾಮೆರಾ ಹೋಲಿಕೆ

ಇವುಗಳ ಕ್ಯಾಮೆರಾ ಸೆನ್ಸರ್ ಬಗ್ಗೆ ಮಾತನಾಡುವುದಾದ್ರೆ ಎರಡು Samsung Galaxy M34 5G vs Samsung Galaxy A25 5G ಎರಡು ಫೋನ್ಗಳು ತಮ್ಮ ಮೇನ್ ಕ್ಯಾಮೆರಾ ಸೆನ್ಸರ್ ಅಲ್ಲಿ 50MP ಪ್ರೈಮರಿ ಲೆನ್ಸ್ f/1.8 ಅಪರ್ಚರ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿವೆ. ಫೋನ್ ಅಲ್ಲದೆ ಈ ಎರಡು ಫೋನ್ಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ನೊಂದಿಗೆ ಉತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ಸಪೋರ್ಟ್ ಮಾಡುತ್ತವೆ. ಎರಡನೇಯದಾಗಿ ಇದರಲ್ಲಿ ನಿಮಗೆ 8MP ಸೆನ್ಸರ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಈ ಎರಡು 5G ಫೋನ್‌ಗಳು ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇಯೊಳಗೆ ಸೆಲ್ಫಿಗಳಿಗಾಗಿ 13MP ಕ್ಯಾಮೆರಾ ಸೆನ್ಸರ್ f/2.2 ಅಪರ್ಚರ್ನೊಂದಿಗೆ ವೈಡ್ ಲೆನ್ಸ್ ಅನ್ನು ಹೊಂದಿವೆ.

Samsung Galaxy M34 5G vs Samsung Galaxy A25 5G ಹಾರ್ಡ್ವೇರ್ ಹೋಲಿಕೆ

ಈ ಎರಡು Samsung Galaxy M34 5G vs Samsung Galaxy A25 5G ಫೋನ್ಗಳು ಕಾರ್ಯಕ್ಷಮತೆ ಮತ್ತು ಸ್ಟೋರೇಜ್ ಅಲ್ಲಿ Galaxy A25 5G ಆಕ್ಟಾ-ಕೋರ್ Exynos 1280 ಚಿಪ್ 5 ನ್ಯಾನೋ ಮೀಟರ್ ಪ್ರೊಸೆಸರ್‌ನೊಂದಿಗೆ ಇದರ ಸಿಪಿಯು 2.4GHz ಜೊತೆಗೆ Mali-G68 ಜಿಪಿಯು ಮೂಲಕ ಚಾಲಿತವಾಗಿದೆ. ಅಂದ್ರೆ ನಿಮಗೆ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಲು ಪೂರ್ತಿಯಾಗಿದೆ ತಯಾರಿದೆ. ಫೋನ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ ಅನ್ನು ಫೋನ್ ಹೊಂದಿವೆ. ಈ ಸ್ಮಾರ್ಟ್ಫೋನ್ ನಿಮಗೆ 8GB RAM ಮತ್ತು 128GB ಸ್ಟೋರೇಜ್ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ One UI6 ನಲ್ಲಿ ಕಾರ್ಯನಿರ್ವಹಿಸುತ್ತವೆ.

Samsung Galaxy M34 5G vs Samsung Galaxy A25 5G ಬ್ಯಾಟರಿ ಹೋಲಿಕೆ

ಈ ಎರಡು Samsung Galaxy M34 5G vs Samsung Galaxy A25 5G ಫೋನ್ಗಳು Wi-Fi, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ. ಅಲ್ಲದೆ Dolby Atmos ಟೆಕ್ನಾಲಜಿಯನ್ನು ಸಹ ಒಳಗೊಂಡಿರುವ ಸ್ಪೀಕರ್‌ಗಳೊಂದಿಗೆ ಆಡಿಯೊ ಅನುಭವವನ್ನು ಹೆಚ್ಚಿಸುತ್ತದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಆದರೆ Samsung Galaxy A25 5G ಬೃಹತ್ 5000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿದರೆ Galaxy M34 5G ಸಹ ಅದಕ್ಕಿಂತ ದೊಡ್ಡ 6000mAh ಬ್ಯಾಟರಿಯೊಂದಿಗೆ 24W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Samsung Galaxy M34 5G vs Samsung Galaxy A25 5G ಬೆಲೆ ಹೋಲಿಕೆ

ಈ ಎರಡು Samsung Galaxy M34 5G vs Samsung Galaxy A25 5G ಫೋನ್ಗಳ ಬೆಲೆ ಮತ್ತು ಲಭ್ಯತೆ ನೋಡುವುದಾದರೆ ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ₹26,999 ರೂಗಳಾಗಿವೆ. ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ₹29,999 ರೂಗಳಾಗಿವೆ. ದರ ಕ್ರಮವಾಗಿ Samsung Galaxy M34 5G ಒಟ್ಟು ಮೂರೂ ವೇರಿಯೆಂಟ್ ಅಲ್ಲಿ ಲಭ್ಯವಿದ್ದು 6GB RAM ಮತ್ತು 128GB ಸ್ಟೋರೇಜ್ 18,499 ರೂಗಳಾಗಿವೆ. ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ವೇರಿಯೆಂಟ್ 20,499 ರೂಗಳಾದರೆ ಇದರ ಕೊನೆಯ ವೇರಿಯೆಂಟ್ 8GB RAM ಮತ್ತು 256GB ಸ್ಟೋರೇಜ್ 22,499 ರೂಗಳಿಗೆ ಖರೀದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :